ಹಜ್ ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಅತ್ಯಾಧುನಿಕ ಸುರಕ್ಷತಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಹಾಜಿಗಳಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಉಪಯೋಗ ಮಾಡಲಾಗುತ್ತಿದೆ.
ಅರಫಾಕ್ಕೆ ಹೋಗುವ ದಾರಿಗಳ ಉದ್ದಕ್ಕೂ ಸೇನೆಯನ್ನು ನಿಯೋಜಿಸಲಾಗಿದೆ. ಆಕಾಶದಲ್ಲಿ ಹೆಲಿಕಾಪ್ಟರ್ ಮತ್ತು ಡ್ರೋನ್ ಗಳ ನಿಗಾ ಇರಲಿದೆ. ಯಾರಾದರೂ ಪುಣ್ಯ ಕೇಂದ್ರಕ್ಕೆ ಅತಿಕ್ರಮಣ ನಡೆಸಿ ತೊಂದರೆ ಮಾಡದಂತೆ ನೋಡಿಕೊಳ್ಳುವುದಕ್ಕೆ ಈ ನಿಗಾ ಇಡಲಾಗುತ್ತಿದೆ. ಅರಫಾ ಹಜ್ ನ ಅತಿ ಪ್ರಮುಖ ಕರ್ಮವಾಗಿದ್ದು ಯಾರಿಗೆ ಅರಫಾಕ್ಕೆ ತಲುಪಲು ಸಾಧ್ಯವಾಗುವುದಿಲ್ಲವೋ ಅವರಿಗೆ ಹಜ್ ನಷ್ಟವಾಗುತ್ತದೆ.
ದಾರಿಯಲ್ಲಿ ಜನ ಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳುವುದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಪ್ರಯೋಜನವನ್ನು ಪಡೆಯಲಾಗುತ್ತಿದೆ. ಎಲ್ಲಿ ಅಂತ ಸಮಸ್ಯೆಯಾಗುತ್ತೋ ಅಲ್ಲಿಗೆ ಸೇನೆ ತಲುಪಿ ಹಾಜಿಗಳಿಗೆ ದಾರಿಯನ್ನು ಸುಲಭ ಮಾಡಿ ಕೊಡಲಿದೆ. ಮಿನಾ ಅರಫಾ ಮತ್ತು ಜಂಬ್ರಾತನ ಉದ್ದಕ್ಕೂ ಸೇನೆ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸನ್ನು ನಿಯೋಜಿಸಲಾಗಿದೆ.
IslamKannada News Portal
