ಅಬುದಾಬಿಯ ಶೇಕ್ ಝಾಯಿದ್ ಗ್ರಾಂಡ್ ಮಸ್ಜಿದನ್ನು ನೋಡಲು ಬರುವವರಲ್ಲಿ ಅತ್ಯಧಿಕ ಮಂದಿ ಭಾರತೀಯರಾಗಿದ್ದಾರೆ ಎಂಬ ವಿವರ ಬಿಡುಗಡೆಯಾಗಿದೆ
ಕಳೆದ ಆರು ತಿಂಗಳಲ್ಲಿ 33 ಲಕ್ಷ ಮಂದಿ ಮಸೀದಿಗೆ ಭೇಟಿ ನೀಡಿದ್ದು ಇವರಲ್ಲಿ 23 ಲಕ್ಷ ಮಂದಿ ಪ್ರವಾಸಿಗಳಾಗಿ ಭೇಟಿ ನೀಡಿದ್ದಾರೆ. ಜನವರಿಯಿಂದ ಜೂನ್ ವರೆಗೆ 9,14,000 ಮಂದಿ ಈ ಮಸೀದಿಗೆ ಪ್ರಾರ್ಥನೆಗಾಗಿ ಭೇಟಿ ನೀಡಿದ್ದಾರೆ.
ಈ ಮಸೀದಿಯನ್ನು ಆಕರ್ಷಕವಾಗಿ ಕಟ್ಟಲಾಗಿದ್ದು ಅದನ್ನು ವೀಕ್ಷಿಸುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ರಷ್ಯಾ ಮತ್ತು ಲಂಡನ್ ನ ಪ್ರವಾಸಿಗರು ಸೇರಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ಮಂದಿ ಇಲ್ಲಿ ಆರಾಧನೆಗಾಗಿ ಭೇಟಿ ನೀಡಿದ್ದಾರೆ. ಈ ಮಧ್ಯೆ ಒಂದೇ ದಿನ 63919 ಮಂದಿ ಆರಾಧನೆಗಾಗಿ ಇಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ
IslamKannada News Portal
