ಶಾಂತಿ ಪ್ರಕಾಶನದಿಂದ ನೂತನ ಕೃತಿ
ಶಾಂತಿ ಪ್ರಕಾಶನದ 269ನೇ ಪುಸ್ತಕ ‘ಮಾರ್ಗದರ್ಶಿ-ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು’ ಗ್ರಂಥವನ್ನು ಜಮಾಅತ್ ರಾಷ್ಟ್ರಾಧ್ಯಕ್ಷರಾದ ಸೈಯ್ಯದ್ ಸಾದಾತುಲ್ಲಾ ಹುಸೈನಿ ಬಿಡುಗಡೆಗೊಳಿಸಿದರು.
ಮೂಲ ಮಲಯಾಳಂದಲ್ಲಿರುವ ವಝಿವೆಲಿಚ್ಚಂ ಬಹು ಪ್ರಸಿದ್ದಿ ಪುಸ್ತಕವಾಗಿದೆ. ಇದರ ಲೇಖಕ ಜಅ‌್‌ಫರ್ ಎಳಂಬಿಲಕ್ಕೋಡ್ ಆಗಿದ್ದು, ಕನ್ನಡಕ್ಕೆ ಸಬೀಹಾ ಫಾತಿಮರವರು ಅನುವಾದಿಸಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ, ಕಾರ್ಯದರ್ಶಿಗಳಾದ ಮೌಲಾನಾ ವಲೀಯುಲ್ಲಾಹ್ ಸಯೀದಿ ಫಲಾಹಿ, ಮೌಲಾನಾ ಇಕ್ಬಾಲ್ ಮುಲ್ಲಾ, ಜಮಾಅತ್ ರಾಜ್ಯಾಧ್ಯಕ್ಷ ಮತ್ತು ಶಾಂತಿ ಪ್ರಕಾಶನ ಅಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ವ್ಯವಸ್ಥಾಪಕರಾದ ಮುಹಮ್ಮದ್ ಕುಂಞ, ಇನ್ನಿತರರು ಉಪಸ್ಥಿತರಿದ್ದರು.