ಮುಹಮ್ಮದ್(ಸ) ಅರಬ್ ದೇಶದಲ್ಲಿ 6ನೇ ಶತಮಾನದಲ್ಲಿ ಹುಟ್ಟಿದರು. ಆದರೆ ಅದಕ್ಕಿಂತ ಎಷ್ಟೋ ಮುಂಚೆ ಅವರ ಆಗಮನದ ಬಗ್ಗೆ ಹಿಂದೂ ಧರ್ಮದ ವೇದಗಳಲ್ಲಿ ಭವಿಷ್ಯ ನುಡಿಯಲಾಗಿದೆ. ಓರ್ವ ಹಿರಿಯರಿಂದ ಈ ವಿಷಯ ಕೇಳಿ ಆ ಬಗ್ಗೆ ನಾನು ಅದನ್ನು ಹುಡುಕಿದೆ. ವೇದಗಳಲ್ಲಿ ಪ್ರವಾದಿವರ್ಯರ ಆಗಮನದ ಬಗ್ಗೆ ಭವಿಷ್ಯವಾಣಿ ನೋಡಿ ಆಶ್ಚರ್ಯ ಚಕಿತನಾದೆ.
ಮಹರ್ಷಿ ವ್ಯಾಸರ 18 ಪುರಾಣಗಳ ಪೈಕಿ ಒಂದು ಭವಿಷ್ಯ ಪುರಾಣ. ಅದರ ಒಂದು ಶ್ಲೋಕ ಈ ರೀತಿಯಿದೆ.
“ಹೊರ ರಾಷ್ಟ್ರ ಒಂದರಲ್ಲಿ ಓರ್ವ ಆಚಾರ್ಯ ತನ್ನ ಸಂಗಾತಿಗಳೊಂದಿಗೆ ಆಗಮಿಸುವರು. ಅವರ ಹೆಸರು ಮಹಾಮದ ಎಂದಾಗಿರುವುದು. ಅವರು ಮರುಭೂಮಿ ಪ್ರದೇಶದಲ್ಲಿ ಆಗಮಿಸುವರು.” (ಭವಿಷ್ಯ ಪುರಾಣ ಅಧ್ಯಾಯ 3 ಶ್ಲೋಕ 3 ಸೂತ್ರ 5 ರಿಂದ 8)
ಈ ಶ್ಲೋಕ ಮತ್ತು ಸೂತ್ರದಲ್ಲಿ ಹೆಸರು ಮತ್ತು ಸ್ಥಳದ ಸ್ಪಷ್ಟ ಸೂಚನೆಗಳಿವೆ. ಬರಲಿರುವ ಮಹಾನ್ ವ್ಯಕ್ತಿತ್ವದ ಇನ್ನೂ ಕೆಲವು ಕುರುಹುಗಳು ಈ ರೀತಿ ವಿವರಿಸಲ್ಪಟ್ಟಿದೆ.
” ಅವರು ವೃತ್ತಚ್ಛೇದ ಮಾಡಿದವರಾಗಿರುವರು. ಅವರಿಗೆ ಶಿಖೆ ಇರದು. ಅವರು ಗಡ್ಡ ಬೆಳೆಸುವರು. ಮಾಂಸ ಭಕ್ಷಿಸುವರು. ತನ್ನ ಸಂದೇಶವನ್ನು ವ್ಯಕ್ತವಾದ ಭಾಷೆಯಲ್ಲಿ ಪ್ರಭಾವಶಾಲಿಯಾಗಿ ಮುಂದಿಡುವರು. ತನ್ನ ಸಂದೇಶದ ಮೇಲೆ ವಿಶ್ವಾಸ ತರುವವರನ್ನು ಮುಸ್ಲಾಯೀ ಎಂಬ ಹೆಸರಿನಲ್ಲಿ ಕರೆಯುವರು. (ಅಧ್ಯಾಯ 3 ಶ್ಲೋಕ 25 ಸೂತ್ರ 3)
- ಶ್ರೀ ಅಡಿಯಾರ್
ನನ್ನ ಪ್ರೀತಿಯ ಧರ್ಮ ಎಂಬ ಕೃತಿಯಲ್ಲಿ
IslamKannada News Portal
