Home / ಪ್ರಶ್ನೋತ್ತರ / ಕುರ್‌ಆನ್‌ನಲ್ಲಿ ಉಲ್ಲೇಖವಾಗಿರುವ ಈ ಸಮಾನಾಂಶಗಳು ನಿಮಗೆ ಗೊತ್ತೇ?

ಕುರ್‌ಆನ್‌ನಲ್ಲಿ ಉಲ್ಲೇಖವಾಗಿರುವ ಈ ಸಮಾನಾಂಶಗಳು ನಿಮಗೆ ಗೊತ್ತೇ?

  • ಅಬೂ ಕುತುಬ್

ಡಾ. ತಾರಿಖ್ ಅಲ್ ಸ್ವಿಡಾನ್‌ರವರು ಪವಿತ್ರ ಕುರ್‌ಆನ್‌ನಲ್ಲಿರುವ ಕೆಲವು ಅದ್ಭುತವಾದ ವಿಷಯವನ್ನು ತಮ್ಮ ಅಧ್ಯಯನದ ಮೂಲಕ ಕಂಡು ಕೊಂಡಿದ್ದಾರೆ. ಆರನೇ ಶತಮಾನದ ಅರೇಬಿಯಾದ ಮರುಭೂಮಿಯಲ್ಲಿ ದೇವಗ್ರಂಥ ಎಂದು ಸಾರುವ ಈ ಗ್ರಂಥದಲ್ಲಿ ಬಂದ ಸಮಾನವಾದ ಸಂಖ್ಯೆಗಳನ್ನು ಅವರು ತೋರಿಸಿದ್ದಾರೆ. ಉದಾಹರಣೆಗೆ ಒಂದು ವಿಷಯವು 11 ಬಾರಿ ಉಲ್ಲೇಖ ಆಗಿದ್ದರೆ ಅದರ ವಿರುದ್ಧ ಪದವೂ ಅಷ್ಟೇ ಬಾರಿ ಉಲ್ಲೇಖವಾಗಿದೆ.

ಕುರ್‌ಆನ್‌ನಲ್ಲಿ ಪುರುಷ ಎಂಬ ಪದವು 24 ಬಾರಿ ಇದ್ದರೆ, ಮಹಿಳೆ ಎಂಬ ಪದವೂ 24 ಬಾರಿ ಬರುತ್ತದೆ. ಇದು ವ್ಯಾಕರಣದ ದೃಷ್ಟಿಯಿಂದಲೂ ಈ ನುಡಿಗಟ್ಟು ಸರಿಯಾಗಿದ್ದು, ಗಣಿತದ ಪ್ರಕಾರವೂ ನಿಜವಾಗಿದೆ.

ಹಲವು ಶ್ಲೋಕಗಳ ಹೆಚ್ಚಿನ ವಿಶ್ಲೇಷಣೆಯ ನಂತರ, ಇದು ಇಡೀ ಕುರ್‌ಆನ್‌ನಲ್ಲಿ ಕಂಡು ಬಂದ ಸತ್ಯವಾಗಿದೆ.

ಬೆರಗುಗೊಳಿಸುವ ಅಂಶಗಳು
ಅಲ್-ದುನ್ಯಾ (ಈ ಪ್ರಪಂಚ) 115, ಅಲ್-ಆಖಿರಾ (ಪರಲೋಕ) 115, ಅಲ್-ಮಲಾಯಿಕ (ದೇವದೂತರು) 88, ಅಲ್-ಶಯಾತೀನ್ (ಸೈತಾನ) 88, ಅಲ್-ಹಯಾತ್ (ಜೀವನ) 145, ಅಲ್-ಮೌತ್ (ಮರಣ) 145, ಅಲ್-ರಜುಲ್ (ಪುರುಷ) 24, ಅಲ್-ಮರ್ಹಾ (ಮಹಿಳೆಯರು) 24, ಪ್ರಯೋಜನ 50, ಭ್ರಷ್ಟ 50, ಜನರು 50, ಸಂದೇಶವಾಹಕರು 50, ಇಬ್ಲೀಸ್ (ದೆವ್ವಗಳ ನಾಯಕ) 11, ಇಬ್ಲೀಸ್‌ನಿಂದ ಆಶ್ರಯ ಪಡೆಯಿರಿ 11 ಬಾರಿ ಬಂದಿದೆ.

ಮುಸೀಬಾ (ವಿಪತ್ತು) 75, ಕೃತಜ್ಞತೆ 75, ಖರ್ಚು (ಸದಾಖಾ) 73, ತೃಪ್ತಿ 73, ದಾರಿ ತಪ್ಪಿಸುವ ಜನರು 17, ಸತ್ತವರು 17, ಮ್ಯಾಜಿಕ್ 60, ಫಿತ್ನಾ (ಕ್ಷೋಭೆ) 60, ಝಕಾತ್ (ಮುಸ್ಲಿಮರು ಬಡವರಿಗೆ ಪಾವತಿಸುವ ತೆರಿಗೆ) 32, ಬರಕ (ಸಂಪತ್ತಿನ ಹೆಚ್ಚಳ ಅಥವಾ ಅನುಗ್ರಹ) 32, ಮನಸ್ಸು 49, ನೂರ್(ಪ್ರಕಾಶ) 49, ನಾಲಿಗೆ 25, ಧರ್ಮೋಪದೇಶ 25, ಸಾರ್ವಜನಿಕವಾಗಿ ಮಾತನಾಡುವುದು 18, ಪ್ರಚಾರ 18, ಸಂಕಷ್ಟ 114, ತಾಳ್ಮೆ 114, ಮುಹಮ್ಮದ್ 4, ಶರೀಅ (ಮುಹಮ್ಮದ್ ಅವರ ಬೋಧಿಸಿದ ತತ್ವ) 4, ಅಲ್-ಶಹರ್ (ತಿಂಗಳು) 12 ಬಾರಿ ಬಂದಿದೆ. ಅಲ್-ಯೌಮ್ (ದಿನ) 365 ಬಾರಿ ಬಂದಿದೆ. ಅಲ್-ಬಹಾರ್ (ಸಮುದ್ರ) 32, ಅಲ್-ಬರ್ (ಭೂಮಿ) 13.

ನಾವು “ಸಮುದ್ರ” ಮತ್ತು “ಭೂಮಿ” ಎರಡರ ಒಟ್ಟು ಪದಗಳನ್ನು ಸೇರಿಸಿದರೆ ನಮಗೆ 45 ಸಿಗುತ್ತದೆ. ಈಗ ನಾವು ಸರಳ ಲೆಕ್ಕಾಚಾರವನ್ನು ಮಾಡಿದರೆ:
32/45 * 100% = 71.11111111%
13/45 * 100% = 28.88888888%
ಜಗತ್ತಿನಲ್ಲಿ ನೀರು (ಸಮುದ್ರ) ಮತ್ತು ಭೂಮಿಯ ಶೇಕಡಾವಾರು ಎಷ್ಟು ಎಂಬುದು ನಮಗೆ ತಿಳಿದು ಬಂದಿದೆ. ಇದು ಕುರ್‌ಆನ್ ನಲ್ಲಿರುವ ಮತ್ತೊಂದು ಪವಾಡ.

ಕುರ್‌ಆನ್‌ನ ಪವಾಡಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ಈ ಪವಿತ್ರ ಗ್ರಂಥದ ಜ್ಞಾನವನ್ನು ಮಾನವಕುಲವು ಸಂಪೂರ್ಣವಾಗಿ ತೆಗೆದುಕೊಳ್ಳುವ ಸಮಯ ಎಂದಿಗೂ ಮುಗಿಯುವುದಿಲ್ಲ. ಇದು ಎಲ್ಲಾ ಮಾನವಕುಲಕ್ಕೆ ಪವಾಡ, ದೇವರ ಸಂದೇಶ. ಸೃಷ್ಟಿಕರ್ತನ ಮಾತುಗಳಿಗೆ ಸರಿಸಾಟಿಯಾದ ಪದಗಳು, ವಾಕ್ಯಗಳು ಇಲ್ಲ. ಇಹಲೋಕ ಮತ್ತು ಪರಲೋಕದಲ್ಲಿ ಯಶಸ್ವಿಯಾಗಲು ಬಯಸುವವರಿಗೆ ಮಾರ್ಗದರ್ಶನ ನೀಡುವ ನಿಧಿ ಇದು. ಇದು ಈ ಹಿಂದೆ ಬಂದ ಯಾವುದೇ ಪೂರ್ವ ದೇವಗ್ರಂಥವನ್ನು, ದೇವ ಪ್ರವಾದಿಗಳನ್ನು ನಿರಾಕರಿಸುವುದಿಲ್ಲ. ಬದಲಾಗಿ ಅದನ್ನು ದೃಢೀಕರಿಸುತ್ತದೆ.

ದೈವಿಕ ಗ್ರಂಥ ಮನುಷ್ಯನ ಜೀವನ ಮತ್ತು ಮರಣದ ವಾಸ್ತವಿಕತೆ, ಉದ್ದೇಶದ ಕುರಿತು ಮಾರ್ಗದರ್ಶನ ಮಾಡುವ ಗ್ರಂಥ ಆಗಿದೆ. ಅದು ಕುರ್‌ಆನ್ ಸಹಿತ ಎಲ್ಲಾ ಪೂರ್ವಗ್ರಂಥಗಳ ಉದ್ದೇಶವಾಗಿತ್ತು. ಈ ಗ್ರಂಥ ಯಾವುದೇ ವಿಜ್ಞಾನ, ಆಧುನಿಕತೆಗೆ ವಿರುದ್ಧ ಇಲ್ಲ. ಅದು ಅದರ ವಿಷಯವೂ ಅಲ್ಲ. ಕೆಲವೆಡೆ ಮನುಷ್ಯನಿಗೆ ಮಾರ್ಗದರ್ಶನ ಮಾಡುವ ಸಮಯದಲ್ಲಿ ಅದು ಕೆಲವೆಡೆ ಭೂಮಿ, ಆಕಾಶ, ಪ್ರಕೃತಿಯ ವೈಶಿಷ್ಟ್ಯತೆಯ ಬಗ್ಗೆ ಸೌಂದರ್ಯ ಪೂರಕವಾಗಿ metphorical ಆಗಿ ಪ್ರಸ್ತಾಪ ಮಾಡಿದೆ. ಅದರ ಅನ್ವೇಷಣೆ ಅದರ ವೈಜ್ಞಾನಿಕ ಮಜಲುಗಳನ್ನು ಹುಡುಕುವುದು ವಿಜ್ಞಾನದ ವಿಷಯವಾಗಿದೆ. ಅದರ ಅನ್ವೇಷಣೆ ಕಾಲಕಾಲಕ್ಕೆ ಮಾನವ ಮಾಡುತ್ತಾನೆ. ಅದರ ಪ್ರಯೋಜನ ಪಡೆಯಲಾಗುತ್ತದೆ. ಅದಕ್ಕೆ ಕುರ್‌ಆನ್ ಸ್ವತಃ ಉತ್ತೇಜನ ನೀಡುತ್ತದೆ.

ನಿಜವಾಗಿ ಕುರ್‌ಆನ್ ಎಂಬುದು, ಸಮಾಜ, ವಿಜ್ಞಾನ, ಗಣಿತ, ಭಾಷೆ ಕಲಿಸಲು ಬಂದ ಗ್ರಂಥ ಅಲ್ಲ. ಅದು ಕಲಿಕೆಯಲ್ಲಿ ಪಾಲಿಸಬೇಕಾದ ಮೌಲ್ಯ ಮಾರ್ಗದರ್ಶನ ಮಾಡಲು ಬಂದಿದೆ. ಕುರ್‌ಆನ್ ದೈವಿಕ ಗ್ರಂಥ ಎಂಬುದನ್ನು ಸಾಬೀತುಪಡಿಸುವ ಕೆಲಸ ಮನುಷ್ಯರದ್ದಲ್ಲ. ಅದು ಕುರ್‌ಆನಿನ ಕೆಲಸವಾಗಿದೆ. ದೈವಿಕ ಗ್ರಂಥ ಎಂದು ಮನವರಿಕೆ ಆಗುವ ಮನುಷ್ಯ ವಿಜ್ಞಾನಿಯಾದರೂ, ಅವಿಜ್ಞಾನಿಯಾದರೂ ಆತ ವಿಶ್ವಾಸ ಹೊಂದುತ್ತಾನೆ. ಕನ್ವಿನ್ಸ್ ಆಗದಿದ್ದರೆ ಲಾ ಇಕ್ರಾಹ್ ಫಿದ್ದೀನ್ – ಇದರಲ್ಲಿ ಯಾವುದೇ ಬಲವಂತ ಒತ್ತಾಯ ಇಲ್ಲ ಎಂದು ಸ್ವತಃ ಕುರ್‌ಆನ್ ಪ್ರತಿಪಾದಿಸುತ್ತದೆ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *