Home / ಪ್ರಶ್ನೋತ್ತರ / ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಇದು ಸರಿಯೇ?

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಇದು ಸರಿಯೇ?

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಈ ಕುರಿತು ವಿವರಿಸಬಹುದೇ?

ಉತ್ತರ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಹೇಳುವವರಿಗೆ, ವಿಜ್ಞಾನ ಅಂದರೆ ವಿಶೇಷ ಜ್ಞಾನ ಎಂದಾಗಿದೆ. ಈ ಜ್ಞಾನದ ಬೆಳಕಿನಲ್ಲಿ ಶೋಧನೆ ಮಾಡುವುದಕ್ಕೆ ವೈಜ್ಞಾನಿಕ ಶೋಧನೆ ಎನ್ನಲಾಗುತ್ತದೆ. ಕೆಲವರಿಗೆ ಇದು ಮಹಾ ಜ್ಞಾನ ಆಗಿ ಕಂಡರೂ ವಾಸ್ತವದಲ್ಲಿ ಇದು ಅಲ್ಪ ಜ್ಞಾನ ಆಗಿದೆ ಎಂದು ಕೆಲವರಿಗೆ ತಿಳಿಯಲು ಸಾಧ್ಯವಾಗಿಲ್ಲ. ಕಾರಣ ವಿಜ್ಞಾನಕ್ಕಿಂತ ಮಿಗಿಲಾದ ಜ್ಞಾನ ಕೂಡಾ ಇದೆ ಎಂದು ಅವರಿಗೆ ತಿಳಿದಿಲ್ಲ.

ಮನುಷ್ಯ ಪ್ರಥಮವಾಗಿ ಮಣ್ಣಿನಿಂದ ಸೃಷ್ಠಿಸಲ್ಪಟ್ಟ. ಅದೇ ರೀತಿ ಯಕ್ಷ ಎಂಬ ಸೃಷ್ಠಿ ಇದೆ. ಅದನ್ನು ಅರಬಿಯಲ್ಲಿ ಜಿನ್ನ್ ಎಂದು ಕರೆಯಲಾಗುತ್ತದೆ ಇದನ್ನು ಬೆಂಕಿಯಿಂದ ಸೃಷ್ಠಿಸಲಾಗಿದೆ. ಇದರಲ್ಲಿ ಕೆಟ್ಟ ಜಿನ್ನ್ ಮತ್ತು ಒಳ್ಳೆಯ ಜಿನ್ನ್ ಎಂದೂ ಇದೆ. ಕೆಟ್ಟ ಜಿನ್ನ್ ಇದನ್ನು ಶೈತಾನ ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಶೋಧನೆಗೆ ಬೆಂಕಿಯಿಂದ ಏನನ್ನೂ ಸೃಷ್ಟಿಸಲು ಸಾಧ್ಯವಾಗದ ಕಾರಣ ವಿಜ್ಞಾನಿಗಳಿಗೆ ಶೈತಾನ್ ಬಗ್ಗೆ ವೈಜ್ಞಾನಿಕ ಆಧಾರ ಸಿಕ್ಕಿಲ್ಲ.

ಮತ್ತೊಂದು ಸೃಷ್ಠಿ ದೇವದೂತ ಅರ್ಥಾತ್ ಮಾಲಾಯಿಕ ಅಂದರೆ ಏಂಜಲ್ಸ್ ಇದರ ಬಗ್ಗೆ ಕೂಡಾ ವಿಜ್ಞಾನಿಗಳಿಗೆ ವೈಜ್ಞಾನಿಕ ಆಧಾರ ಸಿಕ್ಕಿಲ್ಲ ಕಾರಣ ಇದು ಬೆಳಕಿನಿಂದ ಸೃಷ್ಟಿಸಲ್ಪಟ್ಟ ಸೃಷ್ಠಿ. ಇದರ ಸಂಚಾರ ವೇಗ ಬೆಳಕಿನಷ್ಟೆ ವೇಗ ಇದೆ. ಬೆಳಕಿನಿಂದ ಒಂದು ವಸ್ತುವನ್ನು ಸೃಷ್ಠಿಸುವಷ್ಟು ವಿಜ್ಞಾನ ಮುಂದುವರಿದಿರದ ಕಾರಣ ಇದರ ಬಗ್ಗೆ ವೈಜ್ಞಾನಿಕ ಆಧಾರ ಸಿಕ್ಕಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *