Home / ವಾರ್ತೆಗಳು / ಭಾರತದಿಂದ ಹಜ್ ಯಾತ್ರೆಗಾಗಿ ಈ ವರಗೆ ಸೌದಿ ತಲುಪಿದವರ ಸಂಖ್ಯೆ 50,000 ದಾಟಿದೆ

ಭಾರತದಿಂದ ಹಜ್ ಯಾತ್ರೆಗಾಗಿ ಈ ವರಗೆ ಸೌದಿ ತಲುಪಿದವರ ಸಂಖ್ಯೆ 50,000 ದಾಟಿದೆ

ಭಾರತದಿಂದ ಹಜ್ ಯಾತ್ರೆಗಾಗಿ ಸೌದಿ ತಲುಪಿದವರ ಸಂಖ್ಯೆ 50,000 ವನ್ನೂ ದಾಟಿದೆ. ಕೇಂದ್ರ ಹಜ್ ಕಮಿಟಿಯ ಮೂಲಕ ಈ ವರೆಗೆ 54,643 ಮಂದಿ 185 ವಿಮಾನಗಳ ಮೂಲಕ ಸೌದಿ ಅರೇಬಿಯ ತಲುಪಿದ್ದಾರೆ ಎಂದು ವರದಿಯಾಗಿದೆ

ಇವರಲ್ಲಿ 34,815 ಮಂದಿ ಮಕ್ಕಾದಲ್ಲಿ ಇಳಿದಿದ್ದಾರೆ. 21,826 ಮಂದಿ ಮದೀನಾದಲ್ಲಿ ತಂಗಿದ್ದಾರೆ. 2435 ಮಂದಿ ಕೇರಳಿಯರು ಇವರಲಿದ್ದಾರೆ.

ಮಹ್ ರಂ ಅಥವಾ ಪುರುಷ ಬಂಧುಗಳ ಸಹಾಯವಿಲ್ಲದೆ ಈ ಬಾರಿ ನಾಲ್ಕು ಸಾವಿರದಷ್ಟು ಮಂದಿ ಮಹಿಳೆಯರು ಹಜ್ ಗೆ ಬರಲಿದ್ದಾರೆ ಅನ್ನುವುದು ಗೊತ್ತಾಗಿದೆ. ಇವರಲ್ಲಿ 2007 ಮಹಿಳೆಯರು ಕೇರಳೀಯರು. ಇವರೆಲ್ಲರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ಮಕ್ಕ ಮತ್ತು ಮದೀನದಲ್ಲಿ ಇವರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …