Home / ವಾರ್ತೆಗಳು / ಅಂತಾರಾಷ್ಟ್ರೀಯ ಮಟ್ಟದ ಕು‌ರ್ ಆನ್ ಪಾರಾಯಣ ಸ್ಪರ್ಧೆ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಆರಂಭ

ಅಂತಾರಾಷ್ಟ್ರೀಯ ಮಟ್ಟದ ಕು‌ರ್ ಆನ್ ಪಾರಾಯಣ ಸ್ಪರ್ಧೆ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಆರಂಭ

ಜಿದ್ದಾ: ಇಲ್ಲಿನ ಸಾಂಸ್ಕೃತಿಕ ಅಥಾರಿಟಿಯು ಸಂಘಟಿಸುತ್ತಿರುವ ಎರಡನೇಯ ಅಂತಾರಾಷ್ಟ್ರೀಯ ಕುರ್‌ಆನ್ ಪಾರಾಯಣ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಪ್ರಾರಂಭವಾಗಿದೆ. ಅಥಾರಿಟಿ ಚೇರ್‌ಮೇನ್ ತುರ್ಕಿ ಬಿನ್ ಅಬ್ದುಲ್ ಮುಲ್ಸನ್ ಆಲುಶೈಖ್ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ಈ ಸ್ಪರ್ಧೆಗೆ “ಅತ್ತರುಲ್ ಕಲಾಮ್” ಎಂದು ಹೆಸರಿಸಲಾಗಿದೆ.

ಕುರ್ ಆನ್ ಪಾರಾಯಣ ಮತ್ತು ಅದಾನ್ ಜೊತೆಯಾಗಿ ಮೊದಲ ಬಾರಿಗೆ ನಡೆಸುವ ವಿಶ್ವದ ಅತೀ ದೊಡ್ಡ ಸ್ಪರ್ದೆಯಾಗಿದ್ದು, ವಿಜೇತರಿಗೆ 1.2 ಕೋಟಿ ರಿಯಾಲ್‌ಗಿಂತಲೂ ಅಧಿಕ ಬಹುಮಾನ ಘೋಷಿಸಲಾಗಿದೆ. ಈ ಸ್ಪರ್ಧೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಸ್ಪರ್ಧಿಗಳು ಮೊದಲು ಕು‌ಆನ್ ಪಾರಾಯಣ, ಅದಾನ್ ರೆಕಾರ್ಡ್ ಮಾಡಿ ಆಡಿಯೋ ಕ್ಲಿಪನ್ನು https://otrelkalam.com ಸೈಟಲ್ಲಿ ಅಪ್‌ಲೋಡ್ ಮಾಡಬೇಕು.

ತೀರ್ಪುಗಾರರಿಂದ ಆಯ್ಕೆಯಾದವರು ಎರಡನೇ ಹಂತದ ಸ್ಪರ್ಧೆಗೆ ತೇರ್ಗಡೆಯಾಗಲಿದ್ದಾರೆ. ಮೂರನೇ ಹಂತಕ್ಕೆ ತೇರ್ಗಡೆಯಾಗಲು ಹೊಸ ಆಡಿಯೋ ಕ್ಲಿಪ್ ಕಳುಹಿಸಬೇಕು. ಅದರಲ್ಲಿ ತೇರ್ಗಡೆ ಹೊಂದಿದ ನುರಿತ ಸ್ಪರ್ಧಾಳುಗಳು ನಾಲ್ಕನೇಯ ಹಂತಕ್ಕೆ ಪ್ರವೇಶಿಸಲಿದ್ದಾರೆ. ನಾಲ್ಕನೇಯ ಹಂತದ ಸ್ಪರ್ಧೆಯು ಅಂತಿಮ ಹಂತವಾಗಿದ್ದು ಅದು ಎಮ್.ಬಿ.ಸಿ. ಶಾಹಿದ್ ಅಪ್ಲಿಕೇಶನ್ ಮೂಲಕ ರಮಝಾನ್‌ನಲ್ಲಿ ಪ್ರಸಾರವಾಗಲಿದೆ.

ಈ ಸ್ಪರ್ಧೆಯ ಪ್ರಥಮ ಹಂತಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಸ್ಪರ್ಧಾಳುಗಳು ಭಾಗವಹಿಸಬಹುದು. ಈಗಾಗಲೇ 80 ರಾಷ್ಟ್ರಗಳಿಂದ 40,000 ಸ್ಪರ್ಧಾಳುಗಳು ದಾಖಲಾತಿ ಮಾಡಿಕೊಂಡಿದ್ದು, ಆನ್‌ಲೈನ್ ಮೂಲಕ ಮುಕ್ತವಾಗಿ ಭಾಗವಹಿಸಲು ಅಥಾರಿಟಿ ಅವಕಾಶ ಕಲಿಸಿಕೊಟಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …