Home / ವಾರ್ತೆಗಳು / ಕಾಶ್ಮೀರದ ವಾಸಿಂ ಅಹಮದ್ ಭಟ್ ಗೆ ದೇಶವೇ ಸೆಲ್ಯೂಟ್: ಅಷ್ಟಕ್ಕೂ ಆತನ ಸಾಧನೆ ಏನು?

ಕಾಶ್ಮೀರದ ವಾಸಿಂ ಅಹಮದ್ ಭಟ್ ಗೆ ದೇಶವೇ ಸೆಲ್ಯೂಟ್: ಅಷ್ಟಕ್ಕೂ ಆತನ ಸಾಧನೆ ಏನು?

ಯಾವಾಗಲೂ ದೊಡ್ಡ ಮಟ್ಟದಲ್ಲಿ ಆಲೋಚಿಸಬೇಕು ಎಂದು ದೊಡ್ಡಪ್ಪ ಹೇಳುತ್ತಿದ್ದರು. ನಾನೀಗ ಸಂತೋಷವಾಗಿದ್ದೇನೆ. ಆದರೆ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಸಮಾಜಕ್ಕೆ ಏನಾದರೂ ಸೇವೆ ನಡೆಸಲು ಅವಕಾಶ ಸಿಕ್ಕಾಗ ಮಾತ್ರ ಪೂರ್ಣ ರೀತಿಯ ಸಂತೋಷ ಸಿಗಬಲ್ಲದು ಎಂದು ಈ ಬಾರಿಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 7ನೇ ರ್‍ಯಾಂಕ್ ಪಡೆದಿರುವ ಕಾಶ್ಮೀರದ ವಾಸಿಂ ಅಹಮದ್ ಭಟ್ ಹೇಳಿದ್ದಾರೆ.

ಇದಕ್ಕಾಗಿ ಐದು ವರ್ಷಗಳವರೆಗೆ ಕಠಿಣ ಅಧ್ಯಯನ ನಡೆಸಿರುವೆ ಎಂದು ಕೂಡ ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಈ ವಸೀಮ್ ಭಟ್ಟಿಗೆ 225 ರ್‍ಯಾಂಕ್ ಲಭಿಸಿತ್ತು. ಆದರೆ ಅದರಿಂದ ಅವರಿಗೆ ತೃಪ್ತಿಯಾಗಲಿಲ್ಲ. ಮರಳಿ ಪ್ರಯತ್ನಿಸಿದರು ಮತ್ತು ಈ ಬಾರಿ 7ನೇ ರಾಂಕ್ ನೊಂದಿಗೆ ಇಡೀ ಕಾಶ್ಮೀರವನ್ನೇ ಹೆಮ್ಮೆಯ ಕಡಲಲ್ಲಿ ತೇಲಿಸಿದರು.

ಇವರ ತಂದೆ ಸರಕಾರಿ ಉದ್ಯೋಗಿಯಾಗಿದ್ದಾರೆ. ಇಬ್ಬರು ಅಣ್ಣಂದಿದ್ದಾರೆ. ತನ್ನ ಸಾಧನೆಯ ಕ್ರೆಡಿಟ್ ಅನ್ನು ಅವರು ದೊಡ್ಡಣ್ಣ ಮತ್ತು ತಂದೆ ತಾಯಿಗೆ ಅರ್ಪಿಸಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …