Home / ಪ್ರಶ್ನೋತ್ತರ / ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ?

ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ?

ಪ್ರಶ್ನೆ: ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ?

ಉತ್ತರ: ಅಧ್ಯಾಯ 26: ಅಶ್ಶುಅರಾ

ಸೂಕ್ತ : 61
فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ

ಎರಡು ಸಮೂಹಗಳು ಎದುರಾದಾಗ ಮೂಸಾರ ಸಂಗಾತಿಗಳು, “ನಾವು ಸಿಕ್ಕಿ ಬಿದ್ದೆವು” ಎಂದು ಕೂಗಿದರು.

ಸೂಕ್ತ : 62
قَالَ كَلَّا ۖ إِنَّ مَعِيَ رَبِّي سَيَهْدِينِ

ಆಗ ಮೂಸಾ, “ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ಖಂಡಿತವಾಗಿಯೂ ನನಗೆ ದಾರಿ ತೋರುವನು” ಎಂದರು.

ಸೂಕ್ತ : 63
فَأَوْحَيْنَا إِلَىٰ مُوسَىٰ أَنِ اضْرِبْ بِعَصَاكَ الْبَحْرَ ۖ فَانْفَلَقَ فَكَانَ كُلُّ فِرْقٍ كَالطَّوْدِ الْعَظِيمِ

ನಾವು ಮೂಸಾರಿಗೆ ‘ದಿವ್ಯವಾಣಿ’ ಮೂಲಕ, “ನಿಮ್ಮ ಲಾಠಿಯನ್ನು ಸಮುದ್ರಕ್ಕೆ ಹೊಡೆಯಿರಿ” ಎಂದು ಅಪ್ಪಣೆ ಕೊಟ್ಟೆವು. ಹಠಾತ್ತನೆ ಸಮುದ್ರ ಸೀಳಾಯಿತು ಮತ್ತು ಅದರ ಪ್ರತಿಯೊಂದು ಭಾಗವು ಒಂದು ಮಹಾ ಪರ್ವತದಂತಾಗಿ ಬಿಟ್ಟಿತು.

ಸೂಕ್ತ : 64
وَأَزْلَفْنَا ثَمَّ الْآخَرِينَ

ನಾವು ಅಲ್ಲೇ ಇನ್ನೊಂದು ಸಮೂಹವನ್ನು ಸಮೀಪಕ್ಕೆ ತಂದೆವು.

ಸೂಕ್ತ : 65
وَأَنْجَيْنَا مُوسَىٰ وَمَنْ مَعَهُ أَجْمَعِينَ

ಮೂಸಾ ಮತ್ತು ಅವರ ಜೊತೆಗಿದ್ದವರೆಲ್ಲರನ್ನೂ ನಾವು ರಕ್ಷಿಸಿದೆವು.

ಸೂಕ್ತ : 66
ثُمَّ أَغْرَقْنَا الْآخَرِينَ

ಮತ್ತು ಇತರರನ್ನು ಮುಳುಗಿಸಿಬಿಟ್ಟೆವು.

ಸೂಕ್ತ : 67
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ನಿಶ್ಚಯವಾಗಿಯೂ ಈ ಘಟನೆಯಲ್ಲೊಂದು ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

ಸೂಕ್ತ : 68
وَإِنَّ رَبَّكَ لَهُوَ الْعَزِيزُ الرَّحِيمُ

ನಿಶ್ಚಯವಾಗಿಯೂ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.

ಸೂಕ್ತ : 105
كَذَّبَتْ قَوْمُ نُوحٍ الْمُرْسَلِينَ

ನೂಹರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.

ಸೂಕ್ತ : 106
إِذْ قَالَ لَهُمْ أَخُوهُمْ نُوحٌ أَلَا تَتَّقُونَ

ಅವರ ಸಹೋದರ ನೂಹರು, ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನೀವು ಭಯ ಪಡುವುದಿಲ್ಲವೇ?

ಸೂಕ್ತ : 107
إِنِّي لَكُمْ رَسُولٌ أَمِينٌ

ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

ಸೂಕ್ತ : 108
فَاتَّقُوا اللَّهَ وَأَطِيعُونِ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂಕ್ತ : 109
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ

ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸುವುದಿಲ್ಲ. ನನ್ನ ಪ್ರತಿಫಲವು ಸರ್ವಲೋಕಗಳ ಪಾಲಕ ಪ್ರಭುವಿನ ಬಳಿ ಇದೆ.

ಸೂಕ್ತ : 110
فَاتَّقُوا اللَّهَ وَأَطِيعُونِ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ನಿಸ್ಸಂಕೋಚವಾಗಿ) ನನ್ನನ್ನು ಅನುಸರಿಸಿರಿ.”

ಸೂಕ್ತ : 111
قَالُوا أَنُؤْمِنُ لَكَ وَاتَّبَعَكَ الْأَرْذَلُونَ

ಅದಕ್ಕೆ ಅವರು, “ನಾನು ನಿನ್ನನ್ನು ನಂಬಬೇಕೇ? ನಿನ್ನನ್ನು ಅನುಸರಿಸುವವರಂತೂ ಅತ್ಯಂತ ನೀಚರಾಗಿದ್ದಾರೆ” ಎಂದು ಉತ್ತರಿಸಿದರು.

ಸೂಕ್ತ : 112
قَالَ وَمَا عِلْمِي بِمَا كَانُوا يَعْمَلُونَ

ನೂಹರು ಹೇಳಿದರು, “ಅವರ ಕರ್ಮ ಹೇಗಿದೆಯೆಂದು ನನಗೇನು ಗೊತ್ತು?

ಸೂಕ್ತ : 113
إِنْ حِسَابُهُمْ إِلَّا عَلَىٰ رَبِّي ۖ لَوْ تَشْعُرُونَ

ಅವರ ವಿಚಾರಣೆಯ ಹೊಣೆ ನನ್ನ ಪ್ರಭುವಿನ ಮೇಲಿದೆ. ನೀವು ಒಂದಿಷ್ಟು ವಿವೇಕದಿಂದ ವರ್ತಿಸುತ್ತಿದ್ದರೆ!

ಸೂಕ್ತ : 114
وَمَا أَنَا بِطَارِدِ الْمُؤْمِنِينَ

ಸತ್ಯವಿಶ್ವಾಸ ಸ್ವೀಕರಿಸಿದವರನ್ನು ಧಿಕ್ಕರಿಸುವುದು ನನ್ನ ಕೆಲಸವಲ್ಲ.

ಸೂಕ್ತ : 115
إِنْ أَنَا إِلَّا نَذِيرٌ مُبِينٌ

ನಾನೊಬ್ಬ ಸುಸ್ಪಷ್ಟ ಎಚ್ಚರಿಕೆ ಕೊಡುವವನು ಮಾತ್ರ.”

ಸೂಕ್ತ : 116
قَالُوا لَئِنْ لَمْ تَنْتَهِ يَا نُوحُ لَتَكُونَنَّ مِنَ الْمَرْجُومِينَ

ಆಗ ಅವರು, “ನೂಹ್, ನೀನು ಇದನ್ನು ತೊರೆಯದಿದ್ದರೆ ಖಂಡಿತವಾಗಿಯೂ ನೀನು ಕಲ್ಲೆಸೆದು ಕೊಲ್ಲಲ್ಪಡುವವರಲ್ಲಾಗುವೆ” ಎಂದರು.

ಸೂಕ್ತ : 118
فَافْتَحْ بَيْنِي وَبَيْنَهُمْ فَتْحًا وَنَجِّنِي وَمَنْ مَعِيَ مِنَ الْمُؤْمِنِينَ

ಇನ್ನು ನನ್ನ ಮತ್ತು ಅವರ ನಡುವೆ ನಿರ್ಣಾಯಕ ತೀರ್ಮಾನ ಮಾಡಿಬಿಡು. ನನ್ನನ್ನೂ ನನ್ನೊಂದಿಗಿರುವ ಸತ್ಯವಿಶ್ವಾಸಿಗಳನ್ನೂ ರಕ್ಷಿಸು.”

ಸೂಕ್ತ : 119
فَأَنْجَيْنَاهُ وَمَنْ مَعَهُ فِي الْفُلْكِ الْمَشْحُونِ

ಕೊನೆಗೆ ನಾವು ಅವರನ್ನೂ ಅವರ ಜೊತೆಗಾರರನ್ನೂ ಒಂದು ತುಂಬಿದ ನಾವೆಯಲ್ಲಿ ರಕ್ಷಿಸಿದೆವು.

ಸೂಕ್ತ : 120
ثُمَّ أَغْرَقْنَا بَعْدُ الْبَاقِينَ

ತರುವಾಯ ಉಳಿದವರನ್ನು ಮುಳುಗಿಸಿ ಬಿಟ್ಟೆವು.

ಸೂಕ್ತ : 121
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

ಸೂಕ್ತ : 122
وَإِنَّ رَبَّكَ لَهُوَ الْعَزِيزُ الرَّحِيمُ

ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.

ಸೂಕ್ತ : 123
كَذَّبَتْ عَادٌ الْمُرْسَلِينَ

ಆದ್ (ಜನಾಂಗವು) ರಸೂಲರನ್ನು ಸುಳ್ಳಾಗಿಸಿತು.

ಸೂಕ್ತ : 124
إِذْ قَالَ لَهُمْ أَخُوهُمْ هُودٌ أَلَا تَتَّقُونَ

ಅವರ ಸಹೋದರ ಹೂದರು ಅವರೊಡನೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ; “ನೀವೇನು ಭಯ ಪಡುವುದಿಲ್ಲವೇ?

ಸೂಕ್ತ : 125
إِنِّي لَكُمْ رَسُولٌ أَمِينٌ

ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ಸಂದೇಶವಾಹಕನಾಗಿರುತ್ತೇನೆ-

ಸೂಕ್ತ : 126
فَاتَّقُوا اللَّهَ وَأَطِيعُونِ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂಕ್ತ : 127
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ

ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸುವುದಿಲ್ಲ. ನನ್ನ ಪ್ರತಿಫಲವು ಸರ್ವಲೋಕಗಳ ಪಾಲಕ ಪ್ರಭುವಿನ ಬಳಿ ಇದೆ.

ಸೂಕ್ತ : 128
أَتَبْنُونَ بِكُلِّ رِيعٍ آيَةً تَعْبَثُونَ

ಇದೇನು ನೀವು ಪ್ರತಿಯೊಂದು ಉನ್ನತ ಸ್ಥಳದಲ್ಲಿ ವೃಥಾ ಒಂದು ಸ್ಮಾರಕ ಕಟ್ಟಡವನ್ನು ಕಟ್ಟುತ್ತೀರಿ-

ಸೂಕ್ತ : 129
وَتَتَّخِذُونَ مَصَانِعَ لَعَلَّكُمْ تَخْلُدُونَ

ಮತ್ತು ನಿಮಗೆ ಸದಾ ಇಲ್ಲೇ ಉಳಿಯಲಿಕ್ಕಿದೆಯೋ ಎಂಬಂತೆ ದೊಡ್ಡ ದೊಡ್ಡ ಸೌಧಗಳನ್ನು ನಿರ್ಮಿಸುತ್ತೀರಿ.

ಸೂಕ್ತ : 130
وَإِذَا بَطَشْتُمْ بَطَشْتُمْ جَبَّارِينَ

ಮತ್ತು ಯಾರ ಮೇಲಾದರೂ ಕೈ ಹಾಕುವಾಗ ಮದವೇರಿದವರಂತೆ ಕೈ ಹಾಕುತ್ತೀರಿ.

ಸೂಕ್ತ : 132
وَاتَّقُوا الَّذِي أَمَدَّكُمْ بِمَا تَعْلَمُونَ

ನೀವು ತಿಳಿದಿರುವ ವಸ್ತುಗಳನ್ನೆಲ್ಲ ನಿಮಗೆ ಕೊಟ್ಟಿರುವಾತನನ್ನು ಭಯಪಡಿರಿ.

ಸೂಕ್ತ : 133
أَمَدَّكُمْ بِأَنْعَامٍ وَبَنِينَ

ಅವನು ನಿಮಗೆ ಪ್ರಾಣಿಗಳನ್ನು ಕೊಟ್ಟನು, ಸಂತತಿ ಕೊಟ್ಟನು,

ಸೂಕ್ತ : 135
إِنِّي أَخَافُ عَلَيْكُمْ عَذَابَ يَوْمٍ عَظِيمٍ

ನನಗೆ ನಿಮ್ಮ ವಿಷಯದಲ್ಲಿ ಒಂದು ಮಹಾ ದಿನದ ಯಾತನೆಯ ಭಯವಿದೆ.”

ಸೂಕ್ತ : 136
قَالُوا سَوَاءٌ عَلَيْنَا أَوَعَظْتَ أَمْ لَمْ تَكُنْ مِنَ الْوَاعِظِينَ

ಆಗ ಅವರು – “ನೀನು ಉಪದೇಶ ಮಾಡಿದರೂ ಮಾಡದಿದ್ದರೂ ನಮ್ಮ ಮಟ್ಟಿಗೆ ಎಲ್ಲಾ ಒಂದೇ-

ಸೂಕ್ತ : 137
إِنْ هَٰذَا إِلَّا خُلُقُ الْأَوَّلِينَ

ಈ ವಿಷಯಗಳೆಲ್ಲಾ ಹಿಂದಿನಿಂದಲೂ ಹೀಗೆಯೇ ನಡೆಯುತ್ತ ಬಂದಿವೆ-

ಸೂಕ್ತ : 138
وَمَا نَحْنُ بِمُعَذَّبِينَ

ನಾವು ಯಾತನೆಗೊಳಪಡುವವರಲ್ಲ”.

ಸೂಕ್ತ : 139
فَكَذَّبُوهُ فَأَهْلَكْنَاهُمْ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ಹೀಗೆ ಅವರು ಅವರನ್ನು, (ಹ. ಹೂದರನ್ನು) ಸುಳ್ಳಾಗಿಸಿದರು ಮತ್ತು ನಾವು ಅವರನ್ನು ನಾಶಗೊಳಿಸಿದೆವು. ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ, ಇವರಲ್ಲಿ ಹೆಚ್ಚಿನವರು ನಂಬುವುದಿಲ್ಲ.

ಸೂಕ್ತ : 140
وَإِنَّ رَبَّكَ لَهُوَ الْعَزِيزُ الرَّحِيمُ

ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.

ಸೂಕ್ತ : 141
كَذَّبَتْ ثَمُودُ الْمُرْسَلِينَ

ಸಮೂದ್ (ಜನಾಂಗವು) ರಸೂಲರನ್ನು ಸುಳ್ಳಾಗಿಸಿತು.

ಸೂಕ್ತ : 142
إِذْ قَالَ لَهُمْ أَخُوهُمْ صَالِحٌ أَلَا تَتَّقُونَ

ಅವರ ಸಹೋದರ ಸಾಲಿಹರು ಅವರೊಡನೆ ಹೇಳಿದ ಸಂದರ್ಭ ವನ್ನು ಸ್ಮರಿಸಿರಿ; “ನೀವು ಭಯ ಪಡುವುದಿಲ್ಲವೇ?

ಸೂಕ್ತ : 143
إِنِّي لَكُمْ رَسُولٌ أَمِينٌ

ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ಸಂದೇಶವಾಹಕ ನಾಗಿರುತ್ತೇನೆ-

ಸೂಕ್ತ : 144
فَاتَّقُوا اللَّهَ وَأَطِيعُونِ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂಕ್ತ : 145
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ

ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. ನನ್ನ ಪ್ರತಿಫಲವು ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನ ಬಳಿ ಇದೆ.

ಸೂಕ್ತ : 146
أَتُتْرَكُونَ فِي مَا هَاهُنَا آمِنِينَ

ನೀವು ಇಲ್ಲಿರುವ ಸಕಲ ವಸ್ತುಗಳ ಮಧ್ಯೆ ಹೀಗೆಯೇ ನಿಶ್ಚಿಂತರಾಗಿ ಉಳಿದುಕೊಂಡಿರಲು ನಿಮ್ಮನ್ನು ಬಿಟ್ಟು ಬಿಡಲಾಗುವುದೇ?

ಸೂಕ್ತ : 147
فِي جَنَّاتٍ وَعُيُونٍ

ಈ ಉದ್ಯಾನಗಳಲ್ಲೂ ಕಾಲುವೆಗಳಲ್ಲೂ-

ಸೂಕ್ತ : 148
وَزُرُوعٍ وَنَخْلٍ طَلْعُهَا هَضِيمٌ

ಈ ಹೊಲಗಳಲ್ಲೂ ರಸಭರಿತ ಗೊಂಚಲುಗಳಿರುವ ಖರ್ಜೂರದ ತೋಟಗಳಲ್ಲೂ? (ಉಳಿದುಕೊಂಡಿರಲು ಬಿಡಲಾಗುವುದೇ?)

ಸೂಕ್ತ : 149
وَتَنْحِتُونَ مِنَ الْجِبَالِ بُيُوتًا فَارِهِينَ

ನೀವು ಹೆಗ್ಗಳಿಕೆಗಾಗಿ ಪರ್ವತಗಳನ್ನು ಕೊರೆದು ಅವುಗಳೊಳಗೆ ಕಟ್ಟಡಗಳನ್ನು ನಿರ್ಮಿಸುತ್ತೀರಿ.

ಸೂಕ್ತ : 150
فَاتَّقُوا اللَّهَ وَأَطِيعُونِ

ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂಕ್ತ : 151
وَلَا تُطِيعُوا أَمْرَ الْمُسْرِفِينَ

ಆ ಅತಿರೇಕಿಗಳನ್ನು ಅನುಸರಿಸಬೇಡಿರಿ.

ಸೂಕ್ತ : 152
الَّذِينَ يُفْسِدُونَ فِي الْأَرْضِ وَلَا يُصْلِحُونَ

ಅವರು ಭೂಮಿಯಲ್ಲಿ ಗೊಂದಲವನ್ನುಂಟು ಮಾಡುತ್ತಾರೆ. ಯಾವ ಸುಧಾರಣಾ ಕಾರ್ಯವನ್ನೂ ಮಾಡುವುದಿಲ್ಲ.”

ಸೂಕ್ತ : 153
قَالُوا إِنَّمَا أَنْتَ مِنَ الْمُسَحَّرِينَ

ಆಗ ಅವರು ಹೇಳಿದರು, “ನೀನು ಕೇವಲ ಒಬ್ಬ ಮಾಟಬಾಧಿತ ವ್ಯಕ್ತಿ.

ಸೂಕ್ತ : 154
مَا أَنْتَ إِلَّا بَشَرٌ مِثْلُنَا فَأْتِ بِآيَةٍ إِنْ كُنْتَ مِنَ الصَّادِقِينَ

ನೀನು ನಮ್ಮಂತೆಯೇ ಇರುವ ಒಬ್ಬ ಮನುಷ್ಯನಲ್ಲದೆ ಇನ್ನೇನು? ನೀನು ಸತ್ಯವಂತನಾಗಿದ್ದರೆ ಏನಾದರೊಂದು ನಿದರ್ಶನವನ್ನು ತಾ.”

ಸೂಕ್ತ : 155
قَالَ هَٰذِهِ نَاقَةٌ لَهَا شِرْبٌ وَلَكُمْ شِرْبُ يَوْمٍ مَعْلُومٍ

ಆಗ ಸಾಲಿಹರು ಹೇಳಿದರು, “ಇದೊಂದು ಒಂಟೆ. ಒಂದು ದಿನ ನೀರು ಕುಡಿಯುವ ಹಕ್ಕು ಇದಕ್ಕೆ, ಇನ್ನೊಂದು ದಿನ ನೀರು ಪಡೆಯುವ ಹಕ್ಕು ನಿಮಗೆ.

ಸೂಕ್ತ : 156
وَلَا تَمَسُّوهَا بِسُوءٍ فَيَأْخُذَكُمْ عَذَابُ يَوْمٍ عَظِيمٍ

ಇದನ್ನು ಎಷ್ಟು ಮಾತ್ರಕ್ಕೂ ಕೆಣಕಬೇಡಿರಿ. ಅನ್ಯಥಾ ಒಂದು ಮಹಾ ದಿನದ ಯಾತನೆ ನಿಮ್ಮ ಮೇಲೆ ಎರಗುವುದು.”

ಸೂಕ್ತ : 157
فَعَقَرُوهَا فَأَصْبَحُوا نَادِمِينَ

ಆದರೆ ಅವರು ಅದರ ಮೊಣಕಾಲುಗಳನ್ನು ಕಡಿದು ಬಿಟ್ಟರು ಮತ್ತು ಕೊನೆಗೆ ಪಶ್ಚಾತ್ತಾಪ ಪಟ್ಟರು-

ಸೂಕ್ತ : 158
فَأَخَذَهُمُ الْعَذَابُ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ಯಾತನೆಯು ಅವರ ಮೇಲೆ ಎರಗಿಯೇ ಬಿಟ್ಟಿತು. ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ-

ಸೂಕ್ತ : 159
وَإِنَّ رَبَّكَ لَهُوَ الْعَزِيزُ الرَّحِيمُ

ಮತ್ತು ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.

ಸೂಕ್ತ : 160
كَذَّبَتْ قَوْمُ لُوطٍ الْمُرْسَلِينَ

ಲೂತರ ಜನಾಂಗವು ರಸೂಲರನ್ನು ಸುಳ್ಳಾಗಿಸಿತು.

ಸೂಕ್ತ : 161
إِذْ قَالَ لَهُمْ أَخُوهُمْ لُوطٌ أَلَا تَتَّقُونَ

ಅವರ ಸಹೋದರ ಲೂತರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನೀವು ಭಯಪಡುವುದಿಲ್ಲವೇ?

ಸೂಕ್ತ : 162
إِنِّي لَكُمْ رَسُولٌ أَمِينٌ

ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ಸಂದೇಶವಾಹಕ ನಾಗಿರುತ್ತೇನೆ-

ಸೂಕ್ತ : 163
فَاتَّقُوا اللَّهَ وَأَطِيعُونِ

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂಕ್ತ : 164
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ

ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ. ನನ್ನ ಪ್ರತಿಫಲವು ಸರ್ವಲೋಕಗಳ ಪಾಲಕ ಪ್ರಭುವಿನ ಬಳಿ ಇದೆ.

ಸೂಕ್ತ : 166
وَتَذَرُونَ مَا خَلَقَ لَكُمْ رَبُّكُمْ مِنْ أَزْوَاجِكُمْ ۚ بَلْ أَنْتُمْ قَوْمٌ عَادُونَ

ಮತ್ತು ನಿಮ್ಮ ಪತ್ನಿಯರಲ್ಲಿ ನಿಮ್ಮ ಪ್ರಭು ನಿಮಗಾಗಿ ಸೃಷ್ಟಿಸಿರುವುದನ್ನು ಬಿಟ್ಟು ಬಿಡುತ್ತೀರಾ? ವಾಸ್ತವದಲ್ಲಿ ನೀವು ಹದಮೀರಿದ ಜನಾಂಗವಾಗಿದ್ದೀರಿ.”

ಸೂಕ್ತ : 167
قَالُوا لَئِنْ لَمْ تَنْتَهِ يَا لُوطُ لَتَكُونَنَّ مِنَ الْمُخْرَجِينَ

ಆಗ ಅವರು, “ಲೂತ್, ನೀನು ಈ ಮಾತುಗಳನ್ನು ತೊರೆಯದಿದ್ದರೆ ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಲ್ಪಟ್ಟವರ ಸಾಲಿಗೆ ನೀನೂ ಸೇರುವೆ” ಎಂದರು.

ಸೂಕ್ತ : 168
قَالَ إِنِّي لِعَمَلِكُمْ مِنَ الْقَالِينَ

ಆಗ ಅವರು ಹೇಳಿದರು, “ನಿಮ್ಮ ದುಷ್ಕೃತ್ಯಗಳಿಗಾಗಿ ಮರುಗುವವರಲ್ಲಿ ನಾನು ಸೇರಿದ್ದೇನೆ.

ಸೂಕ್ತ : 169
رَبِّ نَجِّنِي وَأَهْلِي مِمَّا يَعْمَلُونَ

ಪ್ರಭೂ ನನ್ನನ್ನೂ ನನ್ನ ಕುಟುಂಬವನ್ನೂ ಇವರು ಮಾಡುತ್ತಿರುವ ದುರಾಚಾರಗಳಿಂದ ರಕ್ಷಿಸು.”

ಸೂಕ್ತ : 170
فَنَجَّيْنَاهُ وَأَهْلَهُ أَجْمَعِينَ

ಅವರನ್ನೂ ಅವರ ಎಲ್ಲ ಕುಟುಂಬದವರನ್ನೂ ನಾವು ರಕ್ಷಿಸಿದೆವು.

ಸೂಕ್ತ : 171
إِلَّا عَجُوزًا فِي الْغَابِرِينَ

ಕೊನೆಗೆ ಹಿಂದೆ ಉಳಿದವರಲ್ಲಾಗಿದ್ದ ಓರ್ವ ವೃದ್ಧೆಯ ಹೊರತು-

ಸೂಕ್ತ : 172
ثُمَّ دَمَّرْنَا الْآخَرِينَ

ಅನಂತರ ಉಳಿದವರನ್ನೆಲ್ಲ ನಾಶಗೊಳಿಸಿ ಬಿಟ್ಟೆವು.

ಸೂಕ್ತ : 173
وَأَمْطَرْنَا عَلَيْهِمْ مَطَرًا ۖ فَسَاءَ مَطَرُ الْمُنْذَرِينَ

ಮತ್ತು ಅವರ ಮೇಲೆ ಒಂದು ಮಳೆಯನ್ನು ಸುರಿಸಿದೆವು. ಎಚ್ಚರಿಕೆ ಕೊಡಲ್ಪಟ್ಟಿದ್ದವರ ಮೇಲೆ ಇಳಿದಂತಹ ಅತ್ಯಂತ ಕೆಟ್ಟ ಮಳೆ.

ಸೂಕ್ತ : 174
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

ಸೂಕ್ತ : 175
وَإِنَّ رَبَّكَ لَهُوَ الْعَزِيزُ الرَّحِيمُ

ಮತ್ತು ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.

ಸತ್ಕರ್ಮ ಎಸಗುವವರಿಗೆ ಅಲ್ಲಾಹನು ರಕ್ಷಿಸಿದ ಘಟನೆಗಳು ???? ಇನ್ನೂ ಅನೇಕ ಘಟನೆಗಳು ಇವೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *