ಎಲ್ಲ ಕಾಲಗಳಲ್ಲಿಯೂ ದೇವನನ್ನು,ಪರಲೋಕವನ್ನು ಪ್ರವಾದಿಗಳನ್ನು, ನಿರಾಕರಿಸುವವರು ಸಮಾಜದ ಗಣ್ಯರು, ಶ್ರೀಮಂತರು, ಸರದಾರರು ಎಂಬುದೇ ಸತ್ಯ.
ಒಬ್ಬ ಮನುಷ್ಯನಿಗೆ ಆಧ್ಯಾತ್ಮಿಕ ಉನ್ನತಿ, ಆತ್ಮ ನಿಯಂತ್ರಣ, ಸಹನೆಯ ತರಬೇತಿ ಹಜ್ ಕರ್ಮದಲ್ಲಿ ಸಿಗುವಷ್ಟು ಬೇರೆ ಯಾವ ಆರಾಧನೆಯಲ್ಲಿಯೂ ಸಿಗಲಾರದು.
ಅಲ್ಲಿಗೆ ಹೋದ ಬಳಿಕವೂ ಕುಲ ಪ್ರತಿಷ್ಠೆ, ಅಹಂಕಾರ, ಆತ್ಮಪ್ರಶಂಸೆ, ಲೋಕದ ವ್ಯಾಮೋಹ, ಸಂಪತ್ತು ಕೂಡಿಡುವ ಜಿಪುಣತೆ, ಕೆಡುಕುಗಳಿಗೆ ವಾಲುವ ಮನಸ್ಸು, ದೊಡ್ಡಸ್ತಿಕೆ ಇದೆ ಎಂದಾದರೆ ಬೇರೆ ಯಾವುದರಿಂದಲೂ ಅವನನ್ನು ಸರಿಪಡಿಸಲು ಸಾಧ್ಯವಾಗದು ಎಂಬುದು ವಿಧ್ವಾಂಸರ ಅಭಿಪ್ರಾಯ.
ಆಧ್ಯಾತ್ಮಿಕ ತರಬೇತಿಯ ಕೊನೆಯ ಘಟ್ಟವೇ ಹಜ್. ಹಜ್ ಕರ್ಮ ಶ್ರೀಮಂತ(ಸ್ಥಿತಿವಂತ)ರಿಗೆ ಮಾತ್ರ ಖಡ್ಡಾಯ.
ಅರಫಾ ಮೈದಾನದಲ್ಲಿ ಎರಡು ತುಂಡು ಬಟ್ಟೆಯಲ್ಲಿ ಹಾಜಿಗಳು ತಂಗುವ ದೃಶ್ಯ ಮರಣಾನಂತರ ಎಲ್ಲರೂ ದೇವನ ಮುಂದೆ ಹಾಜರಾಗುವ ದೃಶ್ಯವನ್ನು ನೆನಪಿಸುವಂತಿದೆ.
“ಅಂದು ಸೊತ್ತಾಗಲೀ, ಸಂತಾನವಾಗಲೀ ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ.”
“ನಿಷ್ಕಳಂಕ ಹೃದಯದೊಂದಿಗೆ ಅಲ್ಲಾಹನ ಮುಂದೆ ಹಾಜರಾಗುವವನ ಹೊರತು”
(ಕುರ್ ಆನ್)
– ಶಮೀರ ಜಹಾನ್
IslamKannada News Portal
