Home / ವಾರ್ತೆಗಳು / ಸಿರಿಯಾದಲ್ಲಿಯ ಕರುಣಾಜನಕ ಕಥೆ: ಬದುಕಿಗೆ ಹೆದರಿ ಶಿಶುಗಳನ್ನು ಮಸೀದಿಗಳ ಎದುರು ಬಿಟ್ಟು ಹೋಗುತ್ತಿರುವ ಪೋಷಕರು

ಸಿರಿಯಾದಲ್ಲಿಯ ಕರುಣಾಜನಕ ಕಥೆ: ಬದುಕಿಗೆ ಹೆದರಿ ಶಿಶುಗಳನ್ನು ಮಸೀದಿಗಳ ಎದುರು ಬಿಟ್ಟು ಹೋಗುತ್ತಿರುವ ಪೋಷಕರು

ದಶಕದಿಂದ ಆಂತರಿಕ ಘರ್ಷಣೆಗೆ ನಲುಗಿ ಹೋಗಿರುವ ಸಿರಿಯಾದಲ್ಲಿ ಪುಟ್ಟ ಮಕ್ಕಳ ಬದುಕಂತೂ ಕರುಣಾಜನಕವಾಗಿದೆ. ಪುಟ್ಟ ಮಕ್ಕಳನ್ನು ಸಾಕಲಾಗದೆ ಅಥವಾ ತಮ್ಮ ಜೊತೆ ಈ ಮಕ್ಕಳೂ ಸಾಯಬಾರದು ಎಂದು ಬಯಸಿದ ತಂದೆ ತಾಯಂದಿರು ಮಕ್ಕಳನ್ನು ಮಸೀದಿಯ ಮುಂದೆ ಮತ್ತು ಇನ್ನಿತರ ಕಡೆ ಬಿಟ್ಟು ಹೋಗುತ್ತಿರುವ ಕರುಣಾಜನಕ ಕಥೆಯನ್ನು ಮಾಧ್ಯಮಗಳು ವರದಿ ಮಾಡಿವೆ.

ಇಬ್ರಾಹಿಂ ಉಸ್ಮಾನ್ ಎಂಬವರು ಮಸೀದಿಯ ಪಕ್ಕದಲ್ಲಿ ಅನಾಥವಾಗಿದ್ದ ಹೆಣ್ಣು ಮಗುವನ್ನು ಮನೆಗೆ ಕರಕೊಂಡು ಹೋಗಿ ಆ ಮಗುವಿಗೆ ಹಿಬಾದತುಲ್ಲಾ ಎಂದು ಹೆಸರು ಕೊಟ್ಟಿರುವ ಘಟನೆಯನ್ನು ಅರಬ್ ನ್ಯೂಸ್ ವರದಿ ಮಾಡಿದೆ

2021 ಮತ್ತು 22ರ ನಡುವೆ ನೂರಕ್ಕಿಂತಲೂ ಅಧಿಕ ಅನಾಥ ಮಕ್ಕಳು ಪತ್ತೆಯಾಗಿವೆ ಎಂದು ವರದಿಯಾಗಿದ್ದು ಇದರ ನಿಜವಾದ ಲೆಕ್ಕಗಳು ಹಲವು ಪಟ್ಟು ಹೆಚ್ಚಿರಬಹುದು ಎಂದು ತಿಳಿಸಲಾಗಿದೆ. ಇಂಥ ಅನಾಥ ಮಕ್ಕಳ ಲೆಕ್ಕಗಳು ಅಧಿಕೃತವಾಗಿ ಬಹಳ ಕಡಿಮೆ ದಾಖಲಾಗುತ್ತಿದೆ ಎಂದು ಕೂಡ ತಿಳಿದು ಬಂದಿದೆ.

ಬಡತನ ಅಭದ್ರತೆ ಅಪೌಷ್ಟಿಕತೆ ಮತ್ತು ಸಾವು ಬದುಕಿನ ಭಯದ ನಡುವೆ ಪುಟ್ಟ ಮಕ್ಕಳು ಅನಾಥವಾಗುತ್ತಿವೆ.

ಸುಮಾರು 12 ವರ್ಷಗಳಿಂದ ನಡೆಯುತ್ತಿರುವ ಸಿರಿಯಾದ ಆಂತರಿಕ ಘರ್ಷಣೆಯಲ್ಲಿ ಈಗಾಗಲೇ ಐದು ಲಕ್ಷ ಮಂದಿ ಸಾವಿಗೀಡಾಗಿದ್ದು, ಮಿಲಿಯಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …