ಇಸ್ಲಾಮೀ ಕ್ಯಾಲೆಂಡರ್ ನ ರಜಬ್ ತಿಂಗಳ ಪ್ರಾರಂಭದ ಸೂಚಕವಾಗಿ ಬಾಲಚಂದ್ರ ಕಾಣಿಸಿಕೊಂಡಿದ್ದಾನೆ ಎಂದು ಗಲ್ಫ್ ರಾಷ್ಟ್ರಗಳ ವರದಿ ತಿಳಿಸಿದೆ.
ಜನವರಿ 1 ಬುಧವಾರದಂದೇ ರಜಬ್ ತಿಂಗಳ ಒಂದನೇ ದಿನಾಂಕ ಪ್ರಾರಂಭವಾಗಿದೆ ಎಂದು ಯುಎಇ ತಿಳಿಸಿದೆ. ಇದರಿಂದಾಗಿ ಮುಸ್ಲಿಂ ಸಮುದಾಯ ಬಹು ನಿರೀಕ್ಷೆಯಿಂದ ಕಾಯುವ ರಮಝಾನ್ ತಿಂಗಳಿಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿವೆ.
ಡಿಸೆಂಬರ್ 31 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಯು ಎ ಇ ಅಸ್ಟ್ರಾನಮಿ ಸೆಂಟರ್ ಈ ವಿಷಯವನ್ನು ಬಹಿರಂಗಪಡಿಸಿದೆ ಮತ್ತು ಬಾಲಚಂದ್ರ ಕಾಣಿಸಿಕೊಂಡಿರುವ ದೃಶ್ಯವನ್ನು ಹಂಚಿಕೊಂಡಿದೆ.
ರಜಬ್ ಮತ್ತು ಶಅಬಾನ್ ತಿಂಗಳು ಕಳೆದ ಬಳಿಕ ಉಪವಾಸದ ತಿಂಗಳಾದ ರಮಝಾನ್ ಆಗಮಿಸುತ್ತದೆ. ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಮಝಾನ್ ತಿಂಗಳು ಪ್ರಾರಂಭವಾಗುತ್ತದೆ ಎಂದು ಅಂದುಕೊಳ್ಳಲಾಗಿದೆ.
IslamKannada News Portal
