Home / editor (page 103)

editor

ಉಯುಗುರ್ ಮಾನವ ಹಕ್ಕು ಹೋರಾಟಗಾರ ಇಲ್‍ಹಾಂಗೆ ಯುರೋಪಿಯನ್ ಯೂನಿಯನ್ ಪ್ರಶಸ್ತಿ

ಸ್ಟಾಸ್‍ಬರ್ಗ್, ಅ. 26: ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟು ಮಾನವ ಹಕ್ಕು ಹೋರಾಟಗಾರರಿಗೆ ಪ್ರದಾನಿಸುವ ಸಖರೋವ್ ಪ್ರಶಸ್ತಿ ಈ ಸಲ ಉಯುಗುರ್‍ ಮುಸ್ಲಿಂ ನಾಯಕ ಹಾಗೂ ಅರ್ಥ ಶಾಸ್ತ್ರ ಅಧ್ಯಾಪಕ ಇಲ್‍ಹಾಂ ತೊಹ್ತಿ ಅವರಿಗೆ ಸಿಕ್ಕಿದ್ದು, ಚೀನ ಇವರ ವಿರುದ್ಧ ಪ್ರತ್ಯೇಕತಾವಾದ ಹರಡಿದರು ಎಂದು ಆರೋಪಿಸಿ ಇವರನ್ನು 2014 ರಿಂದ ಜೈಲಿನಲ್ಲಿರಿಸಿದೆ. ಅವರು ಬೀಜಿಂಗ್ ಯುನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ. ಇವರನ್ನು ಜೈಲಿಗೆ ಹಾಕಿದ್ದನ್ನು ವಿರೋಧಿಸಿ ಜಗತ್ತಿನಾದ್ಯಂತ ಪ್ರತಿಭಟನೆ ನಡೆದಿವೆ. ಅವರ …

Read More »

ಸೌದಿ ಅರೇಬಿಯದಿಂದ ಹಜ್ ವೀಸಾ ಶುಲ್ಕ ಆರು ಪಟ್ಟು ಹೆಚ್ಚಳ: ಹಜ್‍ ಯಾತ್ರೆ ಇನ್ನು ದುಬಾರಿ

ಹೊಸದಿಲ್ಲಿ, ಅ. 25: ಮಾಧ್ಯಮ ವರದಿಯ ಪ್ರಕಾರ ಸೌದಿ ಅರೇಬಿಯ ವೀಸಾ ಶುಲ್ಕದಲ್ಲಿ ಆರು ಪಟ್ಟು ಹೆಚ್ಚಳ ಮಾಡಿದ್ದು ಇದರಿಂದಾಗಿ ಹಜ್ ಯಾತ್ರೆ ದುಬಾರಿಯಾಗಲಿದೆ. ಹಲವು ಮುಸ್ಲಿಮ್ ದೇಶಗಳು ಸೌದಿ ಅರೇಬಿಯದ ಈ ತೀರ್ಮಾನದ ವಿರುದ್ಧ ಆಕ್ಷೇಪ ಎತ್ತಿವೆ. ಸಿಂಗಲ್ ಎಂಟ್ರಿ ವೀಸಾಕ್ಕೆ ಈ ಡಾಲರ್ 93 ಇದ್ದು ಡಾಲರ್ 533 ವೆಚ್ಚ ತಗಲಲಿದೆ. ಮಲ್ಟಿಪಲ್ ಎಂಟ್ರಿಯ ಆರು ತಿಂಗಳ ವೀಸಾಕ್ಕೆ 800 ಡಾಲರ್ ಮತ್ತು ಒಂದು ವರ್ಷದ ವೀಸಾಕ್ಕೆ …

Read More »

ಇಸ್ರೇಲ್ ಇಸ್ಲಾಮೀ ಗುರುತನ್ನೇ ಅಳಿಸಲು ಯತ್ನಿಸುತ್ತಿದೆ

ಟೆಲ್‍ಆವಿವ್, ಅ. 25: ಝಿಯೊನಿಸ್ಟ್ ಸೈನಿಕರು ಮತ್ತು ಝಿಯೋನಿಸ್ಟ್ ಉಗ್ರವಾದಿಗಳು ಮುಸ್ಲಿಮರ ಮೊದಲ ಕಿಬ್ಲಾ ಮಸ್ಚಿದುಲ್ ಅಕ್ಸಾದ ಮೇಲೆ ದಾಳಿ ಮಾಡಿದ ಘಟನೆಯನ್ನು ಉದ್ಧರಿಸಿ ಇಸ್ರೇಲ್ ಮತ್ತು ಝಿಯೊನಿಸ್ಟ್ ವಾದಿಗಳು ಪವಿತ್ರ ಸ್ಥಳವನ್ನು ಅಪಮಾನಿಸುವ ಕಾರ್ಯವನ್ನು ಮತ್ತೊಮ್ಮೆ ಮಾಡಿದೆ ಎಂದು ಫೆಲೆಸ್ತೀನಿ ಮೂಲಗಳು ತಿಳಿಸಿವೆ. ಮಸ್ಚಿದುಲ್ ಅಕ್ಸಾ ಮತ್ತು ಬೈತುಲ್ ಮುಕದ್ದಸ್‍ಗೂ ಯಹೂದಿಗಳ ಧರ್ಮ ಪರಂಪರೆಗೂ ಯಾವುದೇ ಸಂಬಂಧವಿಲ್ಲ. ಇದನ್ನು ಯುನೆಸ್ಕೊ ಕೂಡ ಎತ್ತಿ  ಹಿಡಿದಿತ್ತು. ಅದು 2016ರಲ್ಲಿ ಯುನೆಸ್ಕೊ …

Read More »

ಮಾದಕ ವಸ್ತು ವಿರುದ್ಧ ಜಾಗೃತಿಗೆ ಒಂದು ನಿಮಿಷದ ವೀಡಿಯೊ: ಒಂದು ಲಕ್ಷ ದಿರ್ಹಂ ಬಹುಮಾನ

ದುಬೈ, ಅ. 23: ಅನಧಿಕೃತ ಮದ್ದು ಬಳಸುವುದರ ವಿರುದ್ಧ ಸಮರ ಸಾರಿರುವ ದುಬೈ ಒಂದು ನಿಮಿಷದ ಜಾಗೃತಿ ವೀಡಿಯೊ ತಯಾರಿಸಿ ಒಂದು ಲಕ್ಷ ದಿರ್ಹಂ ಬಹುಮಾನ ಗೆಲ್ಲಿ ಎಂದು ಸ್ಪರ್ಧೆ ಇರಿಸಿಕೊಂಡಿದೆ. ಮಾದಕ ವಸ್ತುಗಳ ಬಳಕೆಯಿಂದಾಗುವ ದುರಂತಗಳ ಕುರಿತು ಇದರಲ್ಲಿ ಜಾಗೃತಿ ಇರಬೇಕು. ಯುಎಇಯ ಇದ್ಯಾರ್ಥಿಗಳಿಗೆ ದುಬೈ ಪೊಲೀಸರು ಸ್ಪರ್ಧೆ ಆಯೋಜಿಸಿದ್ದಾರೆ. ಮಾದಕ ವಸ್ತುಗಳ ಬಳಕೆ, ಆನ್‍ಲೈನ್ ಮೂಲಕ ನಡೆಯುವ ಬೆದರಿಕೆಗಳು, ವಂಚನೆಗಳು, ವೀಡಿಯೊ ಗೇಮ್‍ನ ಆಡಿಕ್ಟ್ ವಿಷಯಗಳಲ್ಲಿ ಕ್ಲಿಪ್ …

Read More »

ಇಸ್ಲಾಮೀ ಇತಿಹಾಸದ ಮಹಾ ಅದ್ಭುತ

ಪವಿತ್ರ ಕುರ್‍ಆನ್ ಹೇಳುತ್ತದೆ- ” ಅವರು ಅದೆಷ್ಟೋ ಉದ್ಯಾನಗಳನ್ನು ಚಿಲುಮೆಗಳನ್ನು ಹೊಲಗಳನ್ನು ಭವ್ಯ ಅರಮನೆಗಳನ್ನು ಬಿಟ್ಟು ಹೋದರು. ಅವರು ಸುಖಿಸುತ್ತಿದ್ದ ಎಷ್ಟೋ ಭೋಗ ಸಾಮಾಗ್ರಿಗಳು ಅವರ ಹಿಂದೆಯೇ ಉಳಿದು ಬಿಟ್ಟವು. ಅವರ ಅಂತ್ಯ ಹೀಗಾಯಿತು. ನಾವು ಇತರರನ್ನು ಈ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು. ತರುವಾಯ ಆಕಾಶವಾಗಲಿ ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಒಂದಿಷ್ಟು ಕಾಲಾವಕಾಶವನ್ನು ಅವರಿಗೆ ನೀಡಲಿಲ್ಲ. (ಅದ್ದುಖಾನ್ 25-29) ಮುಸ್ಲಿಮರಿಗೆ ಸಿಕ್ಕಿದ ಯಶಸ್ಸಿನ್ನಲ್ಲಿ ಅಲ್ಲಾಹನ ಪಾತ್ರ ಹಿರಿದಾಗಿತ್ತು. ಸಮಾಜದಿಂದ …

Read More »

ತಪ್ಪನ್ನರಿಯಿರಿ, ಒಪ್ಪಿಕೊಳ್ಳಿರಿ, ತಿದ್ದಿರಿ..

ಡಾ. ಅಬ್ದುಲ್ ವಾಸಿಅï ಅರೇಬಿಯ ಇತಿಹಾಸ ಅಧ್ಯಯನಿಸಿದಾಗ ಕುಪ್ರಸಿದ್ಧ ದರೋಡೆಕೋರರೊಬ್ಬರನ್ನು ಕಾಣಬಹುದು. ಅಲ್ ಉಹೈಮಿರ್ ಅಸ್ಸಅದಿ. ಒಂಟೆ ಕದಿಯುವುದರಲ್ಲಿ ಕದೀಮ. ಜತೆಗೆ ದಾರಿ ಹೋಕರ ದರೋಡೆ ಮಾಡುವುದರಲ್ಲಿಯೂ ನಿಸ್ಸೀಮ ಆಗಿದ್ದರು. ಈ ಕುರಿತು ಅವರಿಗೆ ಅಹಂಭಾವೂ ಇತ್ತು. ಊರಿನಲ್ಲಿ ಗಲಾಟೆ ಮಾಡಿ ಹೆದರಿಕೆ ಸೃಷ್ಟಿಲು ಅವರಿಗೆ ಸಾಧ್ಯವಾಗಿತ್ತು. ಈ ದರೋಡೆಕೋರನಲ್ಲಿ ಒಂದು ವಿಶೇಷತೆಯೂ ಇತ್ತು. ಬೇರೆ ಕಳ್ಳರಿಗಿಂತ ಭಿನ್ನವಾದುದು. ದೋಚಿದರೆ ಆ ಅಪರಾಧಕ್ಕೆ ಅವರಲ್ಲಿ ಪಾಪ ಪ್ರಜ್ಞೆ ಇರುತ್ತಿರಲಿಲ್ಲ. ಅಂತಹ …

Read More »

ಶಹೀದ್ ಅಶ್ಫಾಕುಲ್ಲಾಹ್ ಖಾನ್‍ರ 119 ಜನ್ಮ ದಿನ; ಬಲಿದಾನವನ್ನು ಮರೆಯಲಾದೀತೆ?

ಹೊಸದಿಲ್ಲಿ, ಅ. 23: ಉಪರಾಷ್ಟ್ರಪತಿ ವೆಂಕಯ್ಯನಾಯಿಡು ಮಂಗಳವಾರ ಶಹೀದ್ ಅಶ್ಫಾಕುಲ್ಲಾ ಖಾನ್‍ರ 119ನೇ ಜನ್ಮದಿನದ ಕುರಿತು ಟ್ವೀಟ್ ಮಾಡಿದ್ದು ” ಇಂದು ಅಶ್ಫಾಕುಲ್ಲಾರ ಜನ್ಮದಿನವಾಗಿದೆ. ಬಲಿದಾನದ ಪುಣ್ಯ ಸ್ಮತಿಗೆ ಪ್ರಣಾಮ ಮಾಡುವೆ. ದೇಶಕ್ಕಾಗಿ ಹುತಾತ್ಮರಾದ ರಾಷ್ಟ್ರದ ಚೇತನ ಅವರು ಎಂದು ಹೇಳಿದರು. ಅಶ್ಫಾಕುಲ್ಲಾ ಉತ್ತರ ಪ್ರದೇಶ ಶಹಜಾನ್ ಪುರದವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಮುಂಚೂಣಿಯ ಸದಸ್ಯನಾಗಿದ್ದರು. ಅಶ್ಫಾಕುಲ್ಲಾ ಅಕ್ಟೋಬರ್ 22, 1900ರಲ್ಲಿ ಉತ್ತರ ಪ್ರದೇಶದ ಶಾಜಹಾನ್ ಪುರದಲ್ಲಿ ಜನಿಸಿದರು. …

Read More »

ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲು ಸೌದಿ ಅರೇಬಿಯ ಭೇಟಿಗೂ ಸಿದ್ಧ: ಇರಾನ್ ವಿದೇಶ ಸಚಿವ

