Home / ವಾರ್ತೆಗಳು / ಕೊರೋನಾ ಅಂತ್ಯಕ್ಕಾಗಿ ಮೇ. 14ರಂದು ಎಲ್ಲ ಧರ್ಮೀಯರು ರಮಝಾನ್ ಉಪವಾಸ ಆಚರಿಸಿ- ಪೋಪ್ ಫ್ರಾನ್ಸಿಸ್ ಕರೆ

ಕೊರೋನಾ ಅಂತ್ಯಕ್ಕಾಗಿ ಮೇ. 14ರಂದು ಎಲ್ಲ ಧರ್ಮೀಯರು ರಮಝಾನ್ ಉಪವಾಸ ಆಚರಿಸಿ- ಪೋಪ್ ಫ್ರಾನ್ಸಿಸ್ ಕರೆ

ಸಾಂಕ್ರಾಮಿಕ ರೋಗವನ್ನು ಜಗತ್ತಿನಿಂದ ಹೋಗಲಾಡಿಸುವಂತೆ ದೇವರನ್ನು ಪ್ರಾರ್ಥಿಸಲು ಮತ್ತು ಸೋಂಕಿನಿಂದ ಬಳಲಿರುವ ಎಲ್ಲ ವ್ಯಕ್ತಿಗಳಿಗೆ ಗುಣಮುಖವಾಗುವ ಲಸಿಕೆ ಲಭ್ಯವಾಗುವಂತೆ ಮೇ 14 ರಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಹಾಗೂ ರಮಝಾನ್ ಉಪವಾಸ ವ್ರತ ಆಚರಿಸುವಂತೆ ಪೋಪ್ ಫ್ರಾನ್ಸಿಸ್ ಎಲ್ಲಾ ಧರ್ಮದ ಅನುಯಾಯಿಗಳಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ, “ಎಲ್ಲಾ ಧರ್ಮಗಳ ವಿಶ್ವಾಸಿಗಳು ಮೇ 14 ರಂದು ಪ್ರಾರ್ಥನೆ ಮತ್ತು ಉಪವಾಸ ವ್ರತವನ್ನು ಆಚರಿಸುವ ಮೂಲಕ ಆಧ್ಯಾತ್ಮಿಕವಾಗಿ ಒಂದಾಗಬೇಕು, ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಗಡಿ, ಭಾಷೆ,ಸಂಸ್ಕೃತಿಯನ್ನು ದಾಟಿದ್ದು, ಇದರಿಂದ ಹೊರಬರಲು ಮಾನವೀಯತೆಗೆ ಸಹಾಯ ಮಾಡುವಂತೆ ದೇವರನ್ನು ಬೇಡಿಕೊಳ್ಳಬೇಕು” ಎಂಬ ಕರೆಗೆ ಪೋಪ್ ಫ್ರಾನ್ಸಿಸ್ ಅನುಮೋದನೆ ನೀಡಿದರು.

ಉನ್ನತ ಮಟ್ಟದ ಪರಸ್ಪರ ಸಂಬಂಧದ ಗುಂಪಾದ ಮಾನವ ಭ್ರಾತೃತ್ವದ ಉನ್ನತ ಸಮಿತಿಯು ಮುಂದಿನ ಮೇ 14 ರಂದು ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯಲು ವಿಶ್ವ ಪ್ರಾರ್ಥನಾ ದಿನವನ್ನು ಆಯೋಜಿಸಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.

ವಿಶ್ವಾದ್ಯಂತದ ಈ ಪ್ರಾರ್ಥನೆಯ ದಿನದ ಪ್ರಸ್ತಾಪವು ಮೂಲತಃ ಸೆಪ್ಟೆಂಬರ್ 2019 ರಲ್ಲಿ ಸ್ಥಾಪಿಸಲಾದ ಮಾನವ ಭ್ರಾತೃತ್ವ ಕಮಿಟಿಯಿಂದ ಬಂದಿದೆ. ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ ‌ಗೆ ಪೋಪ್ ಭೇಟಿಯ ಸಮಯದಲ್ಲಿ “ವಿಶ್ವ ಶಾಂತಿ ಮತ್ತು ಜೀವನಕ್ಕಾಗಿ ಮಾನವ ಭ್ರಾತೃತ್ವ ಕುರಿತ ದಾಖಲೆಗೆ ಪೋಪ್ ಫ್ರಾನ್ಸಿಸ್ ಮತ್ತು ಶೇಖ್ ಅಹ್ಮದ್ ಎಲ್-ತೆಯೆಬ್ ಅವರು ಸಹಿ ಹಾಕಿದ್ದರು.

ಮನವಿಯನ್ನು ಇಂಗ್ಲಿಷ್, ಇಟಾಲಿಯನ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಅರೇಬಿಕ್, ಅಫ್ಘಾನ್, ಮಲೇಷಿಯನ್, ಪರ್ಷಿಯನ್, ಸ್ವಹಿಲಿ, ಟರ್ಕಿಶ್, ಉರ್ದು, ಚೈನೀಸ್ ಮತ್ತು ಹೀಬ್ರೂ ಭಾಷೆಗಳಲ್ಲಿ ಪ್ರಕಟಿಸಲಾಗಿದೆ.

ಅಲ್ಲದೇ, ಈ ಕುರಿತಾಗಿ ಮುಹಮ್ಮದ್ ಬಿನ್ ಝಾಹಿದ್ ರವರು ಕೂಡಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಮೇ. 14 ರಂದು ವಿಶ್ವಾದ್ಯಂತ ಒಂದು ಗೂಡುವಂತೆ ಕರೆ ನೀಡಿದ್ದಾರೆ.

 

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …