Home / ವಾರ್ತೆಗಳು / ಮಕ್ಕಾ ಮದೀನಾದಲ್ಲಿ ಅತ್ಯಾಧುನಿಕ ವೈರಸ್ ನಾಶಕ ಗೇಟುಗಳ ಸ್ಥಾಪನೆ

ಮಕ್ಕಾ ಮದೀನಾದಲ್ಲಿ ಅತ್ಯಾಧುನಿಕ ವೈರಸ್ ನಾಶಕ ಗೇಟುಗಳ ಸ್ಥಾಪನೆ

ಮಕ್ಕಾ,ಮೇ.8: ಕೊರೋನಾವನ್ನು ಎದುರಿಸಲು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಸೌದಿ ಅರೇಬಿಯಾ ಸರಕಾರ ಮುಂದೆ ಸಾಗುತ್ತಿದೆ. ಇದರ ಭಾಗವಾಗಿ ಮಕ್ಕಾ ಮತ್ತು ಮದೀನಾಗಳಲ್ಲಿ ಅಣುನಾಶಕ(ವೈರಸ್ ನಾಶಕ) ಗೇಟನ್ನು ಸ್ಥಾಪಿಸಲಾಗಿದೆ. ಮಕ್ಕಾ ಮತ್ತು ಮದೀನದ ಪವಿತ್ರ ಮದಿಯನ್ನು ಪ್ರವೇಶಿಸುವ ಮೊದಲು ತಪಾಸಣೆಗಾಗಿ ಈ ಗೇಟನ್ನು ಸ್ಥಾಪಿಸಲಾಗಿದೆ.

ಈ ಗೇಟಿನ ಮೂಲಕ ಹೋಗುವ ವೇಳೆ ಥರ್ಮಲ್ ಕ್ಯಾಮರಾದ ಮೂಲಕ ದೇಹದ ಉಷ್ಣತೆಯನ್ನು ಮಾಪನ ಮಾಡಲಾಗುವುದು. ಇದಕ್ಕೆ ಅನ್‌ಸೆಪ್ಟಿಕ್ ಸ್ಪ್ರೇ ಸಿಂಪಡಿಸಲಾಗುವುದು. ಜ್ವರವೋ ಕೊರೋನಾದ ಲಕ್ಷಣಗಳು ಇದ್ದರೆ ಕಂಪ್ಯೂಟರ್ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ.

ಆರು ಮೀಟರ್ ದೂರದಿಂದ ಇದು ಸ್ಕ್ಯಾನ್ ಮಾಡಲಿದೆ. ಒಂದೇ ಸಮಯದಲ್ಲಿ ಹಲವು ಜನರ ಉಷ್ಣತೆಯ ಮಟ್ಟ ಪರಿಶೀಲಿಸಲಿದೆ. ಮಸೀದಿಗೆ ಹೋಗುವ ಮೊದಲು ಎಲ್ಲ ಸಿಬ್ಬಂದಿಗಳು ಇನ್ನು ಮುಂದೆ ಈ ಗೇಟ್‍ನ ಮೂಲಕ ಹಾದು ಹೋಗಬೇಕಾಗಿದೆ. ಈ ಗೇಟ್ ಆಗಾಗ ಸ್ವಯಂ ವೈರಸ್ ಮುಕ್ತವಾಗುತ್ತದೆ. ಅದಕ್ಕೆ ಬೇಕಾದ ಆಟೊಮ್ಯಾಟಿಕ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …