ನಾನು ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಮಾಡುವಾಗ ಅದರಲ್ಲಿ ಮುಹಮ್ಮದ್ (ಸ)ರನ್ನು ಅಗ್ರಸ್ಥಾನದಲ್ಲಿ ಇರಿಸಿದ್ದೇನೆ. ಇದು ಹಲವಾರು ಓದುಗರಿಗೆ ಅಚ್ಚರಿಯ ಸಂಗಾತಿಯಾಗಿರಬಹುದು ಮತ್ತು ಇನ್ನು ಕೆಲವರು ನನ್ನ ಈ ಆಯ್ಕೆಯ ಬಗ್ಗೆ ಪ್ರಶ್ನೆ ಕೂಡಾ ಎತ್ತಬಹುದು.
ಆದರೆ ಲೌಕಿಕ ಮತ್ತು ಧಾರ್ಮಿಕ ಮಟ್ಟಗಳಲ್ಲಿ ಸಮವಾಗಿ ಪ್ರಭಾವ ಬೀರಿ, ಯಶಸ್ಸು ಸಾಧಿಸಿದ ಇನ್ನೊಬ್ಬ ವ್ಯಕ್ತಿ ಇತಿಹಾಸದಲಿಲ್ಲ. ಇಸ್ಲಾಮಿನ ಮೇಲೆ ಮುಹಮ್ಮದ್ (ಸ) ರ ಪ್ರಭಾವವನ್ನು ತುಲನಾತ್ಮಕವಾಗಿ ನೋಡುವುದಾದರೆ ಅದು ಕ್ರೈಸ್ತ ಧರ್ಮದ ಮೇಲೆ ಯೇಸುಕ್ರಿಸ್ತ ಮತ್ತು ಸಂತಪಾಲ್ರ ಒಟ್ಟು ಪ್ರಭಾವಕ್ಕಿಂತ ಅದೆಷ್ಟೋ ಹೆಚ್ಚಿನ ಮಟ್ಟದಲ್ಲಿದೆ. ಲೌಕಿಕ ಮತ್ತು ಧಾರ್ಮಿಕ ಕ್ಷೇತ್ರದ ಅವರ ಪ್ರಭಾವದ ಅನನ್ಯ ಸಂಯೋಗವೇ ಅವರನ್ನು ಈ ಅಗ್ರಸ್ಥಾನದಲ್ಲಿರಲು ಅರ್ಹವಾಗಿಸುತ್ತದೆ ಎಂಬುದು ನನ್ನ ನಿಲುವು. ಹಾಗಾಗಿ ಅವರು ಮಾನವ ಇತಿಹಾಸದಲ್ಲೇ ಜಗತ್ತಿನ ಅತ್ಯಂತ ಪ್ರಭಾವಶಾಲಿಯಾದ ಏಕೈಕ ವ್ಯಕ್ತಿಯಾಗಿದ್ದಾರೆ.
ಮೈಕಲ್ ಹೆಚ್.ಹಾರ್ಟ್
ಅಮೇರಿಕದ ಖಗೋಳ ಶಾಸ್ತ್ರಜ್ಞ ಮತ್ತು ಇತಿಹಾಸಕಾರರು
-The 100
A Ranking of the Most Influential Persons in History
IslamKannada News Portal
