Home / ವಾರ್ತೆಗಳು / ಸ್ವೀಡನ್‌ನಲ್ಲಿ ಸ್ವೀಡಿಷ್ ಅನುವಾದದ 1 ಲಕ್ಷ ಕುರ್‌ಆನ್ ಪ್ರತಿಯನ್ನು ವಿತರಿಸುವುದಾಗಿ ಘೋಷಿಸಿದ ಕುವೈತ್ ಸರ್ಕಾರ

ಸ್ವೀಡನ್‌ನಲ್ಲಿ ಸ್ವೀಡಿಷ್ ಅನುವಾದದ 1 ಲಕ್ಷ ಕುರ್‌ಆನ್ ಪ್ರತಿಯನ್ನು ವಿತರಿಸುವುದಾಗಿ ಘೋಷಿಸಿದ ಕುವೈತ್ ಸರ್ಕಾರ

ಕುವೈಟ್: ಸ್ವೀಡಿಷ್ ಭಾಷೆಗೆ ಭಾಷಾಂತರಿಸಿದ ಪವಿತ್ರ ಕುರ್‌ಆನ್‌ನ 1 ಲಕ್ಷ ಪ್ರತಿಗಳನ್ನು ಮುದ್ರಿಸುವ ಯೋಜನೆಯನ್ನು ಕುವೈತ್ ಸರ್ಕಾರವು ಘೋಷಿಸಿದೆ ಎಂದು kuwaittimes.com ವರದಿ ಮಾಡಿದೆ.

ಕಳೆದ ತಿಂಗಳು ಈದುಲ್ ಅಝ್ ಹಾ ಸಂದರ್ಭದಲ್ಲಿ ಸ್ವೀಡನ್‌ನಲ್ಲಿ ವ್ಯಕ್ತಿಯೊಬ್ಬ ಕುರ್‌ಆನನ್ನು ಸುಟ್ಟು ಹಾಕಿದ್ದ. ಕುರ್‌ಆನ್ ಗೆ ಬೆಂಕಿ ಹಚ್ಚಿದ ಪ್ರಕರಣವು ವಿಶ್ವದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕುವೈತ್ ಸರ್ಕಾರವು ಇದರ ಬೆನ್ನಲ್ಲೇ ಈ ಮಹತ್ವದ ಯೋಜನೆಗೆ ಕೈ ಹಾಕಿದೆ.

ಕುವೈತ್ ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಸ್ವೀಡನ್‌ನಲ್ಲಿ ಕುರ್‌ಆನ್ ನ ಪ್ರತಿಗಳನ್ನು ವಿತರಿಸುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ಎಲ್ಲರಲ್ಲಿ ಇಸ್ಲಾಮಿನ ಮೌಲ್ಯ ಮತ್ತು ಸಹಬಾಳ್ವೆಯನ್ನು ಪಸರಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಮುದ್ರಣ ಹಾಗೂ ವಿತರಣೆಯ ಜವಾಬ್ದಾರಿ ವಹಿಸಿರುವ ಅಧಿಕೃತ ಸಂಸ್ಥೆ ತಿಳಿಸಿದೆ.

ಕುವೈತ್ ಸರ್ಕಾರದ ನಿರ್ದೇಶಗಳನ್ನು ಕಾರ್ಯಗತಗೊಳಿಸಲು
ಸಂಸ್ಥೆಯು ಕ್ರಮಕೈಗೊಳ್ಳಲು ಪ್ರಾರಂಭಿಸಿದೆ ಎಂದು
ಕುವೈತ್‌ನಲ್ಲಿ ಕುರ್‌ಆನ್ ಮುದ್ರಿಸುವ ಮತ್ತು ಪ್ರಕಟಿಸುವ
ಪ್ರಾಧಿಕಾರದ ಮುಖ್ಯಸ್ಥ ಫಹದ್ ಅಲ್-ದೈಹಾನಿ ಹೇಳಿದ್ದಾರೆ.

ಈ ಮೂಲಕ ಇಸ್ಲಾಮೀ ನಂಬಿಕೆಯ ಸಹಿಷ್ಣುತೆಯನ್ನು ದೃಢೀಕರಿಸುವ ಗುರಿಯನ್ನು ಹೊಂದಿದೆ . ಪವಿತ್ರ ಕುರ್ ಆನ್
ಸಹಿಷ್ಣುತೆ, ಶಾಂತಿ, ಕರುಣೆಯನ್ನು ಪ್ರತಿಪಾದಿಸುತ್ತದೆ ಮತ್ತು ದ್ವೇಷ, ಉಗ್ರವಾದ ಮತ್ತು ಧಾರ್ಮಿಕ ಮತಾಂಧತೆಯನ್ನು ತಿರಸ್ಕರಿಸುತ್ತದೆ’ ಎಂದು ಅಲ್-ದೈಹಾನಿ ಹೇಳಿದ್ದಾರೆ.

ಪವಿತ್ರ ಕುರ್‌ಆನ್ ಜತೆಗೆ ಪ್ರವಾದಿ ಮುಹಮ್ಮದ್ ರ ಪ್ರವಾದಿ ವಚನಗಳನ್ನು ಮತ್ತು ಅವರ ವೈಜ್ಞಾನಿಕತೆಯ ಬಗ್ಗೆಯೂ ಮುದ್ರಿಸಿ, ವಿತರಿಸುವುದಾಗಿ kuwaittimes.com ವರದಿ ಮಾಡಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …