ಆರೋಗ್ಯ ಮತ್ತು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಜೀವನದಲ್ಲೂಂದು ಬಾರಿ ಹಜ್ಜ್ ನಿರ್ವಹಿವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಈ ದೇವಾಜ್ಞೆಯನ್ನು ಧಿಕ್ಕರಿಸುವವನ ಬಗ್ಗೆ ಅಲ್ಲಾಹನ ಅಭಿಶಾಪವಿದೆ ಎಂದು ಪವಿತ್ರ ಕುರ್’ಆನ್’ನಲ್ಲಿ ಸಾರಿ ಹೇಳಲಾಗಿದೆ.
ಹಜ್ಜ್ ನಿರ್ಬಂಧವಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಆ ಬಗ್ಗೆ ಅವಶ್ಯಕವಾದ ಜ್ಞಾನವನ್ನು ಗಳಿಸುವುದು ಕಡ್ಡಾಯವಾಗಿದೆ. ಇಸ್ಲಾಮಿನ ಎಲ್ಲ ಆರಾಧನಾ ಕರ್ಮಗಳಂತೆ ಹಜ್ಜ್’ಗೆ ಕೂಡಾ ಕೆಲವು ನಿಯಮ-ನಿಬಂಧನೆಗಳು ಮತ್ತು ಆಚಾರ ಸಂಪ್ರದಾಯಗಳಿವೆ. ಅದನ್ನು ಹಜ್ಜ್ ನಿರ್ವಹಿಸುವ ಯಾತ್ರಾರ್ಥಿಗಳು ಸರಿಯಾಗಿ ಅರಿತಿರುವುದು ಅತ್ಯವಶ್ಯಕವಾಗಿದೆ.
‘ಹಜ್ಜ್ ಮತ್ತು ಉಮ್ರಾ ಗೈಡ್’ ಎಂಬ ಈ ಕೃತಿಯಲ್ಲಿ ಹಜ್ಜ್’ನ ವಿಧಿ-ವಿದಾನಗಳ ಕುರಿತು ಅಭಿಪ್ರಾಯ ಭಿನ್ನತೆಗೆ ಎಡೆಯಿಲ್ಲದ ರೂಪದಲ್ಲಿ ಅದರ ಅನುಷ್ಠಾನ ಕ್ರಮವನ್ನು ಬಹಳ ಸರಳವಾಗಿ ವಿವರಿಸಲಾಗಿದೆ. ಆದ್ದರಿಂದ ಎಲ್ಲ ಹಜ್ಜ್ ಮತ್ತು ಉಮ್ರಾ ಯಾತ್ರಾರ್ಥಿಗಳು ಇದರಿಂದ ಪೂರ್ಣ ಪ್ರಯೋಜನ ಪಡೆಯಬಹುದಾಗಿದೆ.
• ಮುಖಬೆಲೆ- 70: 00
ಸಂಪರ್ಕಿಸಿರಿ:
9449333496 /7795837394
Shanthi Prakashana
Mangaluru
IslamKannada News Portal
