Home / ಲೇಖನಗಳು / ಇಸ್ಲಾಮ್ ಸ್ವೀಕಾರ ಮತ್ತು ವಿರೋಧ

ಇಸ್ಲಾಮ್ ಸ್ವೀಕಾರ ಮತ್ತು ವಿರೋಧ

✍️ಜಿ.ಕೆ. ಎಡನಾಟಕರ

ಮತಾಂತರವು ಇಂದು ದೊಡ್ಡ ಚರ್ಚಾ ವಿಷಯವಾಗಿದೆ. ಮತಾಂತರ ಎಲ್ಲಾ ಸಮುದಾಯಗಳಲ್ಲೂ ಎಲ್ಲಾ ಕಾಲದಲ್ಲಿಯೂ ನಡೆದಿದೆ. ಇಂದೂ ನಡೆಯುತ್ತಲೇ ಇದೆ. ಅದರಲ್ಲಿ ಇಸ್ಲಾಮ್ ಸ್ವೀಕಾರವೆಂಬುದು ಎಲ್ಲಾ ಕಾಲದಲ್ಲೂ ಕಾವೇರಿದ ಚರ್ಚೆಗಳಿಗೆ ಕಾರಣವಾಗುತ್ತದೆ.

ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಸ್ವೀಕರಿಸಿದರು. ತನ್ನ ಬದುಕಿನ ಅನುಭವವು ಅವರನ್ನು ಅದಕ್ಕೆ ಪ್ರೇರೇಪಿಸಿತ್ತು. ಆದರೆ ಡಾ| ಸತ್ಯನಾಥ್ ಡಾ| ಸಾದಿಕ್ ಆದಾಗ ಮತ್ತು ಡಾ| ಅಖಿಲ ಡಾ| ಹಾದಿಯಾ ಆದಾಗ ಉಂಟಾದ ಕಂಪನಗಳನ್ನು ಅದು ಸೃಷ್ಟಿಸಿಲ್ಲ. ಉತ್ತರ ಭಾರತ ಮತ್ತು ಇತರೆಡೆ ಸಾವಿರಾರು ಜನರು ಕ್ರೈಸ್ತರಾದಾಗಲೂ ಈ ಕಂಪನಗಳು ಇರುವುದಿಲ್ಲ.

ಇಲ್ಲಿ ಇಸ್ಲಾಮ್ ಸ್ವೀಕರಿಸುವುದೇ ದೊಡ್ಡ ಸಮಸ್ಯೆ. ಇದೊಂದು ಜಾಗತಿಕ ವಿದ್ಯಮಾನ. ಇದಕ್ಕೆ ಕಾರಣವೇನು ಎಂದು ಆಲೋಚಿಸಿದಾಗ ಇಸ್ಲಾಮಿನ ಸ್ವರೂಪವೇ ಕಾರಣ ಎಂದು ಅರ್ಥವಾಗುತ್ತದೆ.

ಇದರಲ್ಲಿ ಮುಖ್ಯವಾದುದು ಪ್ರಬಲವಾದ ಆದರ್ಶ. ಇಸ್ಲಾಮ್ ತನ್ನ ಆದರ್ಶಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಒಬ್ಬ ವ್ಯಕ್ತಿಗೆ ಒಬ್ಬನೇ ತಂದೆಯಿರುವಂತೆ ಸೃಷ್ಟಿಗಳಿಗೆ ಒಬ್ಬನೇ ದೇವ ಇರುವುದು. ಆ ಸೃಷ್ಟಿಕರ್ತನೇ ಮನುಷ್ಯನ ನಿಜವಾದ ಒಡೆಯ. ಈ ಮೂಲಭೂತ ವಿಶ್ವಾಸಕ್ಕೆ ನೀರನ್ನು ಸೇರಿಸದೆ ಮನುಷ್ಯ ಆ ಸೃಷ್ಟಿಕರ್ತನಿಗೆ ಅಧೀನನಾಗಿ ಬದುಕಬೇಕು. ಇಸ್ಲಾಮ್ ಈ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ.

ಒಬ್ಬನು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರೆ ಅವನ ಜೀವನ ಬದಲಾಗುತ್ತದೆ. ಅದು ಧರ್ಮದ (ಸಮುದಾಯ) ಬದಲಾವಣೆಯಲ್ಲ. ಮನಪರಿವರ್ತನೆ, ಹೃದಯದ ಬದಲಾವಣೆ. ಇದರೊಂದಿಗೆ ಜೀವನದ ಪ್ರಯಾಣದ ಪ್ರತಿ ತಿರುವಿನಲ್ಲೂ ದೈವಿಕ ಭೋದನೆಗಳ ಹಸ್ತಕ್ಷೇಪ ಆರಂಭವಾಗುತ್ತದೆ.

ಇಸ್ಲಾಮ್ ದೈವಿಕವಾಗಿರುವುದರಿಂದ ಮನುಷ್ಯನು ಕೆಡುಕಾಗಿ ಕಾಣುವ, ಕೆಡುಕಿನೆಡೆಗೆ ಸಾಗಿಸುವ ಎಲ್ಲದರ ವಿರುದ್ಧವೂ ಅದು ಬೆರಳು ತೋರಿಸುತ್ತದೆ. ಇಸ್ಲಾಮ್ ಮನುಷ್ಯನಿಗೆ ಒಳಿತಿನ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಇದು ಇಸ್ಲಾಮಿನ ಮೇಲೆ ದಾಳಿ ನಡೆಯಲು ಇರುವ ಕಾರಣಗಳಲ್ಲಿ ಒಂದನೆಯದು. ಕಾರಣವೇನೆಂದರೆ, ಕೆಡುಕು ಒಳಿತಿನ ಶತ್ರುವಾಗಿದೆ. ‘ಸರಿ’ಯ ಶತ್ರುವಾಗಿದೆ ತಪ್ಪು; ಸುಳ್ಳು ಸತ್ಯದ ಶತ್ರು.
ಓರ್ವ ಮದ್ಯಪಾನಿಯು ಇಸ್ಲಾಮ್ ಅನ್ನು ಆದರ್ಶವಾಗಿ ಸ್ವೀಕರಿಸಿದರೆ ಆತ ಮದ್ಯಪಾನ ತ್ಯಜಿಸಬೇಕು. ಒಂದು ಕುಟುಂಬವು ಸ್ವೀಕರಿಸಿದರೆ ಆ ಕುಟುಂಬದಲ್ಲಿ ಮದ್ಯಕ್ಕೆ ಅನುಮತಿಯಿಲ್ಲ. ಅಂತಹ ಕುಟುಂಬಗಳು ಸೇರಿದ ಸಮೂಹದಲ್ಲೂ ಮದ್ಯಪಾನಕ್ಕೆ ಸ್ಥಾನವಿಲ್ಲ. ಒಂದು ರಾಷ್ಟ್ರವು ಇಸ್ಲಾಮನ್ನು ಆದರ್ಶವಾಗಿ ಸ್ವೀಕರಿಸಿದರೆ ಸರಕಾರವು ಮದ್ಯ ಮಾರಾಟವನ್ನು ನಿಷೇಧಿಸಬೇಕಾಗುತ್ತದೆ. ಇಸ್ಲಾಮೀ ಸಂಸ್ಕೃತಿಯ ಸ್ವರೂಪವೇ ಅಂತಹದ್ದು. ಆದ್ದರಿಂದಲೇ, ಮುಸ್ಲಿಮ್ ಸಮುದಾಯದಲ್ಲಿ ಕುಡುಕನಿದ್ದರೆ ಆತನಿಗೆ ತನ್ನ ಕುಟುಂಬದವರ ಅಥವಾ ಮುಸ್ಲಿಮ್ ಸಮುದಾಯದ ಅಂಗೀಕಾರ ದೊರೆಯುವುದಿಲ್ಲ. ಇದು ಮದ್ಯಪಾನ ಮತ್ತು ಮಾದಕ ದ್ರವ್ಯಗಳಂತಹ ಎಲ್ಲ ಅನಿಷ್ಟಗಳ ಬಗ್ಗೆ ಇಸ್ಲಾಮಿನ ಧೋರಣೆಯಾಗಿದೆ.

ಮನುಷ್ಯನನ್ನು ಕೆಡುಕಿನೆಡೆಗೆ ಕೊಂಡೊಯ್ಯುವ ಜೂಜಾಟವನ್ನು ಇಸ್ಲಾಮ್ ಪಾಪವೆಂದು ಪರಿಗಣಿಸುತ್ತದೆ. ವ್ಯಭಿಚಾರ, ಬಡ್ಡಿ, ದರೋಡೆ, ಕೊಲೆ, ಕೋಮುವಾದ, ಜಾತೀಯತೆ ಇಂತಹ ಎಲ್ಲ ಅನಿಷ್ಟಗಳ ಕುರಿತು ಇಸ್ಲಾಮಿನ ಧೋರಣೆ ಇದುವೇ ಆಗಿದೆ. ಇಸ್ಲಾಮ್ ಮಾನವ ಸಮಾಜವನ್ನು ಕಾಡುವ ಎಲ್ಲ ಅನಿಷ್ಟಗಳ ವಿರುದ್ಧವಾಗಿದೆ. ಇಂತಹ ಅನಿಷ್ಟಗಳನ್ನು ಪ್ರತಿಪಾದಿಸುವವರು ಮತ್ತು ಅನುಸರಿಸುವವರು ಇಸ್ಲಾಮಿನ ಶತ್ರುಗಳಾಗುವುದು ಸಹಜ.

ನಾವು ಇಸ್ಲಾಮಿನ ಕುರಿತ ಟೀಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥ ಮಾಡಿಕೊಳ್ಳಬಹುದಾದ ಇನ್ನೊಂದು ವಿಷಯವಿದೆ. ಮನುಷ್ಯನ ಅಸ್ತಿತ್ವವನ್ನು ಕಾಡುವ, ಮನುಷ್ಯನನ್ನು ಕೆಡುಕಿನೆಡೆಗೆ ಒಯ್ಯುವ ಕೆಡುಕನ್ನು ಪ್ರಚಾರ ಮಾಡುತ್ತದೆ ಎಂದು ಧರ್ಮಗ್ರಂಥವನ್ನು ಉಲ್ಲೇಖಿಸಿ ಟೀಕೆ ಮಾಡಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಕೇಳಿ ಬರುವ ವಿಮರ್ಶೆಯೇನೆಂದರೆ, ಮಾನವನ ಸ್ವಸ್ಥತೆಯನ್ನು ಕಾಡುವ ಉಗ್ರವಾದದ ಕುರಿತು. ಅದರಲ್ಲೂ ಈಗ ಬದಲಾವಣೆ ಯಾಗಿರುವುದು ಗಮನಾರ್ಹ.

ಇಸ್ಲಾಮಿನ ಕುರಿತು ಮುಸ್ಲಿಮೇತರರನ್ನು ಒಳಗೊಂಡ ಚರ್ಚೆಗಳಲ್ಲಿ ಉಗ್ರವಾದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಬರುತ್ತವೆ ಎಂಬುದು ಸಾಮಾನ್ಯ ಅನುಭವ. ಆದರೆ ಇತ್ತೀಚೆಗಿನ ಯಾವುದೇ ಕಾರ್ಯಕ್ರಮಗಳಲ್ಲೂ ಈ ಪ್ರಶ್ನೆ ಬರುತ್ತಿಲ್ಲ ಎಂಬುದು ಆಶ್ಚರ್ಯಕರವಾಗಿ ತೋರುತ್ತದೆ. ಇದು ಇಸ್ಲಾಮಿನ ಶತ್ರುಗಳ ಅಪಪ್ರಚಾರವೆಂದು ಜನರು ತಿಳಿಯಲು ಆರಂಭಿಸಿದ್ದಾರೆ. ಹಾಗಿದ್ದರೂ ಇಸ್ಲಾಮ್ ಧರ್ಮವೇ ಸಮಸ್ಯೆ. ಇಸ್ಲಾಮ್ ಎಂದರೆ ಅಪಾಯ!

ಯಾರಿಗೆ? ಎಲ್ಲ ದುಷ್ಟಶಕ್ತಿಗಳಿಗೆ ಮತ್ತು ಅದರ ವಾಹಕರಿಗೆ!
ಇಸ್ಲಾಮಿನ ಅತ್ಯಂತ ದೊಡ್ಡ ವಿಶೇಷತೆಯೇನೆಂದರೆ, ಆದರ್ಶಗಳಲ್ಲಿ ಸ್ಥಿರತೆ ಮತ್ತು ಮಾನವೀಯತೆಯಲ್ಲಿ ಉದಾರತೆಯಾಗಿದೆ. ಇಸ್ಲಾಮಿನ ಈ ನಿಲುವಿನ ಪ್ರಭಾವ ಅಥವಾ ಪರಿಣಾಮವು ಸ್ಪಷ್ಟವಾಗಿ ಕಂಡು ಬರುತ್ತದೆ. ಒಬ್ಬರು ನಿಜವಾದ ಇಸ್ಲಾಮ್ ಧರ್ಮವನ್ನು ಅರ್ಥ ಮಾಡಿಕೊಂಡರೆ ಮತ್ತು ಮನಸ್ಸಿನ ಬದಲಾವಣೆಗೆ ಒಳಗಾದರೆ ಅವರು ಮಾನವೀಯತೆಯ ಪ್ರೇಮಿಯಾಗು ತ್ತಾರೆ. ಇಸ್ಲಾಮ್ ಧರ್ಮವನ್ನು ಸ್ವೀಕರಿಸುವಾಗ ಹೆಚ್ಚಿನ ಕಂಪನಗಳು ಏಕೆ ಉಂಟಾಗುತ್ತವೆ ಎಂಬುದಕ್ಕೆ ಕೆಲವು ಕಾರಣಗಳು ಇವೇ ಆಗಿವೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …