Home / ವಾರ್ತೆಗಳು / ಶಾಂತಪುರಂ ಅಲ್‍‌ ಜಾಮಿಯಾ ಅಧ್ಯಕ್ಷ ಎಂ. ಕುಂಞಿಮುಹಮ್ಮದ್ ಮೌಲವಿ ನಿಧನ

ಶಾಂತಪುರಂ ಅಲ್‍‌ ಜಾಮಿಯಾ ಅಧ್ಯಕ್ಷ ಎಂ. ಕುಂಞಿಮುಹಮ್ಮದ್ ಮೌಲವಿ ನಿಧನ

ಕರುವಾರಕುಂಡ್, ಮೇ.16: ಪ್ರಮುಖ ವಿದ್ವಾಂಸ ಗ್ರಂಥಕಾರ ಶಾಂತಪುರಂ ಅಲ್ ಜಾಮಿಯಾದ ಅಧ್ಯಕ್ಷರಾದ ಎಂ. ಕುಂಞಿಮುಹಮ್ಮದ್ ಮೌಲವಿ(74)ನಿಧರಾದರು. ವೆಲ್ಲೂರ್ ಬಾಖಿಯಾತ್ತುಸ್ಸಾಲಿಹತ್‍ನಿಂದ ಪದವಿ ಪಡೆದ ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ಇದರ ವಿವಿಧ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಮುಸ್ಲಿಂ ವಾರೀಸು ಹಕ್ಕುಗಳ ಕುರಿತು ಹೆಚ್ಚು ತಜ್ಞ ಜ್ಞಾನವನ್ನು ಹೊಂದಿದ್ದರು. ಈ ವಿಷಯದಲ್ಲಿ ಅವರು ಗ್ರಂಥಗಳನ್ನು ರಚಿಸಿದ್ದಾರೆ. ಶಾಂತಪುರಂ ಮೊಹಲ್ಲ ಅಸಿಸ್ಟೆಂಟ್ ಖಾಝಿ, ಕರುವಾರಕುಂಡ್ ಐಡಿಯಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಮೌಲವಿ ಅವರು ಕರುವಾರಕುಂಡು ಪುಲ್ವೇಟ್ಟದ ದಿವಂಗತ ಮಠತ್ತೊಡಿಗ ಕುಂಞಿ ಸೂಫೀ ಹಾಜಿ ಹಾಗೂ ಆಯಿಶಾ ದಂಪತಿಗಳ ಪುತ್ರರಾಗಿದ್ದಾರೆ.

ಆಟ್ಟುಪ್ಪಾರ ಫಾತಿಮಾ ಪತ್ನಿ, ನಾಲ್ವರು ಮಕ್ಕಳನ್ನು ಮೃತರು ಅಗಲಿದ್ದಾರೆ. ಜಮಾಅತೆ ಇಸ್ಲಾಮಿ ಕೇರಳ ಘಟಕಾಧ್ಯಕ್ಷ ಎಂ.ಐ.ಅಬ್ದುಲ್ ಅಝೀಝ್ ಮುಂತಾದವರು ಜನಾಝಾ ನಮಾಝ್‍ನಲ್ಲಿ ಪಾಲ್ಗೊಂಡರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …