Home / ಲೇಖನಗಳು / ಆಲಸ್ಯದ ಬಗ್ಗೆ..

ಆಲಸ್ಯದ ಬಗ್ಗೆ..

ಆಲಸ್ಯ ಎಂಬುದು ಪ್ರಾಯಭೇದಮನ್ಯೆ ಎಲ್ಲರಲ್ಲೂ ಕಾಣುವಂತಹ ದುರ್ಗುಣಗಳಲ್ಲೊಂದು. ಆಲಸ್ಯ ಶೈತಾನನ ಕುತಂತ್ರ ಕೂಡಾ ಹೌದು. ಮನುಷ್ಯನು ದೇವ ಸಾಮೀಪ್ಯ ಗಳಿಸಲು ಬಯಸಿದಾಗೆಲ್ಲಾ ಇಬ್ಲೀಸನು ಸಿದ್ಧಪಡಿಸಿದ ಬಲೆಯಾಗಿದೆ ಎಂದೂ ವ್ಯಾಖ್ಯಾನಿಸಬಹುದು.

ಏಕೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಉದ್ದೇಶ ಮತ್ತು ಕಾರ್ಯಗಳು ಪರಸ್ಪರ ಘರ್ಷಣೆಯಾಗುವ ಸಂದರ್ಭಗಳು ಅನೇಕ ಬಾರಿ ಆವರ್ತಿಸಿರಬಹುದು.

‘ನಾಳೆಯಿಂದ ನಾನು…

ಈ ರೀತಿ ಹೆಚ್ಚಿನವರು ನಾಳೆಯಿಂದ… ಎಂದು ಆಲೋಚಿಸುವುದಿದೆ. ಎಲ್ಲವನ್ನೂ ನಾಳೆಯಿಂದ ಬಂಧಿಸುವುದು.

ಉದಾಹರಣೆಗೆ .. ನಾಳೆ ಬೆಳಿಗ್ಗಿನ ಪ್ರಾರ್ಥನೆಯಿಂದ… ‘ ಸರಿಪಡಿಸೋಣ’ ಎಂಬ ಮನಸ್ಸಿನಲ್ಲಿ ಪಿಸುಗುಟ್ಟುವುದು ಕೂಡಾ ಒಂದು ತರಹದ ಶೈತಾನಿಯತ್. ಏಕೆಂದರೆ ಒಳ್ಳೆಯ ಉದ್ದೇಶಗಳನ್ನು ಈ ಕ್ಷಣದಿಂದಲೇ ಆರಂಭಿಸಬೇಕು. ಅದನ್ನು ನಾಳೆಗಾಗಿ ಮುಂದೂಡಬಾರದು.

ನಾವು ಬಯಸುವ ಅನೇಕ ಒಳ್ಳೆಯ ವಿಷಯಗಳನ್ನು ತಡಮಾಡುವ ಮತ್ತು ವಿಳಂಬಗೊಳಿಸುವ ಮೂಲಕ ನಮ್ಮನ್ನು ಮೋಸಗೊಳಿಸುವುದು ಶೈತಾನನ ತಂತ್ರ. ಕೆಲವೊಮ್ಮೆ ಶೈತಾನನು ನಾವು ಅಭ್ಯಾಸ ಮಾಡಲು ಬಯಸುವ ಕಾರ್ಯಗಳನ್ನು ವಿಳಂಬಗೊಳಿಸಲು ಇತರ ಒಳ್ಳೆಯ ಕಾರ್ಯಗಳನ್ನು ಮಾಡುವಂತೆ ಮಾಡುತ್ತದೆ.

ಕೇವಲ ಧಾರ್ಮಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಜೀವನದ ಇತರ ವಿಷಯಗಳಲ್ಲಿಯೂ ಇಂತಹ ‘ಆಲಸ್ಯ’ವು ಜೀವನದಲ್ಲಿ ದೊಡ್ಡ ಸೋಮಾರಿತನ ಉಂಟು ಮಾಡುತ್ತದೆ. ಈ ಆಲಸ್ಯ ಸ್ವಭಾವದಿಂದ ಸೋಮಾರಿಯಾಗಿ ಉಳಿದು, ಬದುಕನ್ನು ಅಸ್ತವ್ಯಸ್ತವಾಗಿಸಿದವರನ್ನು ನಮಗೆ ಕಾಣಬಹುದು.

ಆಲಸ್ಯವನ್ನು ಹೋಗಲಾಡಿಸಲು ಇರುವ ಏಕೈಕ ಮಾರ್ಗವೆಂದರೆ ಅಲ್ಲಾಹನ ದಿಕ್ರ್. ಅಲ್ಲಾಹನ ಸ್ಮರಣೆಯನ್ನು
ಹೆಚ್ಚಿಸುವುದು ಮತ್ತು ಪರಲೋಕದ ಬಗ್ಗೆ ನೆನಪಿಸುವುದು ಮತ್ತು ಮರಣವನ್ನು ಹೆಚ್ಚು ಹೆಚ್ಚಾಗಿ ನೆನಪಿಸುವುದರ ಮೂಲಕ ಆಲಸ್ಯದಿಂದ ದೂರ ಉಳಿಯಬಹುದು.

ಏಕೆಂದರೆ ನಾಳೆಯನ್ನು ಯಾರೂ ಕಂಡಿಲ್ಲ. ಮಾತ್ರ ವಲ್ಲ ಮುಂದಿನ ಕ್ಷಣ ಏನಾಗಲಿದೆ ಎಂಬ ಖಚಿತತೆ ಯಾರಿಗೂ ಇಲ್ಲ. ಆದ್ದರಿಂದ ನಾವು ಏನಾದರೂ ಒಳ್ಳೆಯ ಕರ್ಮಗಳ ಉದ್ದೇಶಿಸಿದಾಗ ಅದನ್ನು ವಿಳಂಬ ಮಾಡದೆ ತಕ್ಷಣ ಮಾಡಿ ಮುಗಿಸಬೇಕು.ಏಕೆಂದರೆ ಶೈತಾನನು ಮನುಷ್ಯ ನ ಪ್ರತ್ಯಕ್ಷ ಶತ್ರು ವೆಂದು ಕುರ್ಆನ್ ಬಾರಿ ಬಾರಿ ಎಚ್ಚರಿಸಿದೆ.

ಹೀಗಿರುವಾಗ ಮನುಷ್ಯ ನು ಒಳ್ಳೆಯ ಕೆಲಸದ ಬಗ್ಗೆ ಆಲೋಚಿಸಿದಾಗ ಹೇಗಾದರೂ ಅದನ್ನು ಅವನಿಂದ ತಪ್ಪಿಸಬೇಕೆಂದು ಶೈತಾನನು ಅವನ ಹಿಂದೆ ಬಿದ್ದಿರುತ್ತಾನೆ.

ಹಾಗಾಗಿ ಮುಂದಿನ ಕ್ಷಣದ ಬಗ್ಗೆ ಖಾತ್ರಿ ಯಿಲ್ಲದ ಮನುಜ ಅವನ ಒಳ್ಳೆಯ ಉದ್ದೇಶದ ಪೂರೈಕೆಗಾಗಿ ಒಂದು ಕ್ಷಣಕ್ಕೂ ವಿಷಯಗಳನ್ನು ಮುಂದೂಡುವುದಾದರೂ ಹೇಗೆ?!

ಪ್ರವಾದಿ (ಸ) ಯುವಕ ಇಬ್ನ್ ಉಮರ್ ಅವರ ಭುಜದ ಮೇಲೆ ಕೈಯಿಟ್ಟು ಹೇಳಿದರು: “ನೀನು ಈ ಜಗತ್ತಿನಲ್ಲಿ ಅಪರಿಚಿತನಾಗಿ ಅಥವಾ ದಾರಿ ಹೋಕನಂತೆ ಬದುಕು.

ಇಬ್ನ್ ಉಮರ್ (ರ.ಅ) ರಿಂದ ಈ ಹದೀಸ್ ಅನ್ನು ವಿವರಿಸುವ ಮುಜಾಹಿದ್ (ರ) ಹೇಳುತ್ತಾರೆ, ಇಬ್ನ್ ಉಮರ್ (ರ) ಹೇಳುತ್ತಿದ್ದರು”ನೀವು ಸಾಯಂಕಾಲದಲ್ಲಿದ್ದರೆ, ಬೆಳಿಗ್ಗೆ ನಿರೀಕ್ಷಿಸಬೇಡಿ, ಬೆಳಿಗ್ಗೆ ನೀವು ಸಾಯಂಕಾಲವನ್ನು ನಿರೀಕ್ಷಿಸಬೇಡಿ.
ನೀವು ಆರೋಗ್ಯವಾಗಿರುವಾಗ, ನಿಮ್ಮ ಅನಾರೋಗ್ಯಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿ, ನಿನ್ನ ಜೀವನೋಪಾದಿಯನ್ನು ನೀನೇ ನೋಡು. ಅದನ್ನು ಯಾರಿಂದಲೂ ನಿರೀಕ್ಷಿಸಬೇಡ. ನಿನ್ನ ಬೇಡಿಕೆಗಳನ್ನು ಪೂರೈಸಲು ಬೇಕಾದುದನ್ನು ನೀನೇ ತಯಾರು ಮಾಡು. ಜೀವಂತವಿರುವಾಗ ಮರಣಾನಂತರದ ಜೀವನದ ಯಶಸ್ಸಿಗಾಗಿ ತಯಾರಿ ಮಾಡಿ.

ಸೋಮಾರಿತನ ಮತ್ತು ಆಲಸ್ಯದಿಂದ ಮುಕ್ತರಾಗಲು ನಿರಂತರವಾಗಿ ಪ್ರಾರ್ಥಿಸುತ್ತಿರಬೇಕು..
ಓ ಅಲ್ಲಾಹ್, ನಾನು ದೌರ್ಬಲ್ಯ ಮತ್ತು ಸೋಮಾರಿತನದಿಂದ ನಿನ್ನಲ್ಲಿ ಅಭಯ ಯಾಚಿಸುತ್ತೇನೆ.

✍️ರೈಹಾನ್.ವಿಕೆ.
ಸಚೇರಿಪೇಟೆ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

One comment

  1. ಮುಹಮ್ಮದ್ ಅಲಿ ಕಮ್ಮರಡಿ

    ಒಳ್ಳೆಯ ಲೇಖನ

Leave a Reply

Your email address will not be published. Required fields are marked *