Home / ವಾರ್ತೆಗಳು / ಕೊರೋನಾ ಸೋಂಕಿಗೆ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು: ಒಮಾನಿನ ಇಂಡಿಯನ್ ಸೋಷಿಯಲ್ ಕ್ಲಬ್‌ನ ಮಾನವೀಯ ಸ್ಪಂದನೆಗೆ ವ್ಯಾಪಕ ಪ್ರಶಂಸೆ

ಕೊರೋನಾ ಸೋಂಕಿಗೆ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು: ಒಮಾನಿನ ಇಂಡಿಯನ್ ಸೋಷಿಯಲ್ ಕ್ಲಬ್‌ನ ಮಾನವೀಯ ಸ್ಪಂದನೆಗೆ ವ್ಯಾಪಕ ಪ್ರಶಂಸೆ

ಮಸ್ಕತ್,ಮೇ‌.19: ಕೊರೋನ ವೈರಸ್‌ನ ಭೀತಿಯಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗ, ಒಮಾನ್‌ನಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಭಾರತೀಯ ಹಿಂದೂ ವ್ಯಕ್ತಿಯೊಬ್ಬರ ಅಂತಿಮ ವಿಧಿಗಳನ್ನು ಮುಸ್ಲಿಮ್ ಯುವಕರ ಗುಂಪು ನೆರವೇರಿಸಿದ್ದು, ಒಮಾನ್ ನಲ್ಲಿ ಮಾನವೀಯತೆ ಹಾಗೂ ಸಹೋದರತೆಗೆ ಮಾದರಿಯಾಗಿದೆ.

ಕೊರೋನಾ ಸೋಂಕಿನ ಭಯದಿಂದಾಗಿ ಅವರ ಸಂಬಂಧಿಕರು ಮತ್ತು ಸ್ನೇಹಿತರು ದೂರವಿರಲು ನಿರ್ಧರಿಸುತ್ತಿದ್ದನ್ನರಿತ ಕೂಡಲೇ, ಇಂಡಿಯನ್ ಸೋಷಿಯಲ್ ಕ್ಲಬ್‌ನ (ಐಎಸ್‌ಸಿ) ಕಾರ್ಯ ನಿರ್ವಾಹಕ ಸದಸ್ಯ ಸುಹೇಲ್ ಖಾನ್ ಮತ್ತು ಅವರ ತಂಡವು ಅಂತಿಮ ವಿಧಿಗಳನ್ನು ನೆರವೇರಿಸುವ ಮೂಲಕ ಸಹೋದರತ್ವ ಮತ್ತು ಕೋಮು ಸೌಹಾರ್ದತೆಗೆ ಮಾದರಿಯಾದರು.

ಐಎಸ್‌ಸಿಯ ಅವಧಿ ವಿಂಗ್‌ನ ಸಂಜಿತ್ ಕನೋಜಿಯಾ ಹಾಗೂ ಸುಹೇಲ್‌ರವರು ಸೇರಿ ಅಂತಿಮ ಕ್ರಿಯೆಗಳ ತಯಾರಿ ನಡೆಸಿದರೆ ಅವರ ಸ್ನೇಹಿತರಾದ ಜಫ್ರೀ, ಒಬೈದಿ ಮತ್ತು ತಮೀಮ್ ಮೃತರ ಅಂತಿಮ ವಿಧಿಗಳನ್ನು ನೆರವೇರಿಸಲು ಸಹಾಯ ಮಾಡಿದರು.

“ನಾವು ಮೃತರ ಅಂತ್ಯ ಸಂಸ್ಕಾರವನ್ನು ಸಂಪೂರ್ಣ ಹಿಂದೂ ವಿಧಿಗಳೊಂದಿಗೆ ಸೊಹರ್‌ನಲ್ಲಿ ನೆರವೇರಿಸಿದೆವು. ಇದು ಕಠಿಣ ಸಮಯ ಮತ್ತು ಜನರು ಹೊರಬಂದು ಇತರರ ಕಷ್ಟದಲ್ಲಿ ಭಾಗಿಯಾಗಲು ಸಾಧ್ಯವಾಗದ ಭಯಾತಂಕದ ಸಮಯವಾಗಿದೆ. ಆದರೂ ಈ ಸಂದಿಗ್ಧತೆಯಲ್ಲಿ ಸಂಪೂರ್ಣ ಬೆಂಬಲ ನೀಡಿದ ನಮ್ಮ ತಂಡದ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ”ಎಂದು ಖಾನ್ ಈ ಸಂದರ್ಭದಲ್ಲಿ ಹೇಳಿದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …