ರಿಯಾಲಿಟಿ ಟಿವಿ ತಾರೆ ಮತ್ತು ಫ್ರೆಂಚ್ ಮಾಡೆಲ್ ಮರೀನ್ ಎಲ್ ಹಿಮರ್ ಇಸ್ಲಾಂಗೆ ಮತಾಂತರಗೊಂಡರು ಮತ್ತು ಇದು ತನ್ನ ಜೀವನದ “ಸಂತೋಷದ ದಿನ” ಎಂದು ಹೇಳಿದ್ದಾರೆ.
ಇಸ್ಲಾಂಗೆ ಮತಾಂತರಗೊಳ್ಳುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ಹಿಮರ್ ಅವರು ಶನಿವಾರ ಇಸ್ಲಾಂನ ಅತ್ಯಂತ ಪವಿತ್ರ ಸ್ಥಳವಾದ ಕಾಬಾದ ಸಮೀಪದಲ್ಲಿ ಹಿಜಾಬ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಹಿಮರ್ ಫ್ರೆಂಚ್ ರಿಯಾಲಿಟಿ ಸರಣಿ ಲೆಸ್ ಪ್ರಿನ್ಸಸ್ ಎಟ್ ಲೆಸ್ ಪ್ರಿನ್ಸೆಸ್ ಡಿ ಎಲ್ ಅಮೌರ್ (ಪ್ರೀತಿಯ ರಾಜಕುಮಾರರು ಮತ್ತು ರಾಜಕುಮಾರಿಯರು) ನಲ್ಲಿ ನಟಿಸಿದ್ದರು.
“ಇದೀಗ ಅನುಭವಿಸುತ್ತಿರುವ ಸಂತೋಷ ಮತ್ತು ಭಾವನೆಗಳ ಮಟ್ಟವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇಂಶಾ ಅಲ್ಲಾಹ್, ನಾನು ಆಧ್ಯಾತ್ಮಿಕ ಪ್ರಯಾಣದಲ್ಲಿದ್ದೇನೆ. ಅದು ಯಾವಾಗಲೂ ನನ್ನನ್ನು ಮೇಲಕ್ಕೆತ್ತುತ್ತದೆ ಮತ್ತು ಮುನ್ನಡೆಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು Instagram ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಬೆಂಬಲಕ್ಕಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದಳು.
IslamKannada News Portal