Home / ವಾರ್ತೆಗಳು / ಯುಎಇಯಲ್ಲಿ ಜನವರಿ ಒಂದರಿಂದ ರಜಬ್ ಆರಂಭ: ರಮಝಾನ್ ಗೆ ಇನ್ನಿರುವುದು ಎರಡೇ ತಿಂಗಳು

ಯುಎಇಯಲ್ಲಿ ಜನವರಿ ಒಂದರಿಂದ ರಜಬ್ ಆರಂಭ: ರಮಝಾನ್ ಗೆ ಇನ್ನಿರುವುದು ಎರಡೇ ತಿಂಗಳು

ಇಸ್ಲಾಮೀ ಕ್ಯಾಲೆಂಡರ್ ನ ರಜಬ್ ತಿಂಗಳ ಪ್ರಾರಂಭದ ಸೂಚಕವಾಗಿ ಬಾಲಚಂದ್ರ ಕಾಣಿಸಿಕೊಂಡಿದ್ದಾನೆ ಎಂದು ಗಲ್ಫ್ ರಾಷ್ಟ್ರಗಳ ವರದಿ ತಿಳಿಸಿದೆ.

ಜನವರಿ 1 ಬುಧವಾರದಂದೇ ರಜಬ್ ತಿಂಗಳ ಒಂದನೇ ದಿನಾಂಕ ಪ್ರಾರಂಭವಾಗಿದೆ ಎಂದು ಯುಎಇ ತಿಳಿಸಿದೆ. ಇದರಿಂದಾಗಿ ಮುಸ್ಲಿಂ ಸಮುದಾಯ ಬಹು ನಿರೀಕ್ಷೆಯಿಂದ ಕಾಯುವ ರಮಝಾನ್ ತಿಂಗಳಿಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿವೆ.

ಡಿಸೆಂಬರ್ 31 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಯು ಎ ಇ ಅಸ್ಟ್ರಾನಮಿ ಸೆಂಟರ್ ಈ ವಿಷಯವನ್ನು ಬಹಿರಂಗಪಡಿಸಿದೆ ಮತ್ತು ಬಾಲಚಂದ್ರ ಕಾಣಿಸಿಕೊಂಡಿರುವ ದೃಶ್ಯವನ್ನು ಹಂಚಿಕೊಂಡಿದೆ.

ರಜಬ್ ಮತ್ತು ಶಅಬಾನ್ ತಿಂಗಳು ಕಳೆದ ಬಳಿಕ ಉಪವಾಸದ ತಿಂಗಳಾದ ರಮಝಾನ್ ಆಗಮಿಸುತ್ತದೆ. ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಮಝಾನ್ ತಿಂಗಳು ಪ್ರಾರಂಭವಾಗುತ್ತದೆ ಎಂದು ಅಂದುಕೊಳ್ಳಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …