ಹೊಸದಿಲ್ಲಿ, ಅ. 25: ಮಾಧ್ಯಮ ವರದಿಯ ಪ್ರಕಾರ ಸೌದಿ ಅರೇಬಿಯ ವೀಸಾ ಶುಲ್ಕದಲ್ಲಿ ಆರು ಪಟ್ಟು ಹೆಚ್ಚಳ ಮಾಡಿದ್ದು ಇದರಿಂದಾಗಿ ಹಜ್ ಯಾತ್ರೆ ದುಬಾರಿಯಾಗಲಿದೆ.
ಹಲವು ಮುಸ್ಲಿಮ್ ದೇಶಗಳು ಸೌದಿ ಅರೇಬಿಯದ ಈ ತೀರ್ಮಾನದ ವಿರುದ್ಧ ಆಕ್ಷೇಪ ಎತ್ತಿವೆ. ಸಿಂಗಲ್ ಎಂಟ್ರಿ ವೀಸಾಕ್ಕೆ ಈ ಡಾಲರ್ 93 ಇದ್ದು ಡಾಲರ್ 533 ವೆಚ್ಚ ತಗಲಲಿದೆ. ಮಲ್ಟಿಪಲ್ ಎಂಟ್ರಿಯ ಆರು ತಿಂಗಳ ವೀಸಾಕ್ಕೆ 800 ಡಾಲರ್ ಮತ್ತು ಒಂದು ವರ್ಷದ ವೀಸಾಕ್ಕೆ 1, 333 ಡಾಲರ್ ವೆಚ್ಚ ಭರಿಸಬೇಕಾಗಿದೆ.
ಕ್ವಿಝ್ ಆಫ್ರಿಕಾದ ವರದಿಯ ಪ್ರಕಾರ ನವೀಕೃತ ವೀಸಾ ನೀತಿಯಿಂದ ಎಲ್ಲ ಪ್ರವಾಸಿಗರಿಗೂ, ಧಾರ್ಮಿಕ, ವ್ಯಾಪಾರ ಪ್ರವಾಸ ಮಾಡುವವರಿಗೂ ಪ್ರಭಾವ ಆಗಲಿದೆ.
ಯಾತ್ರಿಕರು ವಿಶೇಷವಾಗಿ ವಾಸ, ಓಡಾಟ ಸೌಕರ್ಯಕ್ಕೆ ಹೆಚ್ಚು ಹಣ ಭರಿಸಬೇಕಾದ ಸ್ಥಿತಿ ಇದೆ. ಈ ನೀತಿ ಸೌದಿ ಅರೇಬಿಯದ ಸಚಿವಾಲಯದ ಶಿಫಾರಸ್ಸು ಪ್ರಕಾರ ಅವಲಂಬಿಸಲಾಗಿದೆ. ಹೊಸ ನೀತಿ ಅಕ್ಟೋಬರ್ ಎರಡರಿಂದ ಜಾರಿಗೆ ಬಂದಿದೆ.
IslamKannada News Portal
