ಲಾಹೋರ್, ನ.18: ಖೈಬರ್-ಫಕ್ತೂನ್ವಾದಲ್ಲಿ ಸಿಖ್ಖರಿಗಾಗಿ ಪ್ರಥಮ ಬಾಬಾ ಗುರು ನಾನಕ್ ಸ್ಕೂಲ್ ಆಫ್ ಸೈನ್ಸ್ ಟೆಕ್ನಾಲಜಿ, ಇಂಜಿನಿಯರಿಂಗ್, ಆರ್ಟ್ ಆಂಡ್ ಮ್ಯಾಥಮೆಟಿಕ್ಸ್ ಕಾಲೇಜನ್ನು ಪಾಕಿಸ್ತಾನ ಸರಕಾರ ತೆರೆದಿದೆ.
ಪೇಶಾವರದಲ್ಲಿ ಇಂತಹದೇ ಶಾಲೆಯಲ್ಲಿ ಸೋಮವಾರದಿಂದ ಪಾಠ ಆರಂಭವಾಗಲಿದೆ. ವಿಭಜನೆಯ 72 ವರ್ಷದ ನಂತರ ಪಾಕಿಸ್ತಾನ ಸರಕಾರ ಅಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಹೊಸ ಪೀಳಿಗೆಗಾಗಿ ವಿಜ್ಞಾನ, ತಂತ್ರಜ್ಞಾನ ಶಿಕ್ಷಣದ ಕೊಡುಗೆ ನೀಡುತ್ತಿದೆ. ಶ್ರೀ ಗುರುನಾನಕ್ ದೇವ್‍ಜಿ ಅವರ 550ನೇ ಜನ್ಮ ವರ್ಷದಲ್ಲಿ ಈ ಸ್ಕೂಲ್ ಆರಂಭವಾಗುತ್ತಿದ್ದು ಇಲ್ಲಿ ವಿವಿಧ ವಿಷಯಗಳಲ್ಲಿ ಸಿಖ್ ವಿದ್ಯಾರ್ಥಿಗಳು ಕಲಿಯಲಿದ್ದಾರೆ.
ಶಾಲೆಯನ್ನು ಶುಕ್ರವಾರ ಖೈಬರ್ ಮುಖ್ಯಮಂತ್ರಿಯವರ ವಿಶೇಷ ಸಹಾಯಕ ಕಮ್ರಾನ್ ಬಂಗಶ್ ಉದ್ಘಾಟಿಸಿದ್ದು . ಇದೇ ವೇಳೆ ಪೇಶಾವರದ ಹಿಂದೂ ಸಿಖ್ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಾಕಿಸ್ತಾನ ಸರಕಾರ ಅಲ್ಪಸಂಖ್ಯಾತರ ಮೂಲ ಸೌಕರ್ಯ, ಶಿಕ್ಷಣದತ್ತ ಹೆಚ್ಚು ಗಮನ ಹರಿಸುತ್ತಿದೆ. ಪೇಶಾವರದ ಸಿಖ್ಖ ಮೊಹಲ್ಲಾದಲ್ಲಿ ಜೊಗನ್ ಶಾದಲ್ಲಿ ಮಿಡ್ಲ್ ಸ್ಕೂಲ್ ತೆರೆಯಲಾಗುವುದು ಎಂದು ಕಮ್ರಾನ್ ಈ ಸಂದರ್ಭದಲ್ಲಿ ಹೇಳಿದರು.
IslamKannada News Portal
