Home / ಇಸ್ಲಾಮ್ ಇವರ ದೃಷ್ಟಿಯಲ್ಲಿ (page 2)

ಇಸ್ಲಾಮ್ ಇವರ ದೃಷ್ಟಿಯಲ್ಲಿ

ಇಸ್ಲಾಮಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕನಾಗಿದ್ದಾನೆ – ನಾಗೇಶ್ ಹೆಗಡೆ

ಮನುಷ್ಯನ ವಿಕಾಸವಾದ ನಂತರ, ಅವನ ಬೇಕು-ಬೇಡಗಳ ಪಟ್ಟಿ ಬೆಳೆಯುತ್ತ ಹೋದಂತೆಲ್ಲ ಪ್ರಕೃತಿಯ ನಿಯಮಗಳನ್ನು ಆತ ಧಿಕ್ಕರಿಸುವ ಹಂತ ಬಂದಾಗ ವಿವೇಕವಾಣಿ ಅವನನ್ನು ಆಗಾಗ ಎಚ್ಚರಿಸಬೇಕಾದ ಅನಿವಾರ್ಯತೆ ಬಂತು. ಕುರ್‍ಆನ್ ಆ ಕೆಲಸವನ್ನು ಸಮರ್ಥವಾಗಿ ಮಾಡಿದೆ. ಇಸ್ಲಾಮಿನ ಧಾರ್ಮಿಕ ನಿಯಮಗಳ ಪ್ರಕಾರ, ಪ್ರಕೃತಿಯ ಮೂಲ ಘಟಕಗಳು- ಅಂದರೆ ನೀರು, ಗಾಳಿ, ಬೆಂಕಿ, ಅರಣ್ಯ ಮತ್ತು ಬೆಳಕು- ಕೇವಲ ಮಾನವನಿಗಷ್ಟೇ ಅಲ್ಲ, ಪ್ರಪಂಚದ ಎಲ್ಲ ಜೀವಿಗಳಿಗೂ ಸೇರಿದೆ. ಅವುಗಳ ಸಂರಕ್ಷಣೆ ಮಾಡುವುದು ಮತ್ತು …

Read More »

ವೇದಗಳಲ್ಲಿ ಪ್ರವಾದಿವರ್ಯರ ಆಗಮನದ ಬಗ್ಗೆ ಭವಿಷ್ಯವಾಣಿ ನೋಡಿ ಆಶ್ಚರ್ಯಚಕಿತನಾದೆ – ಶ್ರೀ ಅಡಿಯಾರ್

ಮುಹಮ್ಮದ್(ಸ) ಅರಬ್ ದೇಶದಲ್ಲಿ 6ನೇ ಶತಮಾನದಲ್ಲಿ ಹುಟ್ಟಿದರು. ಆದರೆ ಅದಕ್ಕಿಂತ ಎಷ್ಟೋ ಮುಂಚೆ ಅವರ ಆಗಮನದ ಬಗ್ಗೆ ಹಿಂದೂ ಧರ್ಮದ ವೇದಗಳಲ್ಲಿ ಭವಿಷ್ಯ ನುಡಿಯಲಾಗಿದೆ. ಓರ್ವ ಹಿರಿಯರಿಂದ ಈ ವಿಷಯ ಕೇಳಿ ಆ ಬಗ್ಗೆ ನಾನು ಅದನ್ನು ಹುಡುಕಿದೆ. ವೇದಗಳಲ್ಲಿ ಪ್ರವಾದಿವರ್ಯರ ಆಗಮನದ ಬಗ್ಗೆ ಭವಿಷ್ಯವಾಣಿ ನೋಡಿ ಆಶ್ಚರ್ಯ ಚಕಿತನಾದೆ. ಮಹರ್ಷಿ ವ್ಯಾಸರ 18 ಪುರಾಣಗಳ ಪೈಕಿ ಒಂದು ಭವಿಷ್ಯ ಪುರಾಣ. ಅದರ ಒಂದು ಶ್ಲೋಕ ಈ ರೀತಿಯಿದೆ. “ಹೊರ …

Read More »

ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಮುಹಮ್ಮದ್(ಸ) – ಮೈಕಲ್ ಹೆಚ್.ಹಾರ್ಟ್

  ನಾನು ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಮಾಡುವಾಗ ಅದರಲ್ಲಿ ಮುಹಮ್ಮದ್ (ಸ)ರನ್ನು ಅಗ್ರಸ್ಥಾನದಲ್ಲಿ ಇರಿಸಿದ್ದೇನೆ. ಇದು ಹಲವಾರು ಓದುಗರಿಗೆ ಅಚ್ಚರಿಯ ಸಂಗಾತಿಯಾಗಿರಬಹುದು ಮತ್ತು ಇನ್ನು ಕೆಲವರು ನನ್ನ ಈ ಆಯ್ಕೆಯ ಬಗ್ಗೆ ಪ್ರಶ್ನೆ ಕೂಡಾ ಎತ್ತಬಹುದು. ಆದರೆ ಲೌಕಿಕ ಮತ್ತು ಧಾರ್ಮಿಕ ಮಟ್ಟಗಳಲ್ಲಿ ಸಮವಾಗಿ ಪ್ರಭಾವ ಬೀರಿ, ಯಶಸ್ಸು ಸಾಧಿಸಿದ ಇನ್ನೊಬ್ಬ ವ್ಯಕ್ತಿ ಇತಿಹಾಸದಲಿಲ್ಲ. ಇಸ್ಲಾಮಿನ ಮೇಲೆ ಮುಹಮ್ಮದ್ (ಸ) ರ ಪ್ರಭಾವವನ್ನು ತುಲನಾತ್ಮಕವಾಗಿ ನೋಡುವುದಾದರೆ ಅದು …

Read More »

ಥಾಮಸ್ ಕಾರ್ಲೈಲ್, ಹೀರೋಸ್ ಏಂಡ್ ಹೀರೋ ವರ್ಶಿಪ್ ಎಂಬ ಗ್ರಂಥದಲ್ಲಿ ಪ್ರವಾದಿ ಮುಹಮ್ಮದ್

ಒಬ್ಬ ವ್ಯಕ್ತಿ ಒಮ್ಮೆಗೆ ಅಂದರೆ ಎರಡು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ಪರಸ್ಪರ ಕಾದಾಡುತ್ತಿದ್ದ ಗೋತ್ರಗಳನ್ನು ಮತ್ತು ಗ್ರಾಮೀಣ ಅರಬರನ್ನು ಅತ್ಯಂತ ಬಲಾಢ್ಯರು, ಸುಧಾರಿತ ಜನ ವಿಭಾಗವನ್ನಾಗಿ ಪರಿವರ್ತಿಸಿರುವುದು ಅದ್ಭುತವಾಗಿದೆ.  

Read More »

ಇಸ್ಲಾಮ್ ಪಸರಿಸಿದ್ದು ಖಡ್ಗದಿಂದಲ್ಲ, ಅದ್ಭುತವಾದ ನಾಯಕತ್ವದಿಂದ – ಮಹಾತ್ಮಾ ಗಾಂಧೀಜಿ

ಖಡ್ಗವಲ್ಲ ಅದ್ಭುತವಾದ ನಾಯಕತ್ವ ಇಂದಿಗೂ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಹೃದಯಗಳಲ್ಲಿ ತನ್ನ ನಿರ್ವಿವಾದ ಪ್ರಭಾವವನ್ನು ಅಚ್ಚೋತ್ತಿದ್ದ ಆ ವ್ಯಕ್ತಿಯ ಜೀವನಗಾಥೆಯನ್ನು ತಿಳಿಯಬಯಸಿದ್ದೆ… ಇಸ್ಲಾಮ್ ಧರ್ಮಕ್ಕೆ ಅಂದು ಅರ್ಹವಾದ ಸ್ಥಾನ ಲಭ್ಯವಾದದ್ದು ಖಡ್ಗದಿಂದಾಗಿರಲಿಲ್ಲ ಎಂಬ ಸತ್ಯವು ನನಗಾಗ ಮನವರಿಕೆಯಾಯಿತು. ಮುಸ್ಲಿಮರು ಅಂದು ಎದುರಿಸಿದ ಪ್ರತಿಯೊಂದು ಅಡಚಣೆಯನ್ನು ಅತಿಜಯಿಸಿ ಮುಂದೆ ಸಾಗಿಸಿದ್ದು ಆ ಪ್ರವಾದಿಯ ಅಚಲವಾದ ಸರಳತೆ, ಪ್ರಸಿದ್ಧಿಯನ್ನು ಬಯಸದ ಅವರ ವಿನಮ್ರತೆ, ಪ್ರತಿಜ್ಞೆಗಳ ಕುರಿತು ಅವರಿಗಿದ್ದ ಸೂಕ್ಷ್ಮ ಪ್ರಜ್ಞೆ, ತಮ್ಮ ಸ್ನೇಹಿತರು …

Read More »

ಪ್ರವಾದಿ ಮುಹಮ್ಮದ್(ಸ) ಅತ್ಯಂತ ಶ್ರೇಷ್ಠ ವ್ಯಕ್ತಿ – ಅಲ್ಫೋನ್ಸ್ ಡಿ ಲಾ ಮಾರ್ಟಿನ್

ಅಲ್ಫೋನ್ಸ್ ಡಿ ಲಾ ಮಾರ್ಟಿನ್ ಫ್ರೆಂಚ್ ಬರಹಗಾರ, ಕವಿ ಮತ್ತು ರಾಜನೀತಿ ತಜ್ಞ ಉದ್ದೇಶದ ಶ್ರೇಷ್ಠತೆ, ಅತ್ಯಲ್ಪ ಅನುಕೂಲತೆಗಳು ಮತ್ತು ಆಶ್ಚರ್ಯಕರವಾದ ಫಲಿತಾಂಶ ಈ ಮೂರು ವಿಷಯಗಳು ಒಂದು ವೇಳೆ ಒಬ್ಬ ಮನುಷ್ಯನ ಮೇಧಾವಿತನದ ಮಾನದಂಡವಾಗಿದ್ದರೆ, ಈ ನಿಟ್ಟಿನಲ್ಲಿ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಮುಹಮ್ಮದ್ (ಸ) ರೊಂದಿಗೆ ತುಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸಿದ್ಧ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರಗಳು, ಕಾನೂನುಗಳು ಮತ್ತು ಸಾಮ್ರಾಜ್ಯಗಳನ್ನು ಮಾತ್ರ ರಚಿಸಲು ಸಾಧ್ಯವಾಯಿತು. ಅವರ ಕಣ್ಣ …

Read More »

ಪ್ರವಾದಿ ಮುಹಮ್ಮದ್ ಮನುಕುಲದ ನೈಜ ಉದ್ಧಾರಕ- ಸರ್ ಜಾರ್ಜ್ ಬರ್ನಾಡ್ ಷಾ

ಪ್ರಸಕ್ತ ಜಗತ್ತಿಗೆ ಮುಹಮ್ಮದ್ (ಸ) ರಂತಹ ಮನಸ್ಸಿರುವ ವ್ಯಕ್ತಿಯ ಅಗತ್ಯ ಬಹಳಷ್ಟಿದೆ. ಮಧ್ಯಯುಗದ ಜನರು ಅವರನ್ನು ಕ್ರೈಸ್ತ ಧರ್ಮದ ಶತ್ರು ಎಂದು ತಿಳಿದು, ತಮ್ಮ ಅಜ್ಞಾನ ಮತ್ತು ಪೂರ್ವಾಗ್ರಹದಿಂದಾಗಿ ಅವರ ಅತಿ ನಿಕೃಷ್ಟ ಚಿತ್ರಣವನ್ನು ಲೋಕಕ್ಕೆ ನೀಡಿದ್ದಾರೆ. ಆದರೆ ಈ ವ್ಯಕ್ತಿಯ ಜೀವನವನ್ನು ನೋಡಿದಾಗ ನನಗದು ಅತ್ಯಂತ ಅದ್ಭುತವಾದ ಪವಾಡ ಸದೃಶ್ಯ ಜೀವನವಾಗಿ ತೋರಿತು. ಅವರು ಕ್ರೈಸ್ತ ಧರ್ಮದ ಶತ್ರುವಲ್ಲ ಬದಲಾಗಿ ಮನುಕುಲದ ವಿಮೋಚಕರಾಗಿದ್ದಾರೆ ಎಂದು ನಾನಾಗ ತೀರ್ಮಾನಿಸಿ ಬಿಟ್ಟೆ. …

Read More »

ಇಸ್ಲಾಮ್ ಮಾನವ ಸಮಾನತೆಯ ಪ್ರತಿಪಾದಕ- ಸರೋಜಿನಿ ನಾಯ್ಡು

ಪ್ರಜಾ ಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಕರೆ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ; ಅಲ್ಲಾಹ್ ಅತಿ ಶ್ರೇಷ್ಠನು; ಎಂದು ಘೋಷಿಸುತ್ತಾ ಸಾಷ್ಟಾಂಗವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮ್‍ನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರ ಮುಗ್ಧಗೊಳಿಸಿದೆ. ಈಜಿಪ್ಟ್, …

Read More »

ಪ್ರತಿಯೊಂದು ರಂಗದಲ್ಲೂ ಅದ್ಭುತವಾದ ನಾಯಕ ಮುಹಮ್ಮದ್(ಸ) – ಫ್ರೊಪೆಸರ್ ರಾಮಕೃಷ್ಣ ರಾವ್

ಪ್ರೋ.ಕೆ.ಎಸ್. ರಾಮಕೃಷ್ಣ ರಾವ್ ತತ್ವಶಾಸ್ತ್ರ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ ಪ್ರಾಮಾಣಿಕನಾದ ಓರ್ವ ಮಾನವನು ದೇವನ ಅತ್ಯುತ್ಕ್ರಷ್ಟ ಸೃಷ್ಟಿ. ಮುಹಮ್ಮದ್ ಕೇವಲ ಪ್ರಾಮಾಣಿಕರಾಗಿರಲಿಲ್ಲ, ಅವರು ಅಡಿಯಿಂದ ಮುಡಿ ತನಕ ಮಾನವೀಯ ಅನುಕಂಪ ಉಳ್ಳವರಾಗಿದ್ದರು. ಸಹಜೀವಿಗಳ ಪ್ರೀತಿ ಮತ್ತು ಸಹಾನುಭೂತಿಗಳು ಅವರ ಹೃದಯದ ಸಂಗೀತವಾಗಿತ್ತು. ಮಾನವರ ಸೇವೆಗೈಯುವುದು, ಅವರನ್ನು ಉನ್ನತಗೊಳಿಸುವುದು, ಸಂಸ್ಕರಿಸುವುದು, ಅವರಿಗೆ ಜ್ಞಾನ ನೀಡುವುದು – ಒಂದೇ ಮಾತಿನಲ್ಲಿ ಹೇಳುವುದಾದರೆ, ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವುದು – ಇದು ಅವರ ಕಾರ್ಯಭಾರವಾಗಿತ್ತು. ಜೀವನದ …

Read More »