ಟೋಕಿಯೊ, ನ. 29: ಜಪಾನ್ ರಾಜಧಾನಿ ಟೋಕಿಯೊದಲ್ಲಿ ಮುಂದಿನ ವರ್ಷ ಒಲಿಪಿಂಕ್ ಗೇಮ್ಸ್ ನಡೆಯಲಿದ್ದು ಅಲ್ಲಿಗೆ ಬರುವ ಮುಸ್ಲಿಂ ಆಟಗಾರರಿಗೆ ನಮಾಝ್ ನಿರ್ವಹಿಸಲು ಅನುವಾಗುವಂತೆ ಮೊಬೈಲ್ ಮಸೀದಿ ನಿರ್ಮಿಸಲಾಗಿದೆ.
ಸ್ಟೇಡಿಯಂ ಹೊರಗೆ ಮೊಬೈಲ್ ಮಸೀದಿ ಇರಿಸಲಾಗುವುದು. ಇದರಲ್ಲಿ ಐವತ್ತು ಮಂದಿ ನಮಾಝ್ ಮಾಡಬಹುದು. ಜೊತೆ ವಝೂ ನಿರ್ವಹಿಸಲು ವ್ಯವಸ್ಥೆ ಇದೆ. ಇದನ್ನು ಟೊಕಿಯೊ ಸ್ಪೋಟ್ಸ್ ಆಂಡ್ ಕಲ್ಚರ್ ಕಂಪೆನಿ ತಯಾರಿಸಿದೆ.
ಕಂಪೆನಿ ಮಸೀದಿಯಾಗಿ ದೊಡ್ಡ ಟ್ರಕ್ಗಳನ್ನು ರೂಪಾಂತರಿಸಿದೆ. ಎಲ್ಲಿ ಇಟ್ಟರೂ ಅದರ ಹಿಂಬದಿಯ ಭಾಗವನ್ನು ರಿಮೊಟಿನಲ್ಲಿ ಎತ್ತಬಹುದು. ಒಂದು ಏಣಿ ಬರುತ್ತದೆ. ಹಿಂದಿನ ಗೇಟು ತೆರೆಯುತ್ತದೆ. ಇದರೊಳಗೆ 551 ಸ್ಕ್ವಾರ್ ಪೀಟು ಆಕಾರ ಇದೆ. ಇದರಲ್ಲಿ ಗರಿಷ್ಠ ಐವತ್ತು ಮಂದಿ ನಮಾಝ್ ನಿರ್ವಹಿಸಬಹುದು.
ಟೋಕಿಯದಲ್ಲಿ ಕೇವಲ ನಾಲ್ಕು ಮಸೀದಿಗಳಿವೆ. ಹೊರಗಿನಿಂದ ಇಲ್ಲಿಗೆ ಬರುವ ಮುಸ್ಲಿಮರಿಗೆ ಯಾವಾಗಲೂ ಸಮಸ್ಯೆ ಮಸೀದಿಗಳಿಲ್ಲ ಎಂಬುದಾಗಿದೆ. ಜಪಾನ್ನಲ್ಲಿ ಮೊದಲ ಮಸೀದಿ 1935ರಲ್ಲಿ ನಿರ್ಮಾಣವಾಯಿತು. ಇಡೀ ಜಪಾನ್ನಲ್ಲಿ ಅರುವತ್ತು ಮಸೀದಿ ಇರುವುದು. ಮೊಬೈಲ್ ಮಸೀದಿಯನ್ನು 2016ರಲ್ಲಿ ಇಂಡೊನೇಶಿಯದಲ್ಲಿ ಜಾರಿಗೆ ತರಲಾಗಿತ್ತು.
IslamKannada News Portal
