Home / ಪ್ರಶ್ನೋತ್ತರ / ಗೋರಿ ಪೂಜೆ’ ಮತ್ತು ಇಸ್ಲಾಮ್?

ಗೋರಿ ಪೂಜೆ’ ಮತ್ತು ಇಸ್ಲಾಮ್?

‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, ಪರಲೋಕ ಜೀವನದ ಬಗ್ಗೆ ಪ್ರಜ್ಞಾವಂತನಾಗುವುದು ಮತ್ತು ತನ್ನ ಮೃತ ಬಂಧುಗಳ ಮೋಕ್ಷಕ್ಕಾಗಿ ಪ್ರಾರ್ಥಿಸುವುದು ಸಮಾಧಿ ಸಂದರ್ಶನದ ಉದ್ದೇಶ. ಇದು ಪ್ರವಾದಿ ಚರ್ಯೆಯಾಗಿದ್ದು ಪುಣ್ಯ ಕಾರ್ಯವಾಗಿದೆ. ಆದರೆ ಗೋರಿಗಳನ್ನು ಎತ್ತರಿಸಿ ಕಟ್ಟುವ, ಅವುಗಳನ್ನು ಅಲಂಕರಿಸುವ, ಅವುಗಳ ಮೇಲೆ ಬಟ್ಟೆ ಹೊದಿಸುವ, ದೀಪ ಬೆಳಗಿಸುವ ಹಾಗೂ ಅಗರಬತ್ತಿಗಳನ್ನು ಹೊತ್ತಿಸುವ ಸಂಪ್ರದಾಯಗಳು ಪ್ರವಾದಿಚರ್ಯೆಗೆ ವಿರುದ್ಧವಾಗಿವೆ. ಗೋರಿ ಸಂದರ್ಶನವನ್ನು ‘ಗೋರಿ ಪೂಜೆ’ಯಾಗಿ ಮಾರ್ಪಡಿಸಬಹುದಾದ ಇಂತಹ ಸಂಪ್ರದಾಯಗಳಿಗೆ ಇಸ್ಲಾಮಿನ ಮೂಲಗ್ರಂಥಗಳಾದ ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಯಾವ ಆಧಾರವೂ ಇಲ್ಲ. ಹಾಗೆಯೇ ಸಂತರ ಸಮಾಧಿಗಳಲ್ಲಿ ನಡೆಸಲ್ಪಡುವ ‘ಉರೂಸ್’ ಎಂಬ ಉತ್ಸವಗಳಿಗೆ ಇಸ್ಲಾಮ್ ಧರ್ಮದೊಂದಿಗೆ ಯಾವ ಸಂಬಂಧವೂ ಇಲ್ಲ. ಇದು ಇಸ್ಲಾಮಿನೊಳಗೆ ನುಸುಳಿಕೊಂಡಿರುವ ಅನ್ಯಧರ್ಮೀಯ ಸಂಪ್ರದಾಯಗಳಾಗಿವೆ. ಇನ್ನು ಸಮಾಧಿಸ್ಥರಾದ ಮಹಾತ್ಮರನ್ನು ಕರೆದು ಪ್ರಾರ್ಥಿಸುವುದಾಗಲೀ ಗೋರಿಗಳಿಗೆ ಸಾಷ್ಟಾಂಗವೆರಗುವುದಾಗಲೀ ಇಸ್ಲಾಮ್ ಧರ್ಮದ ಏಕದೇವ ವಿಶ್ವಾಸಕ್ಕೆ ತೀರಾ ವಿರುದ್ಧವಾಗಿದ್ದ ನಿಷಿದ್ಧ ಕಾರ್ಯವೆಂಬುದನ್ನು ಸ್ವಯಂ ಉರೂಸ್ ಸಂಪ್ರದಾಯದ ಬೆಂಬಲಿಗರೂ ಒಪ್ಪುತ್ತಾರೆ.

SHARE THIS POST VIA

About admin

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *