Home / ವಾರ್ತೆಗಳು / ಮಕ್ಕಾ ಮಸ್ಜಿದುಲ್ ಹರಾಮ್ ; ಶುಕ್ರವಾರ ನಮಾಝ್ ಗೆ ಲಕ್ಷಾಂತರ ಭಾರತೀಯರು ಭಾಗಿ

ಮಕ್ಕಾ ಮಸ್ಜಿದುಲ್ ಹರಾಮ್ ; ಶುಕ್ರವಾರ ನಮಾಝ್ ಗೆ ಲಕ್ಷಾಂತರ ಭಾರತೀಯರು ಭಾಗಿ

ಕಳೆದ ಶುಕ್ರವಾರ ಜುಮಾ ನಮಾಝ್ ಮಾಡುವುದಕ್ಕಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಲಕ್ಷಕ್ಕಿಂತಲೂ ಅಧಿಕ ಭಾರತೀಯರು ಸೇರಿದ್ದರು ಎಂದು ವರದಿಯಾಗಿದೆ. ಮಕ್ಕಾದಲ್ಲಿ ಈಗ ತೀವ್ರ ಬಿಸಿಲಿದ್ದು ಈಗಾಗಲೇ ಮಕ್ಕ ಮತ್ತು ಮದೀನದಲ್ಲಿ 10 ಲಕ್ಷಕ್ಕಿಂತ ಅಧಿಕ ಮಂದಿ ಸೇರಿದ್ದಾರೆ ಎಂದು ವರದಿಯಾಗಿದೆ.

1,16,000 ಮಂದಿ ಭಾರತೀಯ ಹಜ್ ಯಾತ್ರಾರ್ಥಿಗಳು ಹರಮ್ ನ ಜುಮಾ ನಮಾಝ್ ನಲ್ಲಿ ಭಾಗಿಯಾಗಿದ್ದಾರೆ. ತೀರ ವಯಸ್ಸಾಗಿರುವ ಹಾಜಿಗಳಲ್ಲಿ ತಮ್ಮ ಹತ್ತಿರದ ಮಸೀದಿಯಲ್ಲಿ ಜುಮಾ ನಮಾಜಿನಲ್ಲಿ ಭಾಗಿಯಾಗಿ ಎಂದು ಕೇಳಿಕೊಳ್ಳಲಾಗಿತ್ತು.

ಹರಮ್ ನಲ್ಲಿ ತೀವ್ರ ರಶ್ ಮತ್ತು ಹೊರಗೆ ತಡೆಯಲಾಗದ ಬಿಸಿಲು ಇರುವುದರಿಂದ ಹೀಗೆ ಕೇಳಿಕೊಳ್ಳಲಾಗಿತ್ತು. ಇದರ ನಡುವೆಯೂ ಇಷ್ಟು ಭಾರಿ ಸಂಖ್ಯೆಯಲ್ಲಿ ಭಾರತೀಯರು ಹರಂನಲ್ಲಿ ಜುಮಾ ನಮಾಜ್ ಮಾಡಿದ್ದಾರೆ

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …