Home / ಲೇಖನಗಳು / ಆಸೆ ಮತ್ತು ದುರಾಸೆ

ಆಸೆ ಮತ್ತು ದುರಾಸೆ

ಆಸೆ ಎಂಬುದು ಬದುಕಿನ ಚಾಲಕ ಶಕ್ತಿ.ಹಸಿವಾದಾಗ ಆಹಾರ, ಮೈ ಮುಚ್ಚಲಿಕ್ಕಾಗಿ,ದೇಹರ ರಕ್ಷಣೆಗಾಗಿ ಮತ್ತು ಅಲಂಕಾರಕ್ಕಾಗಿ ಉಡುಪು,ಸೌಲಭ್ಯ ಇರುವ ಮನೆ, ಸವಾರಿಗಾಗಿ ವಾಹನ, ಕುಟುಂಬಕ್ಕೆ ಒಳ್ಳೆಯ ಭವಿಷ್ಯ – ಇವೆಲ್ಲವೂ ಮನುಷ್ಯನ ಸಹಜ ಆಸೆಗಳು. ಇದು ತಪ್ಪಲ್ಲ. ಇದುವೇ ಮನುಷ್ಯನನ್ನು ಬೆಳಗ್ಗೆ ಎದ್ದು ದುಡಿಯಲು ಪ್ರೇರೇಪಿಸುತ್ತದೆ. ಆಸೆ ಇಲ್ಲದಿದ್ದರೆ ಜೀವನವೇ ಇಲ್ಲ. ಆಸೆ ಒಂದು ಕುದುರೆಯಿದ್ದಂತೆ. ಸರಿಯಾಗಿ ಲಗಾಮು ಹಿಡಿದು ಸವಾರಿ ಮಾಡಿದರೆ ಅದು ನಮ್ಮನ್ನು ಗುರಿ ಮುಟ್ಟಿಸುತ್ತದೆ.

ದುರಾಸೆ ಎಂದರೆ ಮನಸ್ಸಿನ ಬಡತನ. ಜೇಬು ತುಂಬಿದ್ದರೂ ಮನಸ್ಸು ಖಾಲಿಯಾದ ಅನುಭವ. ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ: “ಆದಮನ ಮಗನಿಗೆ ಒಂದು ಚಿನ್ನದ ಕಣಿವೆ ಸಿಕ್ಕಿದರೆ ಎರಡನೆಯದಕ್ಕೆ ಆಸೆ ಪಡುತ್ತಾನೆ. ಅವನ ಬಾಯನ್ನು ಮಣ್ಣು ಮಾತ್ರ ತುಂಬಬಲ್ಲದು.” (ಬುಖಾರಿ)

ದುರಾಸೆ ಎಂದರೆ ಅಗತ್ಯ ಮುಗಿದ ಮೇಲೂ ಇನ್ನೂ ಬೇಕು, ಇನ್ನೂ ಬೇಕು ಎನ್ನುವ ದಾಹ. ನ್ಯಾಯ-ಅನ್ಯಾಯ ನೋಡದೆ, ಬೇರೆಯವರ ಹಕ್ಕನ್ನು ಕಿತ್ತುಕೊಂಡಾದರೂ ಸರಿ ಪಡೆಯಲೇಬೇಕು ಎಂಬ ಮನೋಭಾವ. ಆಸೆ ಕುದುರೆಯಾದರೆ, ದುರಾಸೆ ಹುಚ್ಚು ಕುದುರೆ. ಹುಚ್ಚು ಕುದುರೆಗೆ ಲಗಾಮು ಹಾಕದಿದ್ದರೆ ಅದು ನಮ್ಮನ್ನೇ ತುಳಿದು ಬಿಡುತ್ತದೆ.

ನದಿಗೆ ದಂಡೆ ಇರುವಂತೆ, ಜೀವನಕ್ಕೆ ಸಂತೃಪ್ತಿ ಇರಬೇಕು. ದಂಡೆ ಇಲ್ಲದ ನದಿ ಊರನ್ನೇ ಮುಳುಗಿಸುತ್ತದೆ. ಸಂತೃಪ್ತಿ ಇಲ್ಲದ ಆಸೆ ಬದುಕನ್ನೇ ಮುಳುಗಿಸುತ್ತದೆ ಎಂಬುದೇ ವಾಸ್ತವ.

✍️ ಶಮೀರಾ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …