ಜಮಾಲ್ ಕೆ.
ಅಶ್ಹದು ಅನ್ಲಾ ಇಲಾಹ ಇಲ್ಲಲ್ಲಾಹು ವ ಅಶ್ಹದು ಅನ್ನ ಮುಹಮ್ಮದುರ್ರಸೂಲುಲ್ಲಾಹ್ (ಅಲ್ಲಾಹನಲ್ಲದೆ ಅನ್ಯದ ದೇವನಿಲ್ಲ ಮುಹಮ್ಮದ್ ಅವನ ದಾಸರಾಗಿದ್ದಾರೆ) ಎಂಬ ಪವಿತ್ರ ವಚನ ಮನಸಾರೆ ದೃಢವಾಗಿರಿಸಿ ನಾಲಿಗೆಯಿಂದ ಉಚ್ಚರಿಸಿ ಶಹಾದತ್ ದೃಢೀಕರಿಸಿದಾಗ ಓರ್ವನು ಸತ್ಯವಿಶ್ವಾಸಿಯಾಗುವನು. ಅದರರ್ಥ ಓರ್ವ ಮುಸ್ಲಿಮ್ ಆಗುವುದರೊಂದಿಗೆ ಆತ ಇಸ್ಲಾಮೀ ಕಾರ್ಯಕರ್ತನೂ ಆಗುವನು ಎಂದಾಗಿದೆ. ಅಥವಾ ಕಲಿಮಾ ಅಥವಾ ಸಾಕ್ಷ್ಯ ವಚನ ವ್ಯಕ್ತಿ, ಕುಟುಂಬ, ಸಮಾಜ, ದೇಶ ಎಂದು ಮುಂತಾದ ಜೀವನದ ಎಲ್ಲ ಕ್ಷೇತ್ರಗಳಲ್ಲಿ ನ್ಯಾಯಕ್ಕಾಗಿ ನೆಲೆಗೊಳ್ಳುವ ಕರ್ತವ್ಯವನ್ನು ತಂದುಕೊಡುತ್ತದೆ. ಆಗಲೇ ನಮ್ಮ ಈಮಾನ್, ಇಸ್ಲಾಮ್ ಬೆಳೆಯುತ್ತದೆ.
ಒಳಿತುಗಳಲ್ಲಿ ಅತ್ಯುತ್ತಮ ಒಳಿತು ಇಸ್ಲಾಮ್ ಆಗಿದೆ. ಆದ್ದರಿಂದಲೇ ನಾನು ಅವಲಂಬಿಸಿದ ಇಸ್ಲಾಮ್ ಅನ್ನು ಸಹೋದರ ಸಮುದಾಯದ ಸದಸ್ಯರಿಗೆ ಪರಿಚಯಿಸುವುದು ಬಹುದೊಡ್ಡ ಶಹಾದತ್ ಆಗಿದೆ. ಜೊತೆಗೆ ಪರಿಸರದಲ್ಲಿ ಗರಿಷ್ಠ ನೈತಿಕ ಪಾವಿತ್ರ್ಯ ಹೊಂದುವುದು ಮುಖ್ಯವಾಗಿದೆ. ಅಪರಾಧ ಕೃತ್ಯಗಳಿರುವ ಒಂದು ಸಮಾಜದಲ್ಲಿ ಅವುಗಳನ್ನು ಉಚ್ಚಾಟಿಸುವವರೆಗೆ ಇಸ್ಲಾಮ್ ಮರ ಬೆಳೆಯುವುದಿಲ್ಲ. ವಿಶ್ವಾಸಿಗಳು ಏಕ ಸಮಯದಲ್ಲಿ ಎರಡು ರೀತಿಯ ಕೆಲಸಗಳನ್ನು ಮಾಡಬೇಕಾಗಿದೆ. ಒಂದು ಸ್ವ ಬದಲಾವಣೆ, ಇನ್ನೊಂದು ಸಮಾಜದಲ್ಲಿ ಸುಧಾರಣೆ. ಇವಕ್ಕೆ ಪವಿತ್ರ ಕುರ್ಆನ್ ಉಪಯೋಗಿಸಿದ್ದು ಸತ್ಯಸಾಕ್ಷ್ಯ ಎಂಬ ಪದವನ್ನಾಗಿದೆ.
ಇದು ನಮ್ಮ ಜೀವನದ ಗುರಿ. ವಿಷಾದವೆಂದರೆ ಕಲಿಮತ್ತುತೌಹೀದ್ (ಪವಿತ್ರ ವಚನ) ಉಚ್ಚರಿಸುವುದರಿಂದ ನಮ್ಮ ಮೇಲೆ ಇಂತಹ ದೌತ್ಯದ ಹೊಣೆ ಬಂದಿದೆ ಎನ್ನುವುದನ್ನು ನಾವು ಮರೆತಿದ್ದೇವೆ.( ಪವಿತ್ರ ಕುರ್ಆನ್ ಅಧ್ಯಯನದಿಂದ ಸಮುದಾಯ ದೂರವಾಗಿದ್ದು ಈ ದುರಂತಕ್ಕೆ ಕಾರಣವಾಗಿದೆ). ಸತ್ಯ, ನ್ಯಾಯ, ಸಹವರ್ತಿತ್ವ, ಸಹನೆ, ವಿಶಾಲ ಮನಸ್ಸು, ವಿನಯ, ಕ್ಷಮೆ, ಕರುಣೆ ಮುಂತಾದ ಮೌಲ್ಯಗಳು ಖಾಸಗಿ ಜೀವನದಲ್ಲಿ ಮತ್ತು ಸಮಾಜಿಕ, ಸಾಂಸ್ಕ್ರತಿಕ, ರಾಜಕೀಯ ಜೀವನದಲ್ಲಿ ಬಿಗಿ ಹಿಡಿದುಕೊಳ್ಳಬೇಕಾಗಿದೆ. ಸತ್ಯವಿಶ್ವಾಸಿಗಳು ಬರೇ ಉಪದೇಶಕರಲ್ಲ. ಕೇವಲ ಭಾಷಣಕರ್ತರಲ್ಲ. ಬಹಿರಂಗವಾಗಿ ಹೇಳುವುದು ಸ್ವ ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರು.
ಈ ರೀತಿ ನಮ್ಮ ಸತ್ಯ ಸಾಕ್ಷ್ಯದ ಮೂಲಕ ಮನುಷ್ಯರು ಅನುಭವಿಸುವ ನಾನಾಜಾತಿ,ಧರ್ಮಸ್ಥರ, ಜಾತ್ಯತೀತರ, ಮನಸ್ಸು ಮತ್ತು ಸಾರ್ವಜನಿಕ ಜೀವನವನ್ನು ಶುದ್ಧೀಕರಿಸುವ ಇಸ್ಲಾಮಿನ ಸಾಮಥ್ರ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ಪ್ರವಾದಿಯ ದೌತ್ಯವನ್ನು ವಿವರಿಸಲು ಪವಿತ್ರ ಕುರ್ಆನ್ ವ್ಯಾಪಕವಾಗಿ ಬಳಿಸಿದ ಪದ ಶಾಹಿದ್ ಎಂದಾಗಿದೆ. ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಅಥವಾ ಪ್ರವಾದಿಯವರನ್ನು(ಸ) ಅಭಿಸಂಬೋಧಿಸಿ ಅಲ್ಲಾಹನು ಉಪಯೋಗಿಸಿದ ಪದದಿಂದಲೇ ಮುಸ್ಲಿಮರನ್ನು ಅಭಿಸಂಬೋಧಿಸಿದ್ದು. ಅಂದರೆ ಅದರರ್ಥ ಪ್ರವಾದಿ ನಿರ್ವಹಿಸಿದ ಅದೇ ದೌತ್ಯವನ್ನು ನಾವೂ ನಿರ್ವಹಿಸಬೇಕೆಂದಾಗಿದೆ.
IslamKannada News Portal

