ವಾಷಿಂಗ್ಟನ್,ಮೇ.8: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣದಲ್ಲಿರುವ ಡೆಮಾಕ್ರಾಟಿಕ್ ಪಾರ್ಟಿಯ ಅಮೆರಿಕ ಅಧ್ಯಕ್ಷ ಸ್ಥಾನದ ಸ್ಪರ್ಧಿ ಜೊ ಬಿಡನ್ ತಾನು ಅಧ್ಯಕ್ಷನಾಗಿ ಆಯ್ಕೆ ಆದರೆ ತಾನು ಟ್ರಂಪ್ ತಡೆಹಿಡಿದ ಫೆಲಸ್ತೀನ್ ಸಹಾಯ ಧನವನ್ನು ಆದೇಶ ತಡೆದು ನಿಲ್ಲಿಸಿ ಪುನಃ ಫೆಲಸ್ತೀನಿಯರಿಗೆ ನೆರವನ್ನು ಮುಂದುವರಿಸಲಿದ್ದೇನೆ ಎಂದು ಜೊ ಬಿಡನ್ ಹೇಳಿದರು.
ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರಾಚ್ಯ, ಫೆಲಸ್ತೀನ್ಗಳಿಗೆ ಅಮೆರಿಕ ಕೊಡುತ್ತಿದ್ದ ಸಹಾಯ ನಿಧಿಯನ್ನು ರದ್ದು ಪಡಿಸಿದ್ದರು. ಈ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ತಾನು ಗೆದ್ದರೆ ಸಹಾಯ ನಿಧಿ ಪುನರಾರಂಭಗೊಳಿಸುವೆ ಎಂದು ಬೆಡನ್ ಹೇಳಿದರು.ಜೊತೆಗೆ ಸ್ಟೇಟ್ ಡಿಪಾರ್ಟ್ಮೆಂಟ್ ಸ್ಟಾಫ್ಗಳನ್ನು ಪುನರ್ ಸಂಘಟಿಸುವೆ ಎಂದು ಅವರು ತಿಳಿಸಿದರು.
ಟ್ರಂಪ್ ಸರಕಾರ ಸ್ಟೇಟ್ ಡಿಪಾರ್ಟ್ಮೆಂಟ್ನ ವ್ಯವಹಾರ ನಿರ್ವಹಣೆಗೆ ಬಜೆಟ್ನಲ್ಲಿ ಕಡಿಮೆ ಹಣ ತೆಗೆದಿರಿಸಿದೆ. ಇದು ಅಮೆರಿಕದ ರಾಜತಾಂತ್ರಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ.
IslamKannada News Portal