ಟೆಹ್ರಾನ್, ಆ. 23: ಸೌದಿ ಅರೇಬಿಯ ಮತ್ತು ಇರಾನ್ ಪರಸ್ಪರ ಭಿನ್ನಮತವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುವ ಲಕ್ಷಣಗಳು ಗೋಚರಿಸಿವೆ. ಈ ವಿಷಯದಲ್ಲಿ ತಾನು ಸೌದಿ ಅರೇಬಿಯ ಸಂದರ್ಶಿಸಲು ಸಿದ್ಧ ಎಂದು ಇರಾನಿನ ವಿದೇಶ ಸಚಿವ ಸಾರಿಫ್ ಹೇಳಿದರು. ಕಳೆದ ದಿವಸ ಟೆಹ್ರಾನ್‍ನಲ್ಲಿ ಅಂತಾರಾಷ್ಟ್ರೀಯ ಕಾನೂನು , ಏಕಪಕ್ಷೀಯ ನಡೆ ಎಂಬ ವಿಷಯದ ಮೇಲೆ ನಡೆದ ಸಮ್ಮೇಳನದಲ್ಲಿ ಅವರು ಮಾತಾಡುತ್ತಾ ಭಿನ್ನಾಭಿಪ್ರಾಯ ಬಗೆಹರಿಸಲು ಸೌದಿಯೊಂದಿಗೆ ಚರ್ಚಿಸಲು ಸಿದ್ಧ ಎಂದು ತಿಳಿಸಿದರು. …

Read More »

ಮಸೀದಿಗೆ ಹಾನಿ: ಮುಸ್ಲಿಮರ ಕ್ಷಮೆ ಯಾಚಿಸಿದ ಹಾಂಕಾಂಗ್ -ವೀಡಿಯೊ

ಹಾಂಕಾಂಗ್, ಅ. ರವಿವಾರ ರಾತ್ರೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ವೇಳೆ ನಗರದ ದೊಡ್ಡ ಮಸೀದಿಗೆ ಹಾನಿಯಾಗಿದ್ದು, ಸೋಮವಾರ ಸ್ವಾಯತ್ತ ಪ್ರದೇಶದ ಮುಖ್ಯ ಅಧಿಕಾರಿ ಕೆರಿ ಲೆಮ್ ಮತ್ತು ಪೊಲೀಸ್ ಮುಖ್ಯಸ್ಥರು ಘಟನೆಗಾಗಿ ಮುಸ್ಲಿಮರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಧಿಕಾರಿಗಳ ಕ್ಷಮೆ ಯಾಚನೆಯಿಂದ ಗೊಂದಲ ಪರಿಹಾರವಾಗಿದ್ದು ಹಾಕಾಂಗಿನ ಮುಸ್ಲಿಮ್ ಸಮುದಾಯ ಶಾಂತಿ ಕಾಪಾಡಬೇಕೆಂದು ಮುಸ್ಲಿಮ್ ನಾಯಕರು ಕರೆ ನೀಡಿದ್ದಾರೆ. ಪೊಲೀಸರ ಜಲಫಿರಂಗಿಯಿಂದ ಮಸೀದಿಯ ಗೋಡೆ ಹಾನಿಗೊಳಗಾಗಿತ್ತು. ಪ್ರಜಾಪ್ರಭುತ್ವಾದಿಗಳ ಮೆರವಣಿಗೆ …

Read More »

ನಾಳೆಗಾಗಿ ಹೆಣ್ಣು ಮಕ್ಕಳನ್ನು ಗಟ್ಟಿಗೊಳಿಸಿರಿ

ಅಬ್ದುಲ್ ಹಫೀಝ್ ನದ್ವಿ ಹೊಳೆಯುವ ನಾಳೆಗಾಗಿ ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸಿ ಎನ್ನುವ ಶೀರ್ಷಿಕೆಯಡಿಯಲ್ಲಿ ಕಳೆದ ಅಕ್ಟೋಬರ್ ಹನ್ನೊಂದಕ್ಕೆ ವಿಶ್ವ ಬಾಲಕಿಯರ ದಿನ ಆಚರಿಸಲಾಯಿತು. ಹೆಣ್ಣು ಮಕ್ಕಳ ರಕ್ಷಣೆ, ಅವರಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ಸೃಷ್ಟಿಸಲು ಯುಎನ್‍ಒ ಜಾಗತಿಕ ಮಟ್ಟದಲ್ಲಿ ಜಾಗೃತಿ ನಡೆಸಿತು. ಆದರೆ ಇಸ್ಲಾಂ ಹೆಮ್ಮಕ್ಕಳ ಬಗ್ಗೆ ಏನೆನ್ನುತ್ತದೆ. ಪುರಷನಂತೆ ಮಹಿಳೆಯೂ ದೇವನ ವಿಶೇಷ ಸೃಷ್ಟಿ ಎಂದು ಪವಿತ್ರ ಕುರ್‍ಆನ್ ಹೇಳುತ್ತಿದೆ.” ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. …

Read More »