Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ರವರ ದೃಷ್ಟಿಯಲ್ಲಿ ಇಸ್ಲಾಮ್

ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ರವರ ದೃಷ್ಟಿಯಲ್ಲಿ ಇಸ್ಲಾಮ್

ಇಸ್ಲಾಮ್ ಜ್ಞಾನದ, ಅರಿವಿನ ಮಹತ್ವದ ಗುಣಗಾನ ಮಾಡುತ್ತದೆ, ಶಿಕ್ಷಣವನ್ನು ಶಿಫಾರಸ್ಸು ಮಾಡುತ್ತದೆ. ಅದು ಹೇಳುತ್ತದೆ, ‘ವಿದ್ವಾಂಸರ (ಲೇಖನಿಯ) ಮಸಿ ಹುತಾತ್ಮರ ರಕ್ತಕ್ಕಿಂತ ಪವಿತ್ರ’. ಪ್ರವಾದಿಯವರು ವಿಜ್ಞಾನದ ಮಹತ್ವವನ್ನು ಮತ್ತು ಕಲಿಕೆಗೆ ಮೀಸಲಾದ ಬದುಕಿನ ಬದ್ಧತೆಯನ್ನು ಎತ್ತಿ ಹಿಡಿಯುತ್ತಾರೆ.

ಆಡಂಬರ, ಐಷಾರಾಮಿ, ವೈಭವ ಮತ್ತು ಪ್ರದರ್ಶನದಲ್ಲಿ ಜೀವನವನ್ನು ನಡೆಸುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಗೆ ಪ್ರವಾದಿ ಮುಹಮ್ಮದರ ಬದುಕಿನಲ್ಲಿ ಒಂದು ಮಹತ್ವದ ಪಾಠವಿದೆ.

ಎರಡೂ ಸಮುದಾಯಗಳಲ್ಲಿ ದ್ವೇಷ ಮತ್ತು ಹಿಂಸಾಚಾರದ ಪ್ರವೃತ್ತಿಯನ್ನು ಹೊಂದಿರುವ ಜನರ ಪ್ರಮಾಣ ತುಂಬಾ ಗೌಣವಾಗಿದೆ. ಈ ಪರಸ್ಪರ ವಿಶ್ವಾಸದ ಉತ್ಕೃಷ್ಟ ಸಂಪತ್ತಿನ ಸಂವೃದ್ಧಿಗಾಗಿ ಎರಡೂ ಸಮುದಾಯಗಳು ಪರಿಶ್ರಮ ಪಡಬೇಕು, ಮತ್ತು ‘ಇನ್ಸಾನಿ ಬಿರಾದರಿ’, ‘ಮಾನವೀಯ ಭ್ರಾತೃತ್ವ’ವನ್ನು ಸದೃಢಗೊಳಿಸಬೇಕು. ನಾವು ಎಲ್ಲವನ್ನೂ ಕಳೆದುಕೊಂಡಿಲ್ಲ – ಇನ್ನೂ. ಮುಸಲ್ಮಾನರು ತಮ್ಮ ಧರ್ಮಕ್ಕೆ ನಿಜವಾಗಿಯೂ ನಿಷ್ಠರಾದರೆ, ಹಿಂದುಗಳು ತಮ್ಮ ಧರ್ಮಕ್ಕೆ ನಿಷ್ಠರಾದರೆ ಸುಂದರವಾದ ಭಾರತಕ್ಕೆ ಇನ್ನೂ ಸುವರ್ಣ ಭವಿಷ್ಯದ ಭರವಸೆಯಿದೆ. ಪ್ರವಾದಿ ಮುಹಮ್ಮದರ “ಉಮ್ಮತೆ ವಾಹಿದಾ” ಅದೇ ಆಗಿತ್ತು, ಮತ್ತು  ನಮ್ಮ ಜಾತ್ಯತೀತ ಭಾರತದ ಕನಸೂ ಅದೇ ಆಗಿದೆ.

  • ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ
    ನಿವೃತ್ತ ಮುಖ್ಯ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಾಲಯ
SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …

Leave a Reply

Your email address will not be published. Required fields are marked *