ಸೌದಿ ಅರೇಬಿಯಾದ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಈಗಾಗಲೇ ರಮಝಾನ್ ಸ್ವಾಗತಕ್ಕೆ ಸಿದ್ಧವಾಗಿವೆ. ಮಕ್ಕಾದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಭವಿಯಲ್ಲಿ ರಮಝಾನ್ ಸಮಯದಲ್ಲಿ ಹಗಲೂ -ರಾತ್ರಿ ಅಸಂಖ್ಯ ಮಂದಿ ಸೇರುತ್ತಾರೆ. ಅಲ್ಲಿ ಉಪವಾಸ ಪಾರಣೆ ಮಾಡುತ್ತಾರೆ. ನಮಾಝ್ ಮಾಡುತ್ತಾರೆ. ಹಾಗೆಯೇ ತರಾವೀಹ್ ನಮಾಝ್ ಮಾಡುತ್ತಾರೆ. ತಹಜ್ಜುದ್ ನಮಾಝ್ ಮಾಡುತ್ತಾರೆ ಇಲ್ಲಿ ಉಪವಾಸ ಪಾರಣೆ ಮಾಡುವುದರಿಂದ ಅಧಿಕ ಪುಣ್ಯಗಳನ್ನ ಭಕ್ತರು ನಿರೀಕ್ಷಿಸುತ್ತಾರೆ.
ಈ ಕಾರಣದಿಂದಲೇ ಜಾಗತಿಕವಾಗಿ ಮುಸ್ಲಿಮರು ರಮಝಾನ್ ಸಮಯದಲ್ಲಿ ಮಕ್ಕ ಮತ್ತು ಮದೀನಾದ ಹರಂಗಳಿಗೆ ಭೇಟಿ ಕೊಡುತ್ತಾರೆ. ಅಲ್ಲಿ ನಮಾಝ್ ಮಾಡಿ ತೃಪ್ತಿಪಡುತ್ತಾರೆ
ಇದೀಗ ಮಕ್ಕದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ತರಾವೀಹ್ ನಮಾಝ್ ಗೆ ಮತ್ತು ತಹಜ್ಜುದ್ ನಮಾಝ್ ಗೆ ನೇತೃತ್ವ ಕೊಡುವ ಇಮಾಮರು ಯಾರು ಅನ್ನುವುದನ್ನು ಸೌದಿ ಅರೇಬಿಯಾ ಘೋಷಿಸಿದೆ.
ಮುಖ್ಯವಾಗಿ ಎರಡೂ ಹರಂಗಳ ಇಮಾಮರಿಗೆ ಬಹಳ ಮಹತ್ವ ಇದೆ. ಅವರ ನೇತೃತ್ವದಲ್ಲಿ ನಮಾಝ್ ಮಾಡಬಯಸುವ ಅಸಂಖ್ಯ ಮಂದಿ ಜಾಗತಿಕವಾಗಿಯೇ ಇದ್ದಾರೆ.
ಇದೀಗ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ತರಾವೀಹ್ ಮತ್ತು ತಹಜ್ಜುದ್ ನಮಾಝ್ ಗೆ ನೇತೃತ್ವವನ್ನು ಡಾಕ್ಟರ್ ಅಬ್ದುರ್ರಹ್ಮಾನ್ ಅಲ್ ಸುದೈಸಿ ನೇತೃತ್ವ ನೀಡಲಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಅವರ ಜೊತೆ ಡಾಕ್ಟರ್ ಮಾಹಿರ್ ಅಲ್ ಮುಹೈಕಲಿ, ಡಾಕ್ಟರ್ ಅಬ್ದುಲ್ಲಾ ಅಲ್ ಜುಹಾನಿ, ಡಾಕ್ಟರ್ ಬದರ್ ಬಲೀಲಾ, ಡಾಕ್ಟರ್ ಯಾಸಿರ್ ಅಲ್ ದೋಸಾರಿ, ಡಾಕ್ಟರ್ ಬದರ್ ಅಲ್ ತುರ್ಕಿ, ಡಾಕ್ಟರ್ ಅಲ್ ವಲೀದ್ ಅಲ್ ಶಂಸಾನ್ ಮುಂತಾದವರು ತರಾವೀಹ ನಮಾಝ್ ಮತ್ತು ತಹಜ್ಜುದ್ ನಮಾಝ್ ಗೆ ನೇತೃತ್ವ ನೀಡುತ್ತಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಮದೀನಾದ ಮಸ್ಜಿದುಲ್ ಹರಾಮಿನಲ್ಲಿ ಡಾಕ್ಟರ್ ಅಬ್ದುಲ್ ಮುಹ್ ಸಿನ್ ಅಲ್ ಖಾಸಿಂ ಅವರು ನೇತೃತ್ವ ನೀಡಲಿದ್ದಾರೆ. ಅವರ ಜೊತೆಗೆ ಡಾ. ಸ್ವಾಲಿಹ್ ಅಲ್ ಬದೀರ್, ಡಾಕ್ಟರ್ ಅಬ್ದುಲ್ಲ ಅಲ್ ಬು ಅಹ್ ಜಾನ್, ಶೈಖ್ ಅಹ್ಮದ್ ಅಲ್ ತಾಲಿಬ್ ಹು ಮೈದ್, ಡಾಕ್ಟರ್ ಖಾಲಿದ್ ಅಲ್ ಮುಹನ್ನ, ಡಾಕ್ಟರ್ ಅಹಮ್ಮದ್ ಅಲ್ ಹುದೈಫಿ, ಡಾಕ್ಟರ್ ಮುಹಮ್ಮದ್ ಅಲ್ ಬರ್ ಹಜಿ, ಡಾಕ್ಟರ್ ಅಬ್ದುಲ್ಲಾ ಅಲ್ ಕರಾಫಿ ಮುಂತಾದವರು ನೇತೃತ್ವ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
ಈ ತಿಂಗಳ ಫೆಬ್ರವರಿ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಜಾಗತಿಕವಾಗಿಯೇ ಉಪವಾಸ ವೃತ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮುಸ್ಲಿಮರ ದಿನಚರಿಯಲ್ಲಿ ಭಾರಿ ದೊಡ್ಡ ಬದಲಾವಣೆ ಆಗುತ್ತದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಅನ್ನ ಆಹಾರ ನೀರನ್ನು ತ್ಯಜಿಸುವ ಮುಸ್ಲಿಮರು ಸಂಜೆ ಉಪವಾಸ ಪಾರಣೆ ಮಾಡಿ ಬಳಿಕ ಮಸೀದಿಯಲ್ಲಿ ವಿಶೇಷ ನಮಾಝ್ ನಿರ್ವಹಿಸುತ್ತಾರೆ. ಈ ಮೂಲಕ ಹಗಲು ಮತ್ತು ರಾತ್ರಿಯಲ್ಲಿ ಅತ್ಯಂತ ಹೆಚ್ಚು ಚಟುವಟಿಕೆಯಲ್ಲಿ ಇರುತ್ತಾರೆ.
IslamKannada News Portal
