ಈ ಬಾರಿಯ ಹಜ್ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ಅತ್ಯುತ್ತಮ ಸೌಲಭ್ಯವನ್ನು ಒದಗಿಸುತ್ತಿದೆ. ಸೌದಿ ಸಿವಿಲ್ ಎವಿಯೇಷನ್ ನ ಅಧೀನದಲ್ಲಿ 30 ಲಕ್ಷ ವಿಮಾನ ಸೀಟುಗಳನ್ನು ಹಾಜಿಗಳಿಗಾಗಿ ಕಾದಿರಿಸಲಾಗಿದೆ. ಆರು ವಿಮಾನ ನಿಲ್ದಾಣಗಳ ಮೂಲಕ ಹಾಜಿಗಳು ಮಕ್ಕಾ ಪ್ರವೇಶಿಸಲಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಹಜ್ ಯಾತ್ರಾರ್ಥಿಗಳನ್ನು ಸ್ವಾಗತಿಸುವುದಕ್ಕಾಗಿ 18000 ಸಿಬ್ಬಂದಿಗಳು 24 ಗಂಟೆ ಕೆಲಸ ಮಾಡಲಿದ್ದಾರೆ.
ಸೌದಿ ಏರ್ಲೆನ್ಸ್ 158 ವಿಮಾನಗಳನ್ನು ಉಪಯೋಗಿಸಿ 2000 ಸರ್ವಿಸ್ ಗಳನ್ನು ನಡೆಸಲಿದೆ. 10 ಲಕ್ಷ ವಿದೇಶಿ ಯಾತ್ರಾರ್ಥಿಗಳನ್ನು ಹಜ್ ನೆಡೆಗೆ ತಲುಪಿಸಲಿದೆ. ಫ್ಲೈ ನಾಸ್ 294 ಸರ್ವಿಸ್ ಗಳೊಂದಿಗೆ 1,20,000 ಯಾತ್ರಾರ್ಥಿಗಳನ್ನು ಕರೆತರಲಿದೆ. ಹಾಜಿಗಳಿಗೆ ಪ್ರಯಾಣಿಸಲು 25000 ಬಸ್ಸುಗಳು 9000 ಟ್ಯಾಕ್ಸಿಗಳನ್ನು ಸಿದ್ಧಗೊಳಿಸಲಾಗಿದೆ ವಿಮಾನ ಮತ್ತು ಸಮುದ್ರದ ಮೂಲಕ ಮಕ್ಕಾಕ್ಕೆ ತಲುಪುವ ಹಜ್ ಯಾತ್ರಾರ್ಥಿಗಳಿಗೆ ಬೇಕಾದ ಸಕಲ ಸೌಲಭ್ಯವನ್ನು ಸಜ್ಜೀಕರಿಸಲಾಗಿದೆ.
IslamKannada News Portal
