Home / ವಾರ್ತೆಗಳು / ಯಹೂದಿ ಕುಟುಂಬವನ್ನು ರಕ್ಷಿಸಿದ ಮುಸ್ಲಿಂ ಮಹಿಳೆ – ವೀಡಿಯೊ

ಯಹೂದಿ ಕುಟುಂಬವನ್ನು ರಕ್ಷಿಸಿದ ಮುಸ್ಲಿಂ ಮಹಿಳೆ – ವೀಡಿಯೊ

ಮುಸ್ಲಿಂ ಮಹಿಳೆ ಅಸ್ಮಾ ಶುವೇಕ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಹೂದಿ ಕುಟುಂಬದ ನೆರವಿಗೆ ಬಂದು ಹಲ್ಲೆಯಿಂದ ರಕ್ಷಿಸಿದ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಜನಾಂಗೀಯ ವಿರೋಧಿಗಳಾದ ಕೆಲವರು ಯಹೂದಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯ ಪ್ರವೇಶಿಸಿದ ಅಸ್ಮಾ ಅವರನ್ನು ಅಕ್ರಮದಿಂದ ಹಿಂಜರಿಯುವಂತೆ ಮಾಡಿದರು. ರೈಲಿನಲ್ಲಿ ಒಬ್ಬ ವ್ಯಕ್ತಿ ಯಹೂದಿ ವಿರೋಧಿ ಬೈಬಲ್ ಓದುತ್ತಿದ್ದ ಮತ್ತು ಯಹೂದಿ ತಂದೆಯ ಮೇಲೆ ಉದ್ರಿಕ್ತಗೊಂಡಿದ್ದ. ಆಗ ಅಸ್ಮಾ ಅವನನ್ನು ಸಾಂತ್ವನಗೊಳಿಸಲು ಯತ್ನಿಸಿದರು. ಪರಿಸ್ಥಿತಿ ಉದ್ರಿಕ್ತಗೊಳ್ಳದೆ ನೋಡಿದರು.

ಘಟನೆಯ ನಂತರ ಯಹೂದಿ ತಂದೆ ಅಸ್ಮಾರಿಗೆ ಕೃತಜ್ಞತೆ ಅರ್ಪಿಸಿದ್ದರು. ಜನಾಂಗೀಯ ಉದ್ರಿಕ್ತತೆಗೆ ಅವಕಾಶವಾಗದಂತೆ ನೋಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ. ನಂತರ ಜನಾಂಗೀಯ ಅವಹೇಳನ ಮಾಡಿ ತಂದೆ ಮಗುವನ್ನು ಅಪಮಾನಿಸಿದ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ. ಇದೀಗ ಅಸ್ಮಾರ ಕುರಿತು ಟ್ವಿಟರ್‍ ನಲ್ಲಿ ಸಾರ್ವತ್ರಿಕ ಅಭಿನಂದೆಗಳ ಸುರಿಮಳೆಯಾಗುತ್ತಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …