Home / ಪ್ರಶ್ನೋತ್ತರ / ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ?

ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ?

ಪ್ರಶ್ನೆ: ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ?

ಉತ್ತರ: ಗುಲಾಮನನ್ನು ಅಲ್ಲಾಹನು ಸೃಷ್ಠಿಸಲಿಲ್ಲ, ಬದಲಾಗಿ ಮಾನವ ಮಾನವನನ್ನು ಗುಲಾಮನನ್ನಾಗಿ ಮಾಡಿದ. ಗುಲಾಮ ಅಂದರೆ ಅರೇಬಿಯಾದಲ್ಲಿ ಅಂದಿನ ಅನಾಗರಿಕ ಕಾಲದಲ್ಲಿ ಇದ್ದಂತಹ ಪದ್ಧತಿ. ದುರ್ಬಲ ವರ್ಗದ, ಯಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು, ಗೋತ್ರ ಗೋತ್ರಗಳ ಮದ್ಯೆ ನಡೆಯುತ್ತಿದ್ದ ಯುದ್ಧಗಳಲ್ಲಿ ಸಿಕ್ಕಿದ ಜನರನ್ನು ತಮ್ಮ ಅಧೀನದಲ್ಲಿ ಇಟ್ಟು ಅವರಿಗೆ ಆಹಾರ ಬಟ್ಟೆ ಕೊಟ್ಟು ತಮ್ಮ ಕೆಲಸವನ್ನು ಮಾಡಿಸುತ್ತಿದ್ದರು.

ಮುಂದೆ ಇವರು ಬೇಡವಾದಲ್ಲಿ ಅಂದಿನ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಪ್ರವಾದಿ ಮುಹಮ್ಮದ್ (ಸ) ರು ಹಂತ ಹಂತವಾಗಿ ಜನರನ್ನು ಗುಲಾಮತನ ದಿಂದ ವಿಮೋಚಿಸಿದರು. ಹಾಗೇ ಅರೇಬಿಯಾದಲ್ಲಿ ಗುಲಾಮ ಪದ್ಧತಿ ಸಂಪೂರ್ಣವಾಗಿ ಕೊನೆಗೊಂಡಿತು.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *