Home / ವಾರ್ತೆಗಳು / ‘ತಫ್ಹೀಮುಲ್ ಕುರ್‍ಆನ್’ ಆರು ಸಂಪುಟಗಳಲ್ಲಿ…

‘ತಫ್ಹೀಮುಲ್ ಕುರ್‍ಆನ್’ ಆರು ಸಂಪುಟಗಳಲ್ಲಿ…

ಆಧುನಿಕ ಮನ-ಮಸ್ತಿಷ್ಕಗಳು ಸರೆಗೊಳ್ಳುವಂತಹ ‘ತಫ್ಹೀಮುಲ್ ಕುರ್‍ಆನ್’ ಸೆಯ್ಯದ್ ಅಬುಲ್ ಆಲಾ ಮೌದೂದಿ (ರ) ಅವರು ಅನುವಾದಿಸಿರುವ “ಪವಿತ್ರ ಕುರ್’ಆನ್’ ನ “ಜಗದ್ವಿಖ್ಯಾತ ವ್ಯಾಖ್ಯಾನ” ಗ್ರಂಥವಾಗಿದೆ. ಇದೊಂದು ಕೇವಲ ಕುರ್‍ಆನಿನ ಅನುವಾದ ಮಾತ್ರ ಅಲ್ಲ ;ಬದಲಾಗಿ ಪವಿತ್ರ ಕುರ್‍ಆನನ್ನು ವಿಶಾಲವಾಗಿ ಗ್ರಹಿಸಲು ಸಾಧ್ಯವಾಗಿಸುವ ಅಗಾಧ ಜ್ಞಾನ ಭಂಡಾರವಾಗಿದೆ.
ಈ ಗ್ರಂಥದ ಅಧ್ಯಯನವು ; ಈ ಭೌತಿಕ ಜಗತ್ತಿನ ವಾಸ್ತವಿಕತೆ ಏನು, ಇದರಲ್ಲಿ ತಾನು ಮತ್ತು ತನ್ನ ಪಾತ್ರ ಹೊಣೆಗಾರಿಕೆಗಳೇನು ಎಂಬುದನ್ನು ಸವಿವರವಾಗಿ ಹ್ರದಯಕ್ಕೆ ನಾಟುವಂತೆ ವಿವರಿಸುತ್ತದೆ. ವಿಭಿನ್ನ ಸಿದ್ಧಾಂತಗಳ ಮೋಹಕ ಜಾಲಕ್ಕೆ ಸಿಲುಕಿ ಧರ್ಮ ಧಿಕ್ಕಾರದ ದಾರಿಯತ್ತ ಸಾಗುತ್ತಿದ್ದ ಸಮೂಹವನ್ನು ಅವುಗಳಿಂದ ರಕ್ಷಿಸುವಲ್ಲಿ ಈ ಕುರ್’ಆನ್ ವ್ಯಾಖ್ಯಾನ ಅಪಾರ ಯಶಸ್ಸು ಕಂಡಿದೆ.
‘ತಫ್ಹೀಮುಲ್ ಕುರ್‍ಆನ್’ ನ ಕನ್ನಡ ಭಾಷಾಂತರವು ಆರು ಸಂಪುಟಗಳಲ್ಲಿ ಲಭ್ಯವಿದ್ದು , ಇದು ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಿ ಪ್ರಕಾಶನದ ಅಮೂಲ್ಯ ಕೊಡುಗೆಯಾಗಿದೆ. ಪಿ. ನೂರ್ ಮುಹಮ್ಮದ್ ಉಪ್ಪಿನಂಗಡಿ ಮತ್ತು ಎಂ. ಸಾದುಲ್ಲಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
● ಶಾಂತಿ ಪ್ರಕಾಶನ
+91 9448696490 | +91 9449334496
SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …