Home / ಲೇಖನಗಳು / ಪ್ರಾಣಿ ಬಲಿ ಮತ್ತು ವಾದ

ಪ್ರಾಣಿ ಬಲಿ ಮತ್ತು ವಾದ

ಟಿ .ಕೆ.ಎಮ್. ಇಕ್ಬಾಲ್

ಎಂದಿನಂತೆ ಈ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಧರ್ಮದ ಪ್ರಾಣಿ ಬಲಿಯೇ ಪ್ರಮುಖ ಚರ್ಚೆಯಾಗಿದೆ. ಹಬ್ಬದ ದಿನದಂದು ಕಡಿಯಲ್ಪಡುವ ಕುರಿಗಳಿಗೆ ಶೋಕ ಕವಿತೆಗಳನ್ನು ಬರೆಯುವವರೂ ಕಡಿಮೆಯಲ್ಲ. ಇಸ್ಲಾಮ್ ಕ್ರೌರ್ಯದ ಧರ್ಮ ಮತ್ತು ಮುಸ್ಲಿಮರು ಅನಾಗರಿಕರು ಎಂದು ಬಿಂಬಿಸಲು ಅವಕಾಶಕ್ಕಾಗಿ ಕಾಯುವ ವರ್ಗವಿದೆ. ಈ ಇಸ್ಲಾಮೋಫೋಬ್‌ಗಳಲ್ಲಿ ದನದ ಮಾಂಸವನ್ನು ಮುಟ್ಟಿದ್ದಕ್ಕಾಗಿ ಜನರನ್ನು ಹೊಡೆದು ಸಾಯಿಸುವ ಕ್ರೂರಿಗಳೂ ಇದ್ದಾರೆ. ವಂಶ ಹತ್ಯೆಯನ್ನು ತನ್ನ ಸಿದ್ಧಾಂತವಾಗಿಸಿದ ಇನ್ನೊಂದು ವಿಭಾಗವೂ ಇದೆ. ಬಲಿ ಕರ್ಮದ ಧಾರ್ಮಿಕ ಆಚರಣೆಗೆ ವಿರುದ್ಧವಾಗಿರುವ ಆಧುನಿಕತಾವಾದಿಗಳು. ಅವರಲ್ಲಿ ಮುಸ್ಲಿಂ ಉಪವರ್ಗವಿದೆ.

ಪ್ರಾಣಿ ಬಲಿ ಇಸ್ಲಾಮ್‌ನಲ್ಲಿಲ್ಲ ಎಂದು ಹೇಳಲು ಲಿಬರಲ್ ಅಥವಾ ಸುಧಾರಣಾವಾದಿಗಳು ಹೆಣಗಾಡುತ್ತಾರೆ. ವಿವಿಧ ಕಾರಣಗಳಿಗಾಗಿ ಇಸ್ಲಾಮ್ ಧರ್ಮವನ್ನು ನೇರವಾಗಿ ವಿರೋಧಿಸಲು ಆಸಕ್ತಿಯಿಲ್ಲದವರು ತಮ್ಮ ಸ್ವಂತ ತರ್ಕಕ್ಕೆ ಅನುಗುಣವಾಗಿ ಇಸ್ಲಾಮಿಕ್ ಕಾನೂನುಗಳನ್ನು ಅರ್ಥೈಸುವ ಮತ್ತು ಮಾರ್ಪಡಿಸುವ ಮೂಲಕ ತಮ್ಮ ಉದಾರವಾದ ಕಾಳಜಿಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ.

ವಿಚಾರವಾದಿಗಳಿಂದ ಹಿಡಿದು ಸಂಘಪರಿವಾರದ ಸೈಬರ್ ವಾರಿಯರ್‌ಗಳ ವರೆಗಿನ ಇಸ್ಲಾಮೋಫೋಬ್‌ಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಉಪವಾಸವಿರಲಿ, ಹಬ್ಬವಿರಲಿ, ಇಸ್ಲಾಮ್ ಮತ್ತು ಮುಸ್ಲಿಮರನ್ನು ರಾಕ್ಷಸರನ್ನಾಗಿಸಿ, ಸಮಾಜದಲ್ಲಿ ದ್ವೇಷವನ್ನು ಹುಟ್ಟು ಹಾಕುವ ಮಾರ್ಗ ಯಾವುದು ಎಂಬುದು ಅವರ ಆಲೋಚನೆ. ಆಧುನಿಕತೆಯ ಒಳಗಿನಿಂದ ಇಸ್ಲಾಮನ್ನು ಓದಲು ಮತ್ತು ಟೀಕಿಸಲು ಪ್ರಯತ್ನಿಸುವವರಿದ್ದಾರೆ. ಅವರ ಸಾಮಾನ್ಯ ಲಕ್ಷಣವೆಂದರೆ, ಅವರಲ್ಲಿ ಹೆಚ್ಚಿನವರು ಧರ್ಮದ ಹೆಸರಿನಲ್ಲಿ ಪ್ರಾಣಿ ಬಲಿಗೆ ವಿರುದ್ಧವಾಗಿದ್ದರೂ, ಮಾಂಸ ತಿನ್ನಲು ಹಿಂಜರಿಯುವುದಿಲ್ಲ ಮತ್ತು ಚಿಕನ್ ಫ್ರೈಗಳು, ಮಟನ್ ಕಬಾಬ್‌ಗಳು ಮತ್ತು ಬೀಫ್ ಬರ್ಗರ್‌ಗಳಿಗಾಗಿ ಪ್ರಪಂಚದಾದ್ಯಂತದ ಕಸಾಯಿಖಾನೆಗಳಲ್ಲಿ ಪ್ರತಿದಿನ ಸಾಯುವ ಲಕ್ಷಾಂತರ ಪ್ರಾಣಿಗಳು ಮತ್ತು ಪಕ್ಷಿಗಳ ರೋಧನ ಮತ್ತು ಕಿರುಚಾಟ ಇವರನ್ನು ವಿಚಲಿತಗೊಳಿಸುವುದಿಲ್ಲ. ಮಾಂಸಾಹಾರಕ್ಕೆ ಹೆಸರುವಾಸಿಯಾದ ಕೆಎಫ್‌ಸಿ, ಮೆಕ್ ಡೊನಾಲ್ಡ್ ನಂತಹ ಅಂತಾರಾಷ್ಟ್ರೀಯ ಆಹಾರ ಮಳಿಗೆಗಳನ್ನು ಆಧುನಿಕತೆ ಮತ್ತು ಸುಧಾರಣೆಯ ಪ್ರತೀಕವಾಗಿ ನೋಡಲು ಅವರು ಹಿಂಜರಿಯುವುದಿಲ್ಲ. ಗೂಗಲ್ ಹುಡುಕಾಟದಲ್ಲಿ ಯಾರಾದರೂ ಕಂಡುಕೊಳ್ಳಬಹುದಾದ ಅಂಕಿಅಂಶಗಳ ಪ್ರಕಾರ, ಜಾಗತಿಕ ಮಾಂಸ ಉದ್ಯಮದ ಆಸ್ತಿಗಳು ಒಂದು ಟ್ರಿಲಿಯನ್ (ಒಂದು ಸಾವಿರ ಮಿಲಿಯನ್) ಡಾಲರ್‌ಗಳ ಹತ್ತಿರದಲ್ಲಿದೆ ಮತ್ತು ವಿಶ್ವದ ಅತ್ಯಂತ ಆಧುನಿಕ ದೇಶಗಳಾದ ಅಮೆರಿಕ ಮತ್ತು ಜರ್ಮನಿ ಮುಂತಾದ ದೇಶಗಳಿಂದ ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಸ್ಕರಿಸಿದ ಮಾಂಸವನ್ನು ಬಹಳಷ್ಟು ರಫ್ತು ಮಾಡಲಾಗುತ್ತದೆ. ಇವೆಲ್ಲವನ್ನೂ ಎತ್ತಿ ತೋರಿಸುವುದರ ಮೂಲಕ, ಪ್ರಾಣಿಗಳ ಮೇಲಿನ ಪ್ರೀತಿಯಲ್ಲಿ ಬೂಟಾ ಟಿಕೆ ಮತ್ತು ದ್ವಂದ್ವದ ಕುರಿತು ಅವರನ್ನು ಯಾರಾದರೂ
ಪ್ರಶ್ನಿಸಿದರೆ, ಅವರ ಆಕ್ಷೇಪಣೆ ಮಾಂಸಾಹಾರ ಸೇವನೆಗೆ ಅಲ್ಲ, ಪ್ರಾಣಿಬಲಿ ಆಚರಣೆಗೆ ಎಂಬುದು ಅವರ ಉತ್ತರ. ಈ ಉತ್ತರವು ಪರಿಕಲ್ಪನೆಯ ಆಯಾಮವನ್ನು ಹೊಂದಿದೆ. ಇದು ಧಾರ್ಮಿಕ ಮತ್ತು ಜಾತ್ಯತೀತ ಎಂಬ ಬೈನರಿಯನ್ನು ಸೃಷ್ಟಿಸುವ ಆಧುನಿಕತೆಯ ಸಾಮಾನ್ಯ ಅರ್ಥದಿಂದ ಬಂದಿದೆ. ಧರ್ಮವು ತಿನ್ನುವ ಮತ್ತು ಕುಡಿಯುವ ಜಾತ್ಯತೀತ ಪ್ರಕ್ರಿಯೆಗೆ ಅಡ್ಡಿಪಡಿಸಿದಾಗ ಅದು ಅನಾಗರಿಕವಾಗುತ್ತದೆ. ಸಮಸ್ಯೆ ಎಂದರೆ ಪ್ರಾಣಿಗಳನ್ನು ಕೊಲ್ಲುವುದು ಅಲ್ಲ, ಅದನ್ನು ದೇವರ ಹೆಸರಿನಲ್ಲಿ ಮತ್ತು ದೇವರಿಗೆ ಬಲಿಯಾಗಿ ಮಾಡುವುದಾಗಿದೆ. ಏನನ್ನು ವಧೆ ಮಾಡಲಾಗುತ್ತಿದೆ ಎಂಬುದಲ್ಲ, ಯಾವುದನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಸಮಸ್ಯೆಯಾಗಿದೆ. ಗೋಹತ್ಯೆಯನ್ನು ಭಕ್ತರು ಮಾಡಿದರೆ, ಅದು ದೇವರ ಹೆಸರಿನಲ್ಲಿದ್ದರೆ, ಅದು ಧಾರ್ಮಿಕ ಮತ್ತು ಆದ್ದರಿಂದ ಪ್ರಾಚೀನ ಮತ್ತು ಪ್ರತಿಗಾಮಿ. ಕೆಎಫ್‌ಸಿಯಲ್ಲಿ ಫ್ರೈಡ್ ಚಿಕನ್ ಆಧುನಿಕ ಮತ್ತು ಜಾತ್ಯತೀತವಾಗುತ್ತದೆ.

ಜಾತ್ಯತೀತ ತರ್ಕದಲ್ಲಿ, ಪ್ರಾಣಿ ಬಲಿಯು ನರಬಲಿಯಂತೆ ಕೇವಲ ಒಂದು ಪ್ರಾಚೀನ ಆಚರಣೆಯಾಗಿದೆ. ಹತ್ಯೆ ಮಾಡುತ್ತಿರುವುದು ಮನುಷ್ಯನ್ನಲ್ಲ ಪ್ರಾಣಿಯನ್ನಲ್ಲವೇ ಎಂದು ಕೇಳಿದರೆ, ಪ್ರಾಣಿ ಬಲಿಯಲ್ಲಿ ಹತ್ಯೆಯನ್ನು, ಆಚರಣೆ ಮಾಡಲಾಗಿದೆ ಎಂಬ ಉತ್ತರ ಬರುತ್ತದೆ. ಅವರು ತಿನ್ನುವ ‘ಸೆಕ್ಯುಲರ್’ ಮಾಂಸದಲ್ಲಿ, ಕೊಂದ ಪ್ರಾಣಿಯ ಕರುಣಾಜನಕ ಮುಖ. ಈ ಆಧುನಿಕತಾವಾದಿಗಳಿಗೆ ಕಾಣದಿರುವುದು ಇದರ ಇನ್ನೊಂದು ಮಗ್ಗುಲು. ಅವರಿಗೆ ದೇವನ ಹೆಸರಿನಲ್ಲಿ ಕೊಲ್ಲಲ್ಪಟ್ಟ ಪ್ರಾಣಿಗಳ ಬಗ್ಗೆ ಮಾತ್ರ ಅನುಕಂಪ ಮತ್ತು ಆಧುನಿಕತೆಯ ಸೆಕ್ಯು ಲರ್ ತರ್ಕವು ತ್ಯಾಗದ ಮರ್ಮವನ್ನು ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಗ್ರಹಿಸುವುದಿಲ್ಲ. ಈ ತರ್ಕದಲ್ಲಿ ಮಾನವ ಜೀವನದಲ್ಲಿ ಮಧ್ಯಪ್ರವೇಶಿಸುವ ದೇವನಿಗೆ ಸ್ಥಾನವಿಲ್ಲ. ಪ್ರವಾದಿ ಇಬ್ರಾಹೀಮ್(ಅ) ತನ್ನ ಮಗನನ್ನು ವಧಿಸಲು ದೇವನು ಆಜ್ಞಾಪಿಸಿದ ತಕ್ಷಣ, ದೇವ ಕ್ರೂರಿಯಾದ.. ಆಧುನಿಕ ತರ್ಕವು ತನ್ನ ಜ್ಞಾನಶಾಸ್ತ್ರದ ಮಿತಿಗಳ ಕಾರಣದಿಂದಾಗಿ, ದೇವನು ಕೈಗೊಳ್ಳಲು ಉದ್ದೇಶಿಸದ ಮಗನನ್ನು ವಧಿಸುವ ಆಜ್ಞೆಯ ಅತೀಂದ್ರಿಯ ಮಟ್ಟವನ್ನು ಗ್ರಹಿಸಲು ಸಾಧ್ಯವಿಲ್ಲ. ದೇವ ಪರೀಕ್ಷೆ, ದೇವನಿಗೆ ಸಮರ್ಪಣೆ, ತ್ಯಾಗ ಇವು ಆಧುನಿಕತೆಯ ಶಬ್ದಕೋಶದಲ್ಲಿ ಅರ್ಥಹೀನ ಪದಗಳಾಗಿವೆ. ಪ್ರಾಣಿಯನ್ನು ಬಲಿಕೊಡುವ ಆಜ್ಞೆಯು ನರಬಲಿ ವಿರುದ್ಧದ ನಿಷೇಧವನ್ನು ಸಹ ಒಳಗೊಂಡಿದೆ. ಇಸ್ಲಾಮ್‌ನಲ್ಲಿ ಪ್ರಾಣಿಬಲಿ ನರಬಲಿಯ ಮುಂದುವರಿಕೆ ಅಲ್ಲ, ಅದರ ನಿರಾಕರಣೆಯಾಗಿದೆ. ಅದೇ ಸಮಯದಲ್ಲಿ, ಆಧುನಿಕತೆಯ ಇತಿಹಾಸ ಮತ್ತು ಸಿದ್ಧಾಂತವು ವರ್ಣಭೇದ ನೀತಿ, ಯುದ್ಧ ಮತ್ತು ವಸಾಹತುಶಾಹಿಯಲ್ಲಿ ಮುಳುಗಿದೆ. ಆಧುನಿಕತೆಯ ಇತಿಹಾಸವು ಪಾಶ್ಚಿಮಾತ್ಯ ನಾಗರಿಕತೆಯ ಬಲಿಪೀಠದ ಮೇಲೆ ಬಲಿಯಾದ ವಿಶ್ವದ ಕೋಟ್ಯಂತರ ಮುಗ್ಧ ಜನರ ಸಾಮೂಹಿಕ ಹತ್ಯೆಯ ಕಥೆಯೂ ಆಗಿದೆ. ಅದು ಹಲವು ರೀತಿಯ ವಿಶ್ಲೇ ಷಣೆ ಮತ್ತು ಅಭಿವ್ಯಕ್ತಿಗಳ ಮೂಲಕ ಇಂದಿಗೂ ಮುಂದುವರೆದಿದೆ.

ಇಸ್ಲಾಮ್ ಧರ್ಮವು ತ್ಯಾಗದ ಸಾಂಪ್ರದಾಯಿಕ ಧಾರ್ಮಿಕ ಕಲ್ಪನೆಗಳನ್ನು ಸರಿಪಡಿಸುತ್ತದೆ, ಬಲಿಯಾದ ಹಸುವಿನ ಮಾಂಸವನ್ನು ದೇವನಿಗೆ ನೈವೇದ್ಯವಾಗಿ ಅರ್ಪಿಸಲಾಗುವುದಿಲ್ಲ, ಅದನ್ನು ಮಾನವರ ಬಳಕೆಗಾಗಿ ಉಪಯೋಗಿಸಲಾಗುತ್ತದೆ ಎಂದು ಕುರ್‌ಆನ್ (22:37) ಹೇಳುತ್ತದೆ, “ಅವರ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನನ್ನು ತಲುಪುವುದಿಲ್ಲ. ಆದರೆ ನಿಮ್ಮ ಧರ್ಮನಿಷ್ಠೆಯು ಅವನನ್ನು ತಲುಪುತ್ತದೆ.” ತಕ್ವಾ ಎಂಬುದು ದೇವನಿಗೆ ನಿಕಟತೆ, ವಿಧೇಯತೆ ಮತ್ತು ಸಮರ್ಪಣೆ ಇದು ತಕ್ವಾದ ಗುಣ ವಿಶೇಷಗಳಾಗಿವೆ. ಇದು ಬಲಿಕರ್ಮದ ಆಧ್ಯಾತ್ಮಿಕ ಮಟ್ಟವಾಗಿದೆ. ತ್ಯಾಗದ ಮಾಂಸವನ್ನು ಮನುಷ್ಯ ರಿಗೆ ದಾನವಾಗಿ ನೀಡಬೇಕು ಎಂಬ ಸಲಹೆಯ ಮೂಲಕ ಇಸ್ಲಾಮ್ ಈ ಆಧ್ಯಾತ್ಮಿಕ ಮಟ್ಟವನ್ನು ಸಮಾಜದೊಂದಿಗೆ ಜೋಡಿಸುತ್ತದೆ. ಆರೋಗ್ಯವಂತ ಕುರಿಗಳನ್ನು ಸ್ವಚ್ಛವಾಗಿ ಕಡಿಯಬೇಕು ಮತ್ತು ಅವುಗಳ ಮಾಂಸವನ್ನು ಜನರಿಗೆ ಉಚಿತವಾಗಿ ಹಂಚಬೇಕು ಎಂಬ ಇಸ್ಲಾಂನ ಸಲಹೆ. ಲಾಭದ ದುರಾಸೆಯ ಆಧುನಿಕ ಬಂಡವಾಳಶಾಹಿಗೆ ಜೀರ್ಣಿಸಿಕೊಳ್ಳಲು ಸುಲಭವಲ್ಲ. ಬಲಿ ಹಬ್ಬವು ಆಹಾರದ ಆಚರಣೆಯಾಗಿದೆ, ಇದು ಸಮಾಜದ ಬಡವರಿಗೂ ರುಚಿಕರವಾದ ಆಹಾರವನ್ನು ಆನಂದಿಸಲು ಅವಕಾಶವನ್ನು ನೀಡುತ್ತದೆ. ತ್ಯಾಗದ ಈ ಆಧ್ಯಾತ್ಮಿಕ ಮತ್ತು ಬೌತಿಕ ಸಮನ್ವಯದ ಮೂಲಕ, ಧಾರ್ಮಿಕ ಮತ್ತು ಸೆಕ್ಯುಲರ್ ಎಂಬ ಬೈನರಿಯನ್ನು ತಿರಸ್ಕರಿಸುತ್ತದೆ.

ಆಧುನಿಕ ನಿರೂಪಣೆಯ ಗೀಳನ್ನು ಹೊಂದಿರುವ ಕೆಲವು ಮುಸ್ಲಿಮರು ಮೇಲೆ ಉಲ್ಲೇಖಿಸಿದ ಕುರ್‌ಆನ್ ಸೂಕ್ತವನ್ನು ಪ್ರಾಣಿ ಬಲಿ ನಿಷೇಧ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಸೂಕ್ತದ ಕೊನೆಯ ಭಾಗವು ಈ ವಾದಕ್ಕೆ ನಿಖರವಾಗಿ ಉತ್ತರಿಸುತ್ತದೆ. ಹಜ್ ಮತ್ತು ಬಲಿ ಕರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ಇಸ್ಲಾಮ್ ನಲ್ಲಿ ತ್ಯಾಗವಿಲ್ಲ ಎಂದು ವಾದಿಸಲು ಅಂತಹ ಜನರನ್ನು ಪ್ರೇರೇಪಿಸುವ ಮಾಹಿತಿಯ ಕೊರತೆಗಿಂತ ಅವರ ಸ್ವಂತ ನಂಬಿಕೆಯ ಮೇಲಿನ ಕೀಳರಿಮೆಯೇ ಹೆಚ್ಚು. ಇದು ಮುಸ್ಲಿಮ್ ಸಮುದಾಯವು ಶತಮಾನಗಳಿಂದ ಆಚರಿಸುತ್ತಿರುವ ಮತ್ತು ಕುರ್‌ಆನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ. ಅವರು ಆಧುನಿಕ ಮತ್ತು ಉದಾರವಾದ ಮೌಲ್ಯಗಳು ಶ್ರೇಷ್ಠವೆಂಬ ಭ್ರಮೆಯಲ್ಲಿ ಬಿದ್ದವರು; ಇಸ್ಲಾಮ್ ಅನ್ನು ಸುಧಾರಿಸಲು ಮತ್ತು ಆಧುನೀಕರಿಸಲು ಪ್ರಯತ್ನಿಸುವವರು. ಆಧುನಿಕತಾವಾದವು ಯುರೋಪಿನಲ್ಲಿ ಪಾದಾರ್ಪಣೆ ಮಾಡಿದ ಸಮಯದಿಂದ, ಅಂತಹ ಸುಧಾರಕರು ಅದರೊಂದಿಗೆ ಮಾನಸಿಕ ಬಾಂಧವ್ಯವನ್ನು ಹೊಂದಿದ್ದಾರೆ. ಅದರ ಮುಂದುವರಿಕೆ ಮತ್ತು ಪುನರಾವರ್ತನೆ ಮಾತ್ರ ಇನ್ನೂ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ. ವಾಸ್ತವವೆಂದರೆ ಈ ಜನರಿಗೆ ಇಸ್ಲಾಮ್ ಅಥವಾ ಆಧುನಿಕತೆಯ ಬಗ್ಗೆ ಸರಿಯಾದ ಜ್ಞಾನವಿಲ್ಲ.

ಆಧುನಿಕತೆಯ ರಾಜಕೀಯ ಮತ್ತು ಸಿದ್ಧಾಂತಗಳು ಇಸ್ಲಾಮ್ ಧರ್ಮವನ್ನು ಕಡೆಗಣಿಸಿ ರೂಪುಗೊಂಡಿರುವುದು ಕಂಡು ಬರುತ್ತದೆ. ಆಧುನಿಕತೆಯಲ್ಲಿ ಆರಂಭವಾದ ವಸಾಹತುಶಾಹಿ ವ್ಯವಸ್ಥೆಯ ಮುಖ್ಯ ಬಲಿಪಶುಗಳು ಮುಸ್ಲಿಂ ದೇಶಗಳು ಮತ್ತು ಮುಸ್ಲಿಂ ಸಮುದಾಯಗಳಾಗಿತ್ತು. ಸಾಮ್ರಾಜ್ಯಶಾಹಿ ಆಕ್ರಮಣಗಳನ್ನು ಕೇವಲ ರಾಜಕೀಯ ಯೋಜನೆಗಳೆಂದು ತಳ್ಳಿಹಾಕಿದರೆ, ಇಸ್ಲಾಮ್ ನಿಂದ ಪ್ರೇರಿತವಾಗಿ ಹೊರಹೊಮ್ಮುವ ಆಕ್ರಮಣ ವಿರೋಧಿ ಹೋರಾಟಗಳನ್ನು ಭಯೋತ್ಪಾದನೆ ಎಂದು ಹೆಸರಿಸಲಾಗಿದೆ, ನರಹತ್ಯೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವ ಇಸ್ರೇಲ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗುವುದು ಮತ್ತು ಅದನ್ನು ಕೆಚ್ಚೆದೆಯಿಂದ ವಿರೋಧಿಸುತ್ತಿರುವ ಹಮಾಸ್ ಭಯೋತ್ಪಾದಕ ರಾಷ್ಟ್ರವಾಗಿ ಬದಲಾಗುವುದು ಚಳವಳಿಯ ನಡುವಿನ ಸ್ಥಿತ್ಯಂತರವನ್ನು ಅರ್ಥಮಾಡಿಕೊಳ್ಳಲು ಈ ಓದುವಿಕೆ ಸುಲಭವಾಗುತ್ತದೆ.

ದೇವಕಲ್ಪನೆಯಿಂದ ತಪ್ಪಿಸಿಕೊಳ್ಳಲು ಪ್ರವಾದಿ ಇಬ್ರಾಹೀಮ್(ಅ) ಹಲವಾರು ವ್ಯಾಖ್ಯಾನಗಳಲ್ಲಿ ಆಶ್ರಯ ಪಡೆಯಬಹುದಿತ್ತು ಎಂದು ಅಲಿ ಶರೀಅತಿ ಬರೆದಿದ್ದಾರೆ. ದೇವನು ತನ್ನ ಮಗ ಇಸ್ಮಾಯಿಲ್‌ರನ್ನು ಬಲಿಕೊಡುವಂತೆ ಆಜ್ಞಾಪಿಸಿದನೆಂದು ಕನಸು ಕಂಡಾಗ ಇಬ್ರಾಹೀಮ್(ಅ) ಮನಸ್ಸಿನಲ್ಲಿ ಅನೇಕ ರೀತಿಯ ಪ್ರಶ್ನೆಗಳು ಸಹಜವಾಗಿ ಉದ್ಭವಿಸಿರಬೇಕು. ಇದು ಕೇವಲ ಕನಸ ಲ್ಲವೇ? ಅಲ್ಲಾಹನು ಇಸ್ಮಾಈಲನನ್ನು ಬಲಿಕೊಡಲು ಉದ್ದೇಶಿಸಿದ್ದಾನೆಯೇ? ಮನುಷ್ಯನನ್ನು ಬಲಿಯರ್ಪಿಸಲು ಅಲ್ಲಾಹನು ಆದೇಶಿಸಬಹುದೇ? ಎಂದೆಲ್ಲ ವೃದ್ಧರಾಗಿದ್ದ ತಂದೆಯ ಮನಸ್ಸಿನ ನಡೆಯುತ್ತಿದ್ದ ಗೊಂದಲವನ್ನು ಅರಿತುಕೊಂಡ ಇಬ್ಲಿಸ್ ಅವರನ್ನು ದಾರಿ ತಪ್ಪಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದನು. ಸಂದಿಗ್ಗ ಪರಿಸ್ಥಿತಿಯಲ್ಲಿ ಮನುಷ್ಯರಲ್ಲಿ ಕಂಡುಬರುವ ದೌರ್ಬಲ್ಯಗಳನ್ನು ಶೈತಾನನು ಊದಿ ಹಿಗ್ಗಿಸುತ್ತಾನೆ. ಆದರೆ ಇಬ್ರಾಹಿಮರಿಗೆ ಕನಸು ಪುನರಾವರ್ತನೆಗೊಂಡಾಗ ಎಲ್ಲ ಸಂಶಯಗಳು ಕೊನೆಗೊಂಡು ದೇವಾದೇಶಕ್ಕೆ ತಲೆಬಾಗಲು ಅವರು ಸಿದ್ಧರಾಗುತ್ತಾರೆ. ಅವರು ದೇವಾಜ್ಞೆಗೆ ಮನಃಪೂರ್ವಕವಾಗಿ ಸಲ್ಲಿಸಲು ಸಿದ್ಧರಾದರು. ಸತ್ಯವು ದೈನಂದಿನ ಜೀವನದಲ್ಲಿ ಘರ್ಷಿಸಿದಾಗ ವಿಶ್ವಾಸಿಗಳು ಪರೀಕ್ಷಿಸಲ್ಪಡುತ್ತಾರೆ ಎಂದು ಶರೀಅತಿ ಬರೆಯುತ್ತಾರೆ. ಇಬ್ರಾಹೀಮ್(ಅ) ದೇವನ ಪರೀಕ್ಷೆಯಲ್ಲಿ ಯಶಸ್ವಿಯಾದರು. ಇಬ್ರಾಹಿಂ(ಅ) ಪರಂಪರೆಯ ಮೃಗ ಬಲಿಯ ಹಿಂದಿನ ಕಥೆಯು ರಕ್ತಪಿಪಾಸು ದೇವನಿಗೆ ಶಿಶುಗಳನ್ನು ಬಲಿಕೊಡುವ ಮೂಢನಂಬಿಕೆಯ ಕಥೆಯಲ್ಲ. ತನ್ನ ಪ್ರೀತಿಯ ಕರುಳಿನ ಕುಡಿಯಾದ ಮಗನನ್ನು ದೇವನ ಆದೇಶದ ಮುಂದೆ ಬಲಿಕೊಡಲು ಸಿದ್ಧರಾದ ಮಹಾನ್ ಪ್ರವಾದಿಯ ಕಥೆ ಇದು. ದೇವನು ಬಯಸಿದ್ದು ಇಸ್ಮಾಯೀಲರ ರಕ್ತವಲ್ಲ, ನರಹತ್ಯೆಯ ಶಾಶ್ವತ ನಿಷೇಧವು ಆ ಸಮರ್ಪಣೆಗೆ ಬದಲಾಗಿ ಮಾನವಕುಲಕ್ಕೆ ಉಡುಗೊರೆಯಾಗಿತ್ತು. ಈ ನೈತಿಕ ಪಾಠಗಳನ್ನು ಆಧುನಿಕತೆಯ ಸೆಕ್ಯುಲರ್ ತರ್ಕದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಪ್ರಾಣಿಬಲಿ ಕೂಡ ಆಹಾರದ ಬಗ್ಗೆ ಇಸ್ಲಾಮಿನ ನಿಲುವನ್ನು ಮುಂದಿಡುತ್ತದೆ. ಇಸ್ಲಾಮಿನ ದೃಷ್ಟಿಕೋನದಂತೆ ಪಕ್ಷಿ ಮೃಗಗಳು ಮುಂತಾದ ಸೃಷ್ಟಿಗಳನ್ನು ಮನುಷ್ಯರಿಗೆ ಆಹಾರವಾಗಿಯೂ ಸೃಷ್ಟಿಸಲಾಗಿದೆ. ಅದರಲ್ಲಿ ಅನುಮತಿಸಲ್ಪಟ್ಟದ್ದನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಬಹುದು. ಜೀವ ಕಾರುಣ್ಯದ ಹೆಸರಿನಲ್ಲಿ ಪ್ರಾಣಿಗಳನ್ನು ಕೊಲ್ಲಬಾರದು, ತಿನ್ನಬಾರದು ಎಂದು ಹೇಳಿದರೆ ಪ್ರಕೃತಿಯಲ್ಲಿನ ಆಹಾರ ಸರಪಳಿಯೇ ಭಂಗವಾಗುತ್ತದೆ. ಸಸ್ಯಗಳು ಸಹ ಜೀವಂತವಾಗಿವೆ ಎಂದು ತೆಗೆದುಕೊಂಡರೆ ಸಮಸ್ಯೆಯು ಇನ್ನಷ್ಟು ಜಟಿಲವಾಗುತ್ತದೆ. ಜೀವಿಗಳಿಗೆ ಹೇಗೆ ಕರುಣೆ ತೋರಿಸಬೇಕೆಂದು ಇಸ್ಲಾಮ್ ಈಗಾಗಲೇ ಕಲಿಸಿದೆ. ಅನೇಕರು ಕ್ಷುಲ್ಲಕವೆಂದು ಪರಿಗಣಿಸುವ ಇರುವೆಯ ಮೇಲೂ ದಯೆ ತೋರಿಸಬೇಕು ಎಂಬುದು ಇಸ್ಲಾಮ್‌ನ ಪಾಠ. ಪ್ರವಾದಿಯವರ(ಸ) ಜೀವನದಲ್ಲಿ ದಯೆಯ ಹೃದಯಸ್ಪರ್ಶಿಯಾದ ಅನೇಕ ಪ್ರಾಯೋಗಿಕ ಉದಾಹರಣೆಗಳಿವೆ. ಅದೇ ಸಮಯದಲ್ಲಿ, ಇಸ್ಲಾಂ ಕುರಿಗಳನ್ನು ವಧೆ ಮಾಡುವುದನ್ನು ಮತ್ತು ತಿನ್ನುವುದನ್ನು ನಿಷೇಧಿಸುವುದಿಲ್ಲ. ಇಸ್ಲಾಮ್‌ನ ಮೆನು ಹಾಲು, ಜೇನುತುಪ್ಪ, ತರಕಾರಿಗಳು, ಹಣ್ಣುಗಳು, ಮಾಂಸ ಮತ್ತು ಮೀನುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವಾಗಿದೆ. ಸ್ವಾದಿಷ್ಟ ಪೂರ್ಣವಾದ ವೈವಿಧ್ಯಮಯ ಆಹಾರವು ಮುಸ್ಲಿಂ ಸಂಸ್ಕೃತಿಯ ಭಾಗವಾಗಿರುವುದರ ರಹಸ್ಯ ಬೇರೇನೂ ಅಲ್ಲ.

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …