Home / ಪ್ರಶ್ನೋತ್ತರ / ಲೈಂಗಿಕ ಅತೃಪ್ತಿಯ ಮಹಿಳೆಯರಿಗೆ ಬಹುಪತಿತ್ವದ ಅವಕಾಶ ನೀಡಬಹುದಲ್ಲವೇ?

ಲೈಂಗಿಕ ಅತೃಪ್ತಿಯ ಮಹಿಳೆಯರಿಗೆ ಬಹುಪತಿತ್ವದ ಅವಕಾಶ ನೀಡಬಹುದಲ್ಲವೇ?

ಇಸ್ಲಾಮಿನಲ್ಲಿ ಪುರುಷರಿಗೆ ಬಹುಪತ್ನಿತ್ವ ಅವಕಾಶ ನೀಡಿದಂತೆ ಲೈಂಗಿಕವಾಗಿ ಅಸಂತೃಪ್ತಿ ಹೊಂದಿರುವ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಪತಿಯನ್ನು ಹೊಂದಲು ಇಸ್ಲಾಮ್‌ನಲ್ಲಿ ಯಾಕೆ ಅವಕಾಶವಿಲ್ಲ ಎಂದು ಇಸ್ಲಾಮನ್ನು ಮಹಿಳಾ ಶೋಷಣೆಯ ಧರ್ಮ ಎಂದು ಎತ್ತಿ  ಕಟ್ಟುವವರು ಆರೋಪಿಸಿ ಪ್ರಶ್ನಿಸುತ್ತಾರೆ. ಬಹುಪತ್ನಿತ್ವಕ್ಕೆ ಅವ ಕಾಶ ನೀಡಿದ ಇಸ್ಲಾಮ್ ಬಹುಪತಿತ್ವಕ್ಕೆ ಯಾಕೆ ಅವಕಾಶ ನೀಡಿಲ್ಲ ಎಂಬುದು  ಅವರ ಪ್ರಶ್ನೆಯಾಗಿದೆ.

ಬಹುಪತ್ನಿತ್ವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಆದರೆ ಬಹುಪತಿತ್ವ ಒಂದು ಸಮಸ್ಯೆ ಮಾತ್ರವಾಗಿದೆ. ಬಹುಪತ್ನಿತ್ವ ಹೊಂದಲು  ಪುರುಷರನ್ನು ಪ್ರೇರೇಪಿಸುವ ಸಂದರ್ಭವು ಮಹಿಳೆಯರಿಗೂ ಉದ್ಭವಿಸಿದರೆ ಅದಕ್ಕಿರುವ ಪರಿಹಾರವೇನು? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಇಂತಹವರು ಇಸ್ಲಾಮಿನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಸರಿಯಾಗಿ ಅವಲೋಕಿಸಿದರೆ ಈ ಸಮಸ್ಯೆಗೆ ಪರಿಹಾರ ಬಹಳ  ಸುಲಭದಲ್ಲಿ ಲಭ್ಯವಾಗುತ್ತದೆ.

1. ವೈಯಕ್ತಿಕ ಸಮಸ್ಯೆಗಳು:
ಮಹಿಳೆಯರ ಲೈಂಗಿಕ ಸಂತೃಪ್ತಿಗಾಗಿ ಒಂದಕ್ಕಿಂತ ಹೆಚ್ಚು ಪುರುಷರನ್ನು ಹೊಂದುವ ಸಂದರ್ಭಗಳು ಇಲ್ಲವೆಂದೇ ಹೇಳಬಹುದು. ಆರೋಗ್ಯವಂತನಾದ ಪುರುಷನಿಂದ ಓರ್ವ ಮಹಿಳೆಯನ್ನು ಸಂಪೂರ್ಣವಾಗಿ ಲೈಂಗಿಕವಾಗಿ ಸಂತೃಪ್ತಿಪಡಿಸಲು ಸಾಧ್ಯ. ಮಹಿಳೆಯ  ಆರ್ತವ ಕಾಲ, ಹೆರಿಗೆ ಮುಂತಾದ ಸಂದರ್ಭಗಳಲ್ಲಿ ಲೈಂಗಿಕಾಸಕ್ತನಾದ ಪುರುಷನು ಸಂಕಷ್ಟ ಅನುಭವಿಸುವಂತೆ ಮಹಿಳೆಯ ಜೊತೆ  ಸಂಪರ್ಕಕ್ಕೆ ತಡೆಯಾಗುವಂತಹ ಯಾವ ಸ್ಥಿತಿಯೂ ಸಾಮಾನ್ಯವಾಗಿ ಮಹಿಳೆಗಿಲ್ಲ. ಆದ್ದರಿಂದ ಮಹಿಳೆಯ ಲೈಂಗಿಕ ಸಂತೃಪ್ತಿಗಾಗಿ ಒಂದಕ್ಕಿಂತ ಹೆಚ್ಚು ಪುರುಷರನ್ನು ಹೊಂದುವ ಸಂದರ್ಭ ಮಹಿಳೆಗೆ ಉದ್ಭವಿಸುವುದಿಲ್ಲ.

ಪುರುಷರಲ್ಲಿ ಲೈಂಗಿಕ ಸಂಪರ್ಕದ ಆಸಕ್ತಿ ಇಲ್ಲದಿರುವುದು, ಷಂಡತನ ಮುಂತಾದವುಗಳು ಇತರ ಸಮಸ್ಯೆಗಳು. ಪುರುಷನ ಷಂಡತನಕ್ಕೆ  ಬೀಜ ಇಲ್ಲದಿರುವುದು, ಬೀಜದ ಚಲನೆಯ ಶಕ್ತಿಯಿಲ್ಲದಿರುವುದು, ವಿರ‍್ಯದ ಕೊರತೆ, ಉತ್ಪಾದನೆಯ ಗ್ರಂಥಿಗಳಲ್ಲಿನ ಕೆಲವು ಲೋಪದೋಷಗಳು ಮುಂತಾದವುಗಳು ಕಾರಣ. ಇವುಗಳೆಲ್ಲಾ ನಿರಂತರವಾಗಿ ಸ್ಥಿರವಾಗಿ ಇರುವ ಸಮಸ್ಯೆಗಳಲ್ಲ. ಸರಿಯಾದ ರೀತಿಯ ಚಿಕಿತ್ಸೆ ನಡೆಸಿದರೆ ಪರಿಹಾರ ಕಂಡುಕೊಳ್ಳಬಹುದು. ಪುರುಷನಲ್ಲಿ ಲೈಂಗಿಕ ಶಕ್ತಿಯೇ ಇಲ್ಲದಿದ್ದರೆ ಅಂದರೆ ಷಂಡತನ ಹೊಂದಿದ್ದರೆ ಆತನಿಂದ ವಿಚ್ಚೇದನ ಪಡೆದುಕೊಳ್ಳಬಹುದು. ಷಂಡತನ ಹೊಂದಿದವನಲ್ಲಿ ಒಟ್ಟಿಗೇ ಬಾಳಬೇಕೆಂದು ಇಸ್ಲಾಮ್ ನಿರ್ಭಂದಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ವಿವಾಹ ವಿಚ್ಚೇದನ ಪರಿಹಾರವೇ ಹೊರತು ಬಹುಪತಿತ್ವ ಪರಿಹಾರವಲ್ಲ.

2. ಸಾಮಾಜಿಕ ಸಮಸ್ಯೆಗಳು:
ಪುರುಷರ ಸಂಖ್ಯೆಯು ಮಹಿಳೆಯರಿಗಿಂತ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಹುಪತಿತ್ವ ಅನುಮತಿಸಬಾರದೇ ಎಂದು ಕೇಳುವವರಿದ್ದಾರೆ.  ಸಾಮಾನ್ಯವಾಗಿ ಇಂತಹ ಒಂದು ಸ್ಥಿತಿ ಬರುವುದಿಲ್ಲ. ಸಾಮಾನ್ಯವಾಗಿ ಹೆರಿಗೆಯ ಲೆಕ್ಕಾಚಾರ ನೋಡಿದರೆ  ಪುರುಷರ ಸಂಖ್ಯೆ ವ ರ್ಧಿಸುವಂತಹ ಸಾಧ್ಯತೆಯೇ ಉದ್ಭವಿಸಿಲ್ಲ. ಯುದ್ಧ ಮತ್ತಿತರ ಸಂದರ್ಭದಲ್ಲಿ ಮಹಿಳೆಯರು ಕೊಲ್ಲಲ್ಪಡುವುದಿಲ್ಲ. ಇಲ್ಲೆಲ್ಲಾ ಪುರುಷರು ಸಾವಿಗೀಡಾಗುತ್ತಾರೆ. ಆದ್ದರಿಂದ ಹೆಚ್ಚಾಗಿ ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಉಂಟಾಗುವ ಸ್ಥಿತಿಯೂ ಉದ್ಭವಿಸದು.  ಹೀಗಿರುವಾಗ ಸ್ತ್ರೀ-ಪುರುಷರ ಅನುಪಾತದಲ್ಲಿ ಪುರುಷರ ಸಂಖ್ಯೆ ವರ್ಧಿಸಬಹುದೆಂಬುದು ಊಹೆಯಾಗಿದೆ. ಅಂತಹದ್ದೊಂದು ಸಮಸ್ಯೆ ಉಂಟಾಗದು.  ಆದ್ದರಿಂದ ಪರಿಹಾರವಾಗಿ ಬಹುಪತಿತ್ವ ಎಂಬುದನ್ನು ಉಲ್ಲೇಖಿಸುವುದು ವ್ಯರ್ಥ ಪ್ರಯತ್ನವಾಗಿದೆ.

ಭಾರತದ ಇತ್ತೀಚಿನ ಜನಸಂಖ್ಯೆ ಗಮನಿಸಿದಾಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆಯೆಂಬುದನ್ನು ಈ ವಾದದ ವಿರುದ್ದ ಮಂಡಿಸಬಹುದು. ಅದಕ್ಕಿರುವ ಕಾರಣವೇನೆಂದರೆ  ಭ್ರೂಣ ಹತ್ಯೆಯಾಗಿದೆ. ಗರ್ಭಸ್ಥರಾದ ಕೂಡಲೇ ಲಿಂಗ ನಿರ್ಣಯ ಮಾಡಿ ಹೆಣ್ಣಾದರೆ ತಕ್ಷಣ ಗರ್ಭದಲ್ಲಿಯೇ ನಾಶ ಪಡಿಸುವ ಕ್ರೂರ ಪದ್ಧತಿಯ ಫಲವಿದು. ಹೆಣ್ಮಕ್ಕಳನ್ನು ಕೊಲ್ಲುವ ಪುರಾತನ ಸಂಪ್ರದಾಯದ  ಪುನರಾವರ್ತನೆಯಾಗಿದೆ ಇದು. ಇದನ್ನು ಕುರ್‌ಆನ್ ಸ್ಪಷ್ಟವಾಗಿ ವಿಮರ್ಶಿಸಿದೆ. 16; 59, 6: 137, 17: 31, 81:9 ಈ ಸೂಕ್ತದಲ್ಲಿ ಇವನ್ನು  ಗಮನಿಸಬಹುದು.

“ಈ ಅಶುಭ ವಾರ್ತೆಯ ಬಳಿಕ ಯಾರಿಗೂ ಮುಖ ತೋರಿಸಲಾಗದೆ ಜನರಿಂದ ತಲೆ ಮರೆಸಿಕೊಳ್ಳುತ್ತಾನೆ. ಈ ಅಪಮಾನದೊಂದಿಗೆ  ಮಗುವನ್ನಿರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ. ಇವರು ಅಲ್ಲಾಹನ ಬಗ್ಗೆ ಎಂತಹ ಕೆಟ್ಟ  ನಿರ್ಣಯ ಕೈಗೊಳ್ಳುತ್ತಾರೆಂದು ನೋಡಿರಿ.” (ಅನ್ನಹ್ಲ್: 59)

“ನಿಮ್ಮ ಮಕ್ಕಳನ್ನು ಬಡತನದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುವೆವು, ನಿಮಗೂ ನೀಡುವೆವು. ವಾಸ್ತವದಲ್ಲಿ  ಅವರ ವಧೆಯು ಒಂದು ಘೋರ ಅಪರಾಧವಾಗಿದೆ.” (ಬನೀ ಇಸ್ರಾಈಲ್: 31)

“ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತೆಂದು.” (ಅತ್ತಕ್ವೀರ್: 9) ಹೀಗೆ ಕುರ್‌ಆನ್ ಹೇಳುತ್ತಾ ಹೋಗುತ್ತದೆ.

ಆದ್ದರಿಂದ ಇಸ್ಲಾಮೀ ಸಮಾಜದಲ್ಲಿ ಯಾವುದೇ ಹೆಣ್ಣು ಭ್ರೂಣ ಹತ್ಯೆ ಅಥವಾ ಗಂಡು ಭ್ರೂಣ ಹತ್ಯೆ ನಡೆಯುವುದಿಲ್ಲ. ಸಹಜವಾಗಿ ಹೆರಿಗೆ ನಡೆಯುತ್ತಿರುವುದನ್ನು ಗಮನಿಸಿದರೆ ಹೆಣ್ಮಕ್ಕಳ ಸಂಖ್ಯೆಯೇ ಹೆಚ್ಚು ಕಂಡು ಬರುತ್ತದೆ. ಪ್ರಕೃತಿಯೂ ಹಾಗೆಯೇ ಇದೆ. ಇನ್ನು  ಒಂದು ದೇಶದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆಯಾಗಿದ್ದಲ್ಲಿ ಅಲ್ಲಿ ಬದುಕುವ ಪುರುಷರು ಇತರ ಪ್ರದೇಶಗಳಿಗೆ  ಹೋಗಿ ಮದುವೆಯಾಗಬಹುದು. ಇತರ ಪ್ರದೇಶಗಳಿಗೆ ಹೋಗಿ ಮದುವೆಯಾಗುವುದು ಪುರುಷರಂತೆ ಮಹಿಳೆಯರಿಗೆ ಕಷ್ಟ ಸಾಧ್ಯ. ಅದು ಪ್ರಾಯೋಗಿಕವೂ ಅಲ್ಲ. ಪುರುಷರು ಹಾಗಲ್ಲ. ನಾವು ಬದುಕುವ ಪ್ರದೇಶದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದ್ದರೆ ಹೊರ  ಪ್ರದೇಶಗಳಿಗೆ ಹೋಗಿ ವಿವಾಹವಾಗಬಹುದು.

ಎಲ್ಲಾ ನಿಟ್ಟಿನಲ್ಲಿ ನೋಡಿದಾಗಲೂ ಬಹುಪತಿತ್ವ ಪ್ರಕೃತಿ ವಿರುದ್ಧವೂ ಮಹಿಳಾ ವಿರೋಧಿಯೂ ಆಗಿದೆ. ಲೈಂಗಿಕ ಶೋಷಣೆಯ ಬಗ್ಗೆ  ಸಂಶೋಧನೆ ನಡೆಸಿರುವ ಮಾರ್ಡೋಕ್‌ನ ಅಧ್ಯಯನದ ಪ್ರಕಾರ, ಬಹುಪತಿತ್ವ ಸಂಸ್ಕೃತಿ ತೀರಾ ವಿರಳವಾಗಿದೆ. 1,170 ನಾಗರಿಕತೆಗಳ  ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸಿದಾಗ ಅದರಲ್ಲಿ ಕೇವಲ ಒಂದೇ ಒಂದು ನಾಗರಿಕತೆ ಮಾತ್ರ ಬಹುಪತಿತ್ವ ಅಂಗೀಕರಿಸಿತ್ತು. ಅದು  ಕೂಡಾ ಸಂಪೂರ್ಣ ಮಟ್ಟದಲ್ಲಾಗಿರಲಿಲ್ಲ.  ಭಾರತದಲ್ಲಿ ಬಹುಪತಿತ್ವ ಅನುಮತಿಸಿದ ಸಮುದಾಯ ಕೂಡಾ ಅದನ್ನು ಕೈಬಿಟ್ಟಿರುವುದು  ಅದು ಪ್ರಕೃತಿ ವಿರುದ್ಧವಾದುದು ಎಂಬ ಅನುಭವದಿಂದ ಎಂಬುದನ್ನು ನಾವು ಗಮನಿಸಬೇಕು. ಇಸ್ಲಾಮ್ ಪ್ರಕೃತಿದತ್ತವಾದ  ಧರ್ಮವಾಗಿದೆ. ಪ್ರಕ್ರತಿಗೆ ವಿರುದ್ಧವಾದ ಯಾವುದೇ ಆಶಯವನ್ನು ಇಸ್ಲಾಮ್ ಹೊಂದಿರುವುದಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *