Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಇಸ್ಲಾಮಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕನಾಗಿದ್ದಾನೆ – ನಾಗೇಶ್ ಹೆಗಡೆ

ಇಸ್ಲಾಮಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕನಾಗಿದ್ದಾನೆ – ನಾಗೇಶ್ ಹೆಗಡೆ

ಮನುಷ್ಯನ ವಿಕಾಸವಾದ ನಂತರ, ಅವನ ಬೇಕು-ಬೇಡಗಳ ಪಟ್ಟಿ ಬೆಳೆಯುತ್ತ ಹೋದಂತೆಲ್ಲ ಪ್ರಕೃತಿಯ ನಿಯಮಗಳನ್ನು ಆತ ಧಿಕ್ಕರಿಸುವ ಹಂತ ಬಂದಾಗ ವಿವೇಕವಾಣಿ ಅವನನ್ನು ಆಗಾಗ ಎಚ್ಚರಿಸಬೇಕಾದ ಅನಿವಾರ್ಯತೆ ಬಂತು. ಕುರ್‍ಆನ್ ಆ ಕೆಲಸವನ್ನು ಸಮರ್ಥವಾಗಿ ಮಾಡಿದೆ.

ಇಸ್ಲಾಮಿನ ಧಾರ್ಮಿಕ ನಿಯಮಗಳ ಪ್ರಕಾರ, ಪ್ರಕೃತಿಯ ಮೂಲ ಘಟಕಗಳು- ಅಂದರೆ ನೀರು, ಗಾಳಿ, ಬೆಂಕಿ, ಅರಣ್ಯ ಮತ್ತು ಬೆಳಕು- ಕೇವಲ ಮಾನವನಿಗಷ್ಟೇ ಅಲ್ಲ, ಪ್ರಪಂಚದ ಎಲ್ಲ ಜೀವಿಗಳಿಗೂ ಸೇರಿದೆ. ಅವುಗಳ ಸಂರಕ್ಷಣೆ ಮಾಡುವುದು ಮತ್ತು ಅದರ ದುರುಪಯೋಗವಾಗದಂತೆ ಕಣ್ಗಾವಲು ಇಡಬೇಕಾದುದು ಮನುಷ್ಯನ ಕರ್ತವ್ಯವಾಗಿದೆ. ನಿಸರ್ಗದ ಸಂಪತ್ತನ್ನು ಬಳಸುತ್ತಲೇ ಅವನು ಅವುಗಳ ಸಂರಕ್ಷಣೆಯನ್ನೂ ಮಾಡುತ್ತಿರಬೇಕು ಎಂಬ ಕರಾರಿನ ಮೇಲೆಯೇ ಅಂಥ ಸಂಪನ್ಮೂಲಗಳನ್ನು ಬಳಸುವ ಹಕ್ಕು ಅವನಿಗೆ ಪ್ರಾಪ್ತವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕನಾಗಿದ್ದು ಇತರ ಜೀವಿಗಳೊಂದಿಗೆ ಆತ ಸಹಬಾಳ್ವೆಯನ್ನು ನಡೆಸಬೇಕು. ಆತ ಒಬ್ಬ ಖಲೀಫಾ (ಸಂರಕ್ಷಕ) ಕೂಡ ಆಗಿರುವುದರಿಂದ ಅವನ ಪಾಲಿಗೆ ಬಂದ ಆಸ್ತಿಗೆ ಯಾವುದೇ ಧಕ್ಕೆ ಬಾರದಂತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸಬೇಕು. ಇಲ್ಲಿ ‘ಆಸ್ತಿ’ ಎಂದರೆ ಕೇವಲ ಭೂಮಿ ಎಂದಲ್ಲ. ಭೂಮಿಯ ಮೇಲಿನ ಸಕಲ ಚರಾಚರ ವಸ್ತುಗಳು, ಅಂದರೆ ಪ್ರಕೃತಿಯ ಮೂಲ ಘಟಕಗಳು ದುರ್ದೆಸೆಗೀಡಾಗದ ಹಾಗೆ ನೋಡಿಕೊಳ್ಳಬೇಕು.

  • ನಾಗೇಶ್ ಹೆಗಡೆ
    ಖ್ಯಾತ ಪರಿಸರ ಮತ್ತು ವಿಜ್ಞಾನ ಲೇಖಕರು
SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …