ಖಡ್ಗವಲ್ಲ ಅದ್ಭುತವಾದ ನಾಯಕತ್ವ
ಇಂದಿಗೂ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಹೃದಯಗಳಲ್ಲಿ ತನ್ನ ನಿರ್ವಿವಾದ ಪ್ರಭಾವವನ್ನು ಅಚ್ಚೋತ್ತಿದ್ದ ಆ ವ್ಯಕ್ತಿಯ ಜೀವನಗಾಥೆಯನ್ನು ತಿಳಿಯಬಯಸಿದ್ದೆ… ಇಸ್ಲಾಮ್ ಧರ್ಮಕ್ಕೆ ಅಂದು ಅರ್ಹವಾದ ಸ್ಥಾನ ಲಭ್ಯವಾದದ್ದು ಖಡ್ಗದಿಂದಾಗಿರಲಿಲ್ಲ ಎಂಬ ಸತ್ಯವು ನನಗಾಗ ಮನವರಿಕೆಯಾಯಿತು.
ಮುಸ್ಲಿಮರು ಅಂದು ಎದುರಿಸಿದ ಪ್ರತಿಯೊಂದು ಅಡಚಣೆಯನ್ನು ಅತಿಜಯಿಸಿ ಮುಂದೆ ಸಾಗಿಸಿದ್ದು ಆ ಪ್ರವಾದಿಯ ಅಚಲವಾದ ಸರಳತೆ, ಪ್ರಸಿದ್ಧಿಯನ್ನು ಬಯಸದ ಅವರ ವಿನಮ್ರತೆ, ಪ್ರತಿಜ್ಞೆಗಳ ಕುರಿತು ಅವರಿಗಿದ್ದ ಸೂಕ್ಷ್ಮ ಪ್ರಜ್ಞೆ, ತಮ್ಮ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗಿನ ಅವರ ನಿಷ್ಠೆ, ಅವರ ಧೈರ್ಯ, ನಿರ್ಭಯತೆ, ತಮ್ಮ ಪ್ರಭುವಿನ ಮೇಲೆ ಅವರಿಗಿದ್ದ ಅಚಲ ವಿಶ್ವಾಸ, ತಮ್ಮ ದೌತ್ಯದ ಬಗ್ಗೆ ಅವರ ಸಂಪೂರ್ಣ ನಂಬಿಕೆಯೇ ಹೊರತು ಇನ್ನೇನಲ್ಲ.
ಖಂಡಿತವಾಗಿಯೂ ಆ ಯಶಸ್ಸಿನ ಮೂಲ ಖಡ್ಗವಲ್ಲ. ಪ್ರವಾದಿ ಜೀವನ ಚರಿತ್ರೆಯ ಎರಡನೇ ಅಧ್ಯಾಯವನ್ನು ಓದಿ ಮುಗಿಸಿದಾಗ ನನಗೆ ಒಂದು ಮಹಾ ದಿಗ್ವಿಜಯದ ಕುರಿತು ಓದಲು ಇನ್ನೂ ಹೆಚ್ಚು ಸಿಗಲಿಲ್ಲವಲ್ಲ ಎಂದು ಖೇದವೆನಿಸಿತು.
ಮೋಹನ್ ದಾಸ ಕರಮಚಂದ ಗಾಂಧಿ
ಭಾರತೀಯರ ಪ್ರೀತಿಯ ಬಾಪೂಜಿ,
ಭಾರತದ ಸ್ವಾತಂತ್ರ ಸಂಗ್ರಾಮದ ನಾಯಕ
(Young India, Quoted in The Light, Lahore,16thept.1924)
IslamKannada News Portal
