Home / ವಾರ್ತೆಗಳು / ಕಾಬಾಕ್ಕೆ ಹೊಸ ಬಟ್ಟೆಯ ಹೊದಿಕೆ : ಕಿಸ್ವಾದ ಹಿನ್ನೆಲೆ?

ಕಾಬಾಕ್ಕೆ ಹೊಸ ಬಟ್ಟೆಯ ಹೊದಿಕೆ : ಕಿಸ್ವಾದ ಹಿನ್ನೆಲೆ?

ಮುಹರಂ ಒಂದರಂದು ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆ ದುಲ್ಹಜ್ 9ರಂದು ಹಾಜಿಗಳು ಅರಫಾದಲ್ಲಿ ಸೇರುವ ವೇಳೆ ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಕ್ರಮವನ್ನು ಬದಲಾಯಿಸಲಾಗಿದ್ದು ಮುಹರಂ ಒಂದರಂದು ಹೊಸ ಬಟ್ಟೆಯನ್ನು ಹೊದಿಸುವ ಕ್ರಮ ಜಾರಿಗೆ ಬಂದಿದೆ.

ಈ ಬಟ್ಟೆಗೆ ಕಿಸ್ವ ಎಂದು ಹೆಸರು. ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಕಾಂಪ್ಲೆಕ್ಸ್ ನಲ್ಲಿ 200 ಕ್ಕಿಂತಲೂ ಅಧಿಕ ತಜ್ಞ ಕಾರ್ಮಿಕರು 10 ತಿಂಗಳ ಕಾಲ ಶ್ರಮವಹಿಸಿ ಈ ಕಿಸ್ವಾವನ್ನು ತಯಾರಿಸಿದ್ದಾರೆ. ಇದನ್ನು ರೇಷ್ಮೆ ಬಟ್ಟೆಯಿಂದ ತಯಾರಿಸಲಾಗಿದೆ. 670 ಕಿಲೋ ಶುದ್ಧ ರೇಷ್ಮೆ ಬಟ್ಟೆ, 120 ಕಿಲೋ ಬಂಗಾರ, 100 ಕಿಲೋ ಬೆಳ್ಳಿಯನ್ನು ಈ ಕಿಸ್ವ ತಯಾರಿಕೆಗೆ ಬಳಸಲಾಗಿದೆ.. ಬಂಗಾರ ಮತ್ತು ಬೆಳ್ಳಿಯ ನೂಲುಗಳನ್ನು ಬಳಸಿ ಕಿಸ್ವಾದ ಅಂಚಿನಲ್ಲಿ ಕುರಾನ್ ನ ಸೂಕ್ತಗಳನ್ನು ಬಿಡಿಸಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …