Home / ಲೇಖನಗಳು / ಲಾರೆನ್ ಬೂತ್ ಇಸ್ಲಾಮ್ ಸ್ವೀಕರಿಸಿದಾಗ

ಲಾರೆನ್ ಬೂತ್ ಇಸ್ಲಾಮ್ ಸ್ವೀಕರಿಸಿದಾಗ

@ ಶೈಖ್ ಮುಹಮ್ಮದ್ ಕಾರಕುನ್ನು

ಲಾರೆನ್ ಬೂತ್ ಇಸ್ಲಾಮ್ ಸ್ವೀಕರಿಸಿದ ವಿವರ ಮಗಳಿಗೆ ತಿಳಿದಾಗ,
“ಅಮ್ಮ ಇನ್ನು ಮದ್ಯಪಾನ ಮಾಡುವುದಿಲ್ಲವೇ?”
“ಇಲ್ಲ”
“ಧೂಮಪಾನ ಮಾಡುವುದಿಲ್ಲವೇ?”
“ಇಲ್ಲ”
“ಹಾಗಾದರೆ ಅಮ್ಮ ಇಸ್ಲಾಮ್ ಸ್ವೀಕರಿಸಿರುವುದರಲ್ಲಿ ನಾನು ಹೆಚ್ಚು ಆಹ್ಲಾದಭರಿತಳಾಗಿದ್ದೇನೆ.”

ತಾಯಿ ಇಸ್ಲಾಮ್ ಸ್ವೀಕರಿಸಿದ ವಿವರ ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಕೇಳಿದ ಪ್ರಶ್ನೆಗೆ ಲಾರೆನ್ ಬೂತ್ ನೀಡಿದ ಉತ್ತರದ ಸಂಭಾಷಣೆಯನ್ನು ಮೇಲೆ ಬರೆದಿರುವೆ.

ಈ ಲಾರೆನ್ ಬೂತ್ ಯಾರು ಗೊತ್ತೇ? ಬ್ರಿಟನ್ ಮಾಜಿ ಪ್ರಧಾನಮಂತ್ರಿ ಟೋನಿ ಬ್ಲೇರ್‌ರ ಪತ್ನಿಯ ಸಹೋದರಿಯಾಗಿದ್ದಾರೆ. ಅವರು 1967ರಲ್ಲಿ ನಾರ್ತ್ ಲಂಡನ್‌ನಲ್ಲಿ ಜನಿಸಿದರು. ಮೊದಲು ಕ್ರೆಗ್ ಡಾರ್ಬಿಯವರನ್ನು ವಿವಾಹವಾದರು. ಅವರಲ್ಲಿ ಉಂಟಾದ ಪುತ್ರಿಯರ ಜೊತೆಗಿನ ಮಾತುಕತೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ನಾಟಕ ಕಂಪೆನಿಗೆ ಸಂಬಂಧಿಸಿ ಬದುಕನ್ನು ಆರಂಭಿಸಿದ ಲಾರೆನ್ ಬೂತ್ ಶೈಕ್ಷಣಿಕ ರಂಗದಲ್ಲಿ ಮುಂದುವರಿದು ಮಾಧ್ಯಮ ರಂಗವನ್ನು ಪ್ರವೇಶಿಸಿದರು. ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿ ಲಂಡನಿನ ಮೆಯಿಲ್ ಓನ್ ಸಂಡೆ ಎಂಬ ಪತ್ರಿಕೆಯ ಪತ್ರಕರ್ತೆಯಾಗಿ ಫೆಲೆಸ್ತೀನ್‌ಗೆ ತೆರಳಿದರು. ಪತ್ರಕರ್ತೆಯಾಗಿ ತೆರಳುವುದಕ್ಕಿಂತ ಮೊದಲು ಫೆಲೆಸ್ತೀನ್ ಎಂದರೆ ಭಯೋತ್ಪಾದಕರ ಬೀಡು ಎಂಬ ಮಾನಸಿಕ ಸ್ಥಿತಿಯಲ್ಲಿದ್ದರು. ಆತಂಕದಿಂದಲೇ ಫೆಲೆಸ್ತೀನಿಗೆ ಪ್ರಯಾಣ ಹೊರಟಿದ್ದರು. ನಿರಪರಾಧಿ ಗಳನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲುವುದು, ಆತ್ಮಹತ್ಯಾ ದಾಳಿ ನಡೆಸಿ ಸ್ವಯಂ ಹತರಾಗುವುದು, ಇತರರನ್ನು ಸೆರೆಹಿಡಿದು ಮನೆಗೆ ಕೊಂಡು ಹೋಗಿ ಶಿರಚ್ಛೇದನ ಮಾಡುವುದು… ಇಂತಹ ದುಷ್ಟಕೃತ್ಯಗಳ ನಾಡು ಫೆಲೆಸ್ತೀನ್ ಎಂಬುದು ಅವರ ಕಲ್ಪನೆಯಾಗಿತ್ತು.

ಹಾಗೆಯೇ ಅವರು ಇಸ್ರೇಲ್ ನಿಯಂತ್ರಣದ ಪಶ್ಚಿಮದಂಡೆಯಲ್ಲಿ ವಿಮಾನದಿಂದ ಇಳಿದರು. ಆದರೆ ಅಲ್ಲಿ ಅವರ ಪ್ರಯಾಣಕ್ಕೆ ಸೌಲಭ್ಯಗಳು ದೊರೆಯಲಿಲ್ಲ. ಲಾರೆನ್ ಬೂತ್ ರಮಲ್ಲಾದ ತನಕ ನಡೆದುಕೊಂಡೇ ಹೋದರು. ಅದು ತೀವ್ರ ಚಳಿಗಾಲವಾಗಿತ್ತು. ಸ್ವಲ್ಪ ದೂರ ತೆರಳಿದಾಗ ಓರ್ವ ಮಧ್ಯ ವಯಸ್ಕ ಮಹಿಳೆಯು ಲಾರೆನ್ ಬೂತ್ ಕೈ ಹಿಡಿದೆಳೆದುಕೊಂಡು ಮನೆಯೊಳಗೆ ಕರೆದುಕೊಂಡು ಹೋದರು. ಆಗಲೂ ಲಾರೆನ್ ಬೂತ್ ನನ್ನನ್ನು ಈ ಮಹಿಳೆ ಕೊಲ್ಲಲು ಕೊಂಡು ಹೋಗುತ್ತಿದ್ದಾರೆಂದೇ ಭಾವಿಸಿದ್ದರು. ಲಾರೆನ್ ಬೂತ್‌ರಿಗೆ ಅರಬಿ ಭಾಷೆ ಬರುತ್ತಿರಲಿಲ್ಲ. ಆಕೆಗೆ ಇಂಗ್ಲಿಷ್ ಭಾಷೆ ತಿಳಿದಿರಲಿಲ್ಲ. ಆ ಕಾರಣದಿಂದ ಪರಸ್ಪರ ಮಾತುಕತೆಗೆ ಅವಕಾಶವಿರಲಿಲ್ಲ. ಮನೆಗೆ ತಲುಪಿದ ಕೂಡಲೇ ಆ ಮಹಿಳೆ ಬಿಸಿ ಬಿಸಿ ಕಾಫಿ ಮತ್ತು ಕೆಲವು ಫಲಾಹಾರಗಳನ್ನು ನೀಡಿದರು. ಒಳಗೆ ತೆರಳಿ ಮಗಳಿಂದ ಒಂದು ಸೆಟರ್ ತಂದು ಲಾರೆನ್ ಬೂತ್‌ಗೆ ಹೊದ್ದು ಧರಿಸುವಂತೆ ಹೇಳಿದರು. ನಂತರ ಅವರನ್ನು ಎಲ್ಲಿಂದ ಕೈಹಿಡಿದು ತರಲಾಗಿತ್ತೋ ಅಲ್ಲಿಗೆ ತಲುಪಿಸಿ ಬಿಟ್ಟರು. ಇದು ನನ್ನ ಫೆಲೆಸ್ತೀನ ಇಸ್ಲಾಮಿನ ಅನುಭವವಾಗಿದೆ. ಫೆಲೆಸ್ತೀನಿನಲ್ಲಿ ಮೂರು ವರ್ಷಗಳ ಕಾಲ ಇದ್ದ ನನಗೆ ಇಂತಹ ಹತ್ತು ಹಲವಾರು ಅನುಭವಗಳುಂಟಾಗಿದೆ ಎಂದಿದ್ದಾರೆ.

ಇಂತಹ ಅನುಭವಗಳೇ ಅವರಿಗೆ ಇಸ್ಲಾಮಿನ ಬಗ್ಗೆ ಅರಿಯಲು ಪ್ರೇರಕವಾಯಿತು. ಹೀಗೆ ಕುರ್‌ಆನ್ ಅಧ್ಯಯನ ಮಾಡಲು ಪ್ರಾರಂಭಿಸಿದರು. ಅದು ಲಾರೆನ್ ಬೂತ್‌ರ ಮೇಲೆ ಅಗಾಧ ಪ್ರಭಾವ ಬೀರಿತು. ಅದು ಅವರನ್ನು ಇಸ್ಲಾಮಿನೊಳಗೆ ಪ್ರವೇಶಿಸುವಂತೆ ಮಾಡಿತು. 2010 ರಲ್ಲಿ ಇಸ್ಲಾಮ್ ಸ್ವೀಕಾರ ಮಾಡಿದ ಲಾರೆನ್ ಬೂತ್ ಅಕ್ಟೋಬರ್ 23 ರಂದು “ಗ್ಲೋಬಲ್ ಪೀಸ್ ಆಂಡ್ ಯೂನಿಟಿ” ಎಂಬ ಚಾನೆಲ್ ಕಾರ್ಯಕ್ರಮದಲ್ಲಿ ಮೊತ್ತ ಮೊದಲು ಹಿಜಾಬ್ ಧರಿಸಿ ಭಾಗವಹಿಸಿದರು. ವಸಾಹತು ಶಾಹಿಗಳ ವಿರುದ್ಧದ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಹೆಸರಾಂತ ಪತ್ರಕರ್ತೆಯಾಗಿದ್ದಾರೆ ಅವರು. ಇತ್ತೀಚಿನ ದಿನಗಳಲ್ಲಿ ಇಸ್ಲಾಮ್ ಸ್ವೀಕರಿಸಿದ ಪ್ರಸಿದ್ಧ ಮಹಿಳೆಯರಲ್ಲಿ ಅವರೂ ಕೂಡಾ ಓರ್ವರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …