2018ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಪಾನ್ ಮತ್ತು ಬೆಲ್ಜಿಯಂನ ನಡುವೆ ನಡೆದ ಪಂದ್ಯವು ಬಹಳ ಜಿದ್ದಾಜಿದ್ದಿನಿಂದ ಕೂಡಿತ್ತು. ಆ ವಿಶ್ವಕಪ್ನ ಅತ್ಯಂತ ಫೇವರಿಟ್ ತಂಡವೆಂದು ಹೇಳಲಾಗಿದ್ದ ಬೆಲ್ಜಿಯಂನ ವಿರುದ್ಧ ಕೊನೆಯ ನಿಮಿಷದವರೆಗೂ ಹೋರಾಡಿ 3-2 ಎಂಬ ಸ್ವಲ್ಪ ವ್ಯತ್ಯಾಸದೊಂದಿಗೆ ಜಪಾನ್ ಸೋಲೊಪ್ಪಿಕೊಂಡಿತ್ತು. ಆದರೆ ಈ ಎಲ್ಲಾ ವಿಷಯಗಳಿಂದ ಆ ಪಂದ್ಯವು ಚರಿತ್ರೆಯಲ್ಲಿ ಸ್ಮರಣೀಯವಾದದ್ದಲ್ಲ. ತಮ್ಮ ಪ್ರೀತಿಯ ತಂಡ ಹೋರಾಡಿ ಸೋತರೂ, ಅದರ ನೋವನ್ನು ತೋರ್ಪಡಿಸದೆ ಪಂದ್ಯದ ಬಳಿಕ ಜಪಾನ್ನ ಫುಟ್ಬಾಲ್ …
Read More »2.5 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಹಿಂದಿರುಗಿಸಿದ ಬೆಂಗಳೂರಿನ ಈ ನಿಸ್ವಾರ್ಥ ಕ್ಯಾಬ್ ಚಾಲಕ
ಬೆಂಗಳೂರು ; ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಜನರು ಒಂದಲ್ಲ ಒಂದು ರೀತಿಯಲ್ಲಿ ಕೆಲವೊಮ್ಮೆ ತಮ್ಮ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಳ್ಳತನವಾದರೆ, ಇನ್ನು ಕೆಲವೊಮ್ಮೆ ವಾಹನದಲ್ಲಿ ಮರೆತು ಬಿಟ್ಟು ಹೋಗುತ್ತಾರೆ. ಇಂತಹ ವಸ್ತುಗಳು ಮತ್ತೆ ಸಿಗುತ್ತದೆ ಎಂಬ ಭರವಸೆ ಹೆಚ್ಚಿನವರಿಗಿರುವುದಿಲ್ಲ. ಆದರೆ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಕೆಲವರು ಇತರರ ಸೊತ್ತುಗಳನ್ನು ಜೋಪಾನವಾಗಿಟ್ಟು ಅವರಿಗೆ ಮರಳಿಸುತ್ತಾರೆ. ಅಂತಹ ಓರ್ವ ಕ್ಯಾಬ್ ಡ್ರೈವರ್ ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಸಯೂಜ್ ರವೀಂದ್ರನ್ ಎಂಬವರು …
Read More »ಜಿಹಾದ್ ಮತ್ತು ಯುದ್ಧ
ಜಿಹಾದ್ನ ಅರ್ಥ ಯುದ್ಧವಲ್ಲ. ಬದಲಾಗಿ ಹೋರಾಡುವುದು, ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯ ನಿಷೇಧಿಗಳ ಮಾತನ್ನು ಅನುಸರಿಸಲೇಬೇಡಿರಿ ಮತ್ತು ಈ ಕುರ್ಆನನ್ನು ತೆಗೆದುಕೊಂಡು ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ.” (25:52) ಕುರ್ಆನಿನ ಈ ವಚನದ ತಾತ್ಪರ್ಯ ಯುದ್ಧ ಅಥವಾ ಸಮರವಲ್ಲ. ಬದಲಾಗಿ ಹೋರಾಟ ಹಾಗೂ ಸತತ ಪ್ರಯತ್ನವಾಗಿದೆ. ಇನ್ನೊಂದೆಡೆ ಕುರ್ಆನ್ ಹೀಗೆಂದಿದೆ, “ಕೆಲವರು (ಸತ್ಯವಿಶ್ವಾಸ …
Read More »ಅತೀ ಉದ್ದದ ಕುರ್ಆನ್ ಬರೆಯುವ ಮೂಲಕ ಗಿನ್ನಿಸ್ ದಾಖಲೆಗೆ ಮುಂದಾಗಿದ್ದಾರೆ ದಿಲೀಪ್
ಒಂದು ಕಿಲೋ ಮೀಟರ್ ಉದ್ದದ ಕ್ಯಾನ್ವಾಸ್ನಲ್ಲಿ ಕೈಬರಹದ ಕುರ್ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್ನ ಮುಕ್ಕೊಮ್ ಮೂಲದ ವ್ಯಂಗ್ಯ ಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರ್ಆನ್ ಹಸ್ತ ಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆಗೊಳಿಸಿದರು. “ನಾನು ಅತಿ ಹೆಚ್ಚು ಉದ್ದದ …
Read More »ಅವಿೂನ್, ಸಾದಿಕ್ ಸ್ಲೋಗನ್ ಆಗದಿರಲಿ….ಅವರನ್ನು ನೋಡಿ ಕಣ್ಣು ಮಂಜಾಗಲಿ
ಪ್ರವಾದಿ(ಸ) ತನ್ನ ಯೌವನದಲ್ಲಿ ಅತ್ಯುತ್ತಮ ಸತ್ಯಸಂಧ ವ್ಯಾಪಾರಿಯಾಗಿದ್ದರು. ಮಾರುಕಟ್ಟೆಯಲ್ಲಿ ಜನರು ಅವರ ಸರಕುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆ ಕಾಲದಲ್ಲಿ ಮಕ್ಕಾದ ಮಾರುಕಟ್ಟೆ ಸಂಪೂರ್ಣ ಬಡ್ಡಿಯನ್ನು ಆಧರಿಸಿತ್ತು. ಸಾದಾ ವರ್ತಕರು ಬಂಡವಾಳ ಶಾಹಿಗಳಿಂದ ಬಡ್ಡಿಗೆ ಹಣ ಸಾಲ ಪಡೆದು ತಮ್ಮ ಅಸಲಿ ಲಾಭಕ್ಕಿಂತಲೂ ಹೆಚ್ಚಿಗೆ ಕೆಲವೊಮ್ಮೆ ಬಡ್ಡಿ ಪಾವತಿಸುವ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಆದರೆ ಪ್ರವಾದಿಯವರಿಗೆ(ಸ) ಮಾತ್ರ ಪ್ರವಾದಿತ್ವಕ್ಕಿಂತಲೂ ಮುಂಚೆಯೂ ಬಡ್ಡಿ ಎಂದರೆ ಎಲ್ಲಿಲ್ಲದ ದ್ವೇಷ. ಅವರು ಜನರಿಂದ ಬಡ್ಡಿ ಪಡೆಯದೆ …
Read More »ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥರವರನ್ನು ಜಮಾಅತ್ ರಾಜ್ಯ ತಂಡ ಭೇಟಿ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಗೌರವಾನ್ವಿತ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಸೌಹಾರ್ದ ಭೇಟಿ ಮಾಡಲಾಯಿತು. ಸ್ವಾಮೀಜಿಯವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಧರ್ಮ, ಅಧ್ಯಾತ್ಮ, ಸೌಹಾರ್ದತೆಯ ವಿಷಯದಲ್ಲಿ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಅದನ್ನು ಬಲಪಡಿಸುವ ಬಗ್ಗೆ ಸ್ವಾಮೀಜಿಯವರು ಸಹಮತ ವ್ಯಕ್ತಪಡಿಸಿ ಈ ಭೇಟಿಯ …
Read More »ಬಸವತತ್ವ ಮತ್ತು ಇಸ್ಲಾಮ್ ಪುಸ್ತಕ ಬಿಡುಗಡೆ
ಶ್ರೀ ಸಿದ್ಧ ಬಸವ ಕಬೀರ ಸ್ವಾಮೀಜಿಯವರು ಇಂದು ಎಸ್.ಐ.ಓ ಕರ್ನಾಟಕ ಹೊರ ತಂದ ಬಸವತತ್ವ ಮತ್ತು ಇಸ್ಲಾಮ್ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ನವಾಜ್, ಎಸ್.ಐ.ಓ ಕರ್ನಾಟಕದ ಕಾರ್ಯದರ್ಶಿ ಶಾಫಿ ಅವರು ಉಪಸ್ಥಿತರಿದ್ದರು.
Read More »ಜನರಿಗೆ ಇಸ್ಲಾಮ್ ಇಷ್ಟವಾದದ್ದು ಹೀಗೆ…
ಫ್ರೊಫೆಸರ್ ರಿಚರ್ಡ್ ಹ್ಯಾಮಿಲ್ಟನ್ ಆಂಗ್ಲ ಚಿಂತಕ ರಿಚರ್ಡ್ ಹ್ಯಾಮಿಲ್ಟನ್ರು ತನ್ನ ಜೀವನದ ಹೆಚ್ಚಿನ ಭಾಗವನ್ನು ಜಗತ್ತಿನ ವಿವಿಧ ಧರ್ಮಗಳ ಬಗ್ಗೆ ಅಧ್ಯಯನದಲ್ಲಿ ಕಳೆದಿದ್ದಾರೆ. ಅವರ ಪ್ರಕಾರ ಇಂದು ಅಸ್ತಿತ್ವದಲ್ಲಿರುವ ಧರ್ಮಗಳ ಪೈಕಿ ಇಸ್ಲಾಮ್ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಬಹಳಷ್ಟು ಸಮಸ್ಯೆ ಮತ್ತು ಅಡಚಣೆಗಳ ಹೊರತಾಗಿಯು ಈ ಧರ್ಮವು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಬಹಳಷ್ಟು ಕಡೆಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗುತ್ತದೆ. ಆದರೆ ಮನುಷ್ಯನ ಪ್ರಕೃತಿ ಎಲ್ಲ ಕಾಲಗಳಲ್ಲಿ ಒಂದೇ …
Read More »ಮುಂದಿನ ಜೀವನ
ಇಸ್ಲಾಮ್ ಧರ್ಮವು ಏಕದೇವ ವಿಶ್ವಾಸ, ಪ್ರವಾದಿತ್ವ ಮತ್ತು ಪರಲೋಕ ಎಂಬ ಮೂರು ಮೂಲಭೂತ ವಿಶ್ವಾಸಗಳಲ್ಲಿ ನೆಲೆ ನಿಂತಿದೆ. ಪರಲೋಕದ ಕುರಿತು ಎಲ್ಲ ಧರ್ಮಗಳಲ್ಲಿಯೂ ವಿಭಿನ್ನ ಕಲ್ಪನೆಗಳಿವೆ. ಇಸ್ಲಾಮಿನ ಪರಲೋಕ ಕಲ್ಪನೆಯು ವಿಶಿಷ್ಟವೂ ಸುಸ್ಪಷ್ಟವೂ ಆಗಿದೆ. ಮಾನವ ಜೀವನವು ಮುಖ್ಯವಾಗಿ ಮೂರು ಹಂತಗಳನ್ನು ದಾಟಬೇಕು. ಅದರಲ್ಲಿ ಭೂಲೋಕ ಜೀವನವು ಪ್ರಥಮ ಹಂತ. ಎರಡನೆಯ ಹಂತವು ಮರಣ ಮತ್ತು ಪುನರುತ್ಥಾನ ದಿನದ ಮಧ್ಯಂತರವಾಗಿದ್ದು ಆತ್ಮ ಪ್ರಧಾನ ಜೀವನವಾಗಿದೆ. ಮೂರನೆಯ ಹಂತವು ಒಳಿತು ಕೆಡುಕುಗಳಿಗೆ …
Read More »ಪರಲೋಕ
ನಾನು, ನಾವು, ನೀನು, ನೀವು ಎಂದೆಲ್ಲ ನಾವು ಹೇಳುತ್ತೇವೆ ಅಲ್ಲವೇ? ನಾವು ಹೀಗೆ ಹೇಳುವುದರ ಉದ್ದೇಶವೇನು? ಪ್ರಾಣ ಹೋಗುವುದರೊಂದಿಗೆ ನೀನು, ನಾನು ಇಲ್ಲದಾಗುತ್ತದೆ. ನಮ್ಮ ಶರೀರವೂ ಇಲ್ಲವಾಗುತ್ತದೆ. ಹಾಗಿದ್ದರೆ ಮತ್ತೇನು ನಮ್ಮ ಉದ್ದೇಶ? ಜೀವವು ನಮ್ಮ ಸಂಬೋಧನೆಯ ಉದ್ದೇಶವಾಗಿರಬಹುದೇ? ಹಾಗಿದ್ದರೆ ಜೀವವೆಂದರೇನು? ಜೀವ ಇರುವುದೆಲ್ಲವೂ ಮನುಷ್ಯರಲ್ಲವಲ್ಲ. ಸಂತೋಷ, ದುಃಖ, ಪ್ರೀತಿ, ದ್ವೇಷದಂತಹ ಭಾವನೆಗಳನ್ನು ಜೀವಿಸಿರುವ ನಾವು ಅನುಭವಿಸುತ್ತೇವೆ. ಪ್ರೀತಿಸುವುದು, ದ್ವೇಷಿಸುವುದು, ಸಂತೋಷಪಡುವುದು, ದುಃಖಿಸುವುದು ನಮ್ಮ ಜೀವವೇ. ಸಸ್ಯಗಳಾದಿ ಜೀವವಿರುವ ಎಲ್ಲವೂ …
Read More »
IslamKannada News Portal