ಕಳೆದ ಶುಕ್ರವಾರ ಜುಮಾ ನಮಾಝ್ ಮಾಡುವುದಕ್ಕಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಲಕ್ಷಕ್ಕಿಂತಲೂ ಅಧಿಕ ಭಾರತೀಯರು ಸೇರಿದ್ದರು ಎಂದು ವರದಿಯಾಗಿದೆ. ಮಕ್ಕಾದಲ್ಲಿ ಈಗ ತೀವ್ರ ಬಿಸಿಲಿದ್ದು ಈಗಾಗಲೇ ಮಕ್ಕ ಮತ್ತು ಮದೀನದಲ್ಲಿ 10 ಲಕ್ಷಕ್ಕಿಂತ ಅಧಿಕ ಮಂದಿ ಸೇರಿದ್ದಾರೆ ಎಂದು ವರದಿಯಾಗಿದೆ.
1,16,000 ಮಂದಿ ಭಾರತೀಯ ಹಜ್ ಯಾತ್ರಾರ್ಥಿಗಳು ಹರಮ್ ನ ಜುಮಾ ನಮಾಝ್ ನಲ್ಲಿ ಭಾಗಿಯಾಗಿದ್ದಾರೆ. ತೀರ ವಯಸ್ಸಾಗಿರುವ ಹಾಜಿಗಳಲ್ಲಿ ತಮ್ಮ ಹತ್ತಿರದ ಮಸೀದಿಯಲ್ಲಿ ಜುಮಾ ನಮಾಜಿನಲ್ಲಿ ಭಾಗಿಯಾಗಿ ಎಂದು ಕೇಳಿಕೊಳ್ಳಲಾಗಿತ್ತು.
ಹರಮ್ ನಲ್ಲಿ ತೀವ್ರ ರಶ್ ಮತ್ತು ಹೊರಗೆ ತಡೆಯಲಾಗದ ಬಿಸಿಲು ಇರುವುದರಿಂದ ಹೀಗೆ ಕೇಳಿಕೊಳ್ಳಲಾಗಿತ್ತು. ಇದರ ನಡುವೆಯೂ ಇಷ್ಟು ಭಾರಿ ಸಂಖ್ಯೆಯಲ್ಲಿ ಭಾರತೀಯರು ಹರಂನಲ್ಲಿ ಜುಮಾ ನಮಾಜ್ ಮಾಡಿದ್ದಾರೆ
IslamKannada News Portal
