ಬಿಹಾರ, ಡಿ.2: ಬಿಹಾರದಲ್ಲಿ ಜಡ್ಜ್ ಪರೀಕ್ಷೆಯಲ್ಲಿ 22 ಮುಸ್ಲಿಮ್ ಅಭ್ಯರ್ಥಿಗಳು ಗೆದ್ದು ಜಡ್ಜ್ ಆಗಿದ್ದಾರೆ. ಇವರಲ್ಲಿ ಏಳು ಯುವತಿಯರೂ ಸೇರಿದ್ದಾರೆ. ಎಲ್ಲರಿಗಿಂತ ಉನ್ನತ ರಾಂಕ್ ನ್ನು ಮುಸ್ಲಿಂ ಕ್ಯಾಂಡಿಡೇಟ್‍ಗಳು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸನಮ್ ಹಯಾತ್‍ಗೆ 10ನೇ ರಾಂಕ್ ಇದೆ. ಉತ್ತರ ಪ್ರದೇಶದಲ್ಲಿ 38 ಮುಸ್ಲಿಮರು ಜಡ್ಜ್ ಆಗಿ ನ್ಯಾಯಾಂಗ ಸೇವೆಗೆ ದಾಖಲಾಗಿದ್ದು ಇವರಲ್ಲಿ ಹದಿನೆಂಟು ಯುವತಿಯರೂ ಇದ್ದಾರೆ.
ಇತ್ತೀಚೆಗೆ ರಾಜಸ್ತಾನದಲ್ಲಿ ಆರು ಮುಸ್ಲಿಮರು ಜಡ್ಜ್ ಆಗಿದ್ದರು. ಇವರಲ್ಲಿ ಐವರು ಹುಡುಗಿಯರಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿಯೂ ಮುಸ್ಲಿಂ ಪುರುಷರಿಗಿಂತ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಬಿಹಾರದಂತಹ ಹಿಂದುಳಿದ ರಾಜ್ಯದಲ್ಲಿಯೂ ಮಸ್ಲಿಂ ಮಹಿಳೆಯರು ಉನ್ನತ ಶಿಕ್ಷಣ ಗಳಿಸುತ್ತಿರುವುದು ಗಮನಾರ್ಹ ಸಾಧನೆಯಾಗಿದೆ.
IslamKannada News Portal
