ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಮಂದಿಯನ್ನು ಭೂಮಿಗೆ ಕನ್ನ ಕೊರೆದು ಬದುಕಿಸಿದ ದೆಹಲಿ ಕಾರ್ಮಿಕ ತಂಡದ ನಾಯಕ ವಕೀಲ್ ಹಸನ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನ ಭಾವುಕವಾಗಿದೆ ಮತ್ತು ಭಾರಿ ಪ್ರಚಾರವನ್ನು ಪಡೆದಿದೆ. ಈ ದೇಶದವರಾದ ನಾವು ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದವರು ಹೇಳಿದ್ದಾರೆ.
ನಮ್ಮ ತಂಡದಲ್ಲಿ ಹಿಂದೂಗಳೂ ಇದ್ದಾರೆ ಮುಸ್ಲಿಮರೂ ಇದ್ದಾರೆ. ಸುರಂಗದೊಳಗೆ ಸಿಲುಕಿಕೊಂಡಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ನಾವು ಕಠಿಣ ಪ್ರಯತ್ನ ಮಾಡಿದ್ದೇವೆ.. ಇವರಲ್ಲಿ ಯಾರಿಗೂ ಒಂಟಿಯಾಗಿ ಈ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಇದುವೇ ನಾನು ಎಲ್ಲರಿಗೂ ನೀಡುವ ಸಂದೇಶವಾಗಿದೆ. ನಾವು ಸೌಹಾರ್ದದೊಂದಿಗೆ ಬದುಕಬೇಕು. ದ್ವೇಷದ ವಿಷವನ್ನು ಹಂಚಬಾರದು. ಈ ದೇಶಕ್ಕಾಗಿ ನಾವು 100 ಶೇಕಡಾ ತ್ಯಾಗಕ್ಕೆ ಸಿದ್ಧವಿದ್ದೇವೆ. ದಯವಿಟ್ಟು ನನ್ನ ಸಂದೇಶವನ್ನು ಎಲ್ಲರೊಂದಿಗೂ ಹಂಚಿ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
IslamKannada News Portal
